ನ್ಯಾಯಾಲಯ ಆವರಣದಲ್ಲಿ ಪರಿಸರ ದಿನಾಚರಣೆ
ಮೈಸೂರು

ನ್ಯಾಯಾಲಯ ಆವರಣದಲ್ಲಿ ಪರಿಸರ ದಿನಾಚರಣೆ

June 6, 2020

ಮೈಸೂರು, ಜೂ. 5(ಆರ್‍ಕೆ)- ಮಳಲವಾಡಿಯ ನ್ಯಾಯಾಲಯದಲ್ಲಿ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಮಚಂದ್ರ ಡಿ. ಹುದ್ದಾರ ಅವರು ಮಳಲವಾಡಿಯ ನ್ಯಾಯಾಲಯದ ಆವರಣದಲ್ಲಿ ಆಯುರ್ವೇದ ಔಷಧೀಯ ಗಿಡಗಳಾದ ಬೆಟ್ಟದ ನೆಲ್ಲಿಕಾಯಿ, ನಾಗದೆಳೆ, ದೊಡ್ಡಪತ್ರ, ಆಲೋವೆರಾ, ಇರಳಿ ಸಂಪಿಗೆ ಸಸಿಗಳನ್ನು ನೆಟ್ಟು ನೀರೆರೆದರು. ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಪಿ. ದೇವಮಾನೆ, ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಸ್. ಆನಂದಕುಮಾರ್ ಸೇರಿದಂತೆ ಹಲವರು ಈ ಸಂದರ್ಭ ಉಪಸ್ಥಿತರಿದ್ದರು.

ಆಯುರ್ವೇದ ಕಾಲೇಜು: ಮೈಸೂರಿನ ಕೆಆರ್‍ಎಸ್ ರಸ್ತೆಯ ಸರ್ಕಾರಿ ಆಯುರ್ವೇದ, ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಮಹಾ ವಿದ್ಯಾಲಯದ ಆವರಣದಲ್ಲಿ ಯೋಗ ಗುರು ಯೋಗಾತ್ಮ ಶ್ರೀಹರಿ ಅವರು ಅಶೋಕ ಸಸಿ ನೆಡುವ ಮೂಲಕ ಪರಿಸರ ದಿನ ಆಚರಣೆಗೆ ಚಾಲನೆ ನೀಡಿದರು.

ಮುಡಾ ಉದ್ಯಾನವನ: ಸಾತಗಳ್ಳಿ ಬಸ್ ನಿಲ್ದಾಣದ ಸಮೀಪ ದೇವನೂರು 3ನೇ ಹಂತದ ಮುಡಾ ಪಾರ್ಕ್‍ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಗಿಡ ನೆಟ್ಟರು. ಅದೇ ರೀತಿ ಮೈಸೂರಿನ ಹಂಚ್ಯಾ, ದಟ್ಟಗಳ್ಳಿ, ವಿಜಯನಗರ ಸೇರಿದಂತೆ ಮುಡಾ ವ್ಯಾಪ್ತಿಯ ಹಲವು ಉದ್ಯಾನವನಗಳಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಡಲಾಯಿತು. ಶಾಸಕ ತನ್ವೀರ್‍ಸೇಠ್, ಡಿಸಿ ಅಭಿರಾಂ ಜಿ.ಶಂಕರ್, ಮುಡಾ ಆಯುಕ್ತ ಡಾ.ಡಿ.ಬಿ.ನಟೇಶ್, ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ, ಜಿಪಂ ಸಿಇಓ ಪ್ರಶಾಂತ್‍ಕುಮಾರ್ ಮಿಶ್ರಾ ಇದ್ದರು.

Translate »