ರೈಲ್ವೇ ಇಲಾಖೆಯಿಂದ ಪರಿಸರ ದಿನಾಚರಣೆ
ಮೈಸೂರು

ರೈಲ್ವೇ ಇಲಾಖೆಯಿಂದ ಪರಿಸರ ದಿನಾಚರಣೆ

June 6, 2020

ಮೈಸೂರು, ಜೂ.5(ಆರ್‍ಕೆ)-ಮೈಸೂರಿನ ಕೆಆರ್‍ಎಸ್ ರಸ್ತೆಯ ರೈಲ್ವೇ ಇಲಾಖೆ ಖಾಲಿ ಜಾಗದಲ್ಲಿ ಸಸಿ ನೆಡುವ ಮೂಲಕ ನೈರುತ್ಯ ರೈಲ್ವೇ ಅಧಿಕಾರಿಗಳು ಇಂದು ವಿಶ್ವ ಪರಿಸರ ದಿನವನ್ನು ಆಚರಿಸಿದರು.

ವಿಭಾಗೀಯ ರೈಲ್ವೇ ವ್ಯವಸ್ಥಾಪಕಿ ಅಪರ್ಣ ಗರ್ಗ್ ಅವರು ಸಿಲ್ವರ್ ಸ್ಟರ್ಸ್ ಗಿಡಗಳನ್ನು ನೆಟ್ಟು ನೀರೆರೆದರು. ರೈಲ್ವೇ ಮೈದಾನದಲ್ಲಿ ಹಾದು ಹೋಗಿರುವ ವಾಣಿವಿಲಾಸ ವಾಟರ್ ವಕ್ರ್ಸ್ ಕೊಳವೆಯಿಂದ ಸೋರಿಕೆಯಾಗುವ ನೀರಿನಿಂದ ಉಂಟಾಗಿದ್ದ ಅಶುಚಿತ್ವವನ್ನು ತೆರವುಗೊಳಿಸಿ ಶುಚಿಗೊಳಿಸಲಾಯಿತು. ವಾರಕ್ಕೆ ಕನಿಷ್ಠ 2 ಗಂಟೆ ಸ್ವಚ್ಛತೆಗಾಗಿ ವಿನಿಯೋಗಿಸಿ ತಮ್ಮ ಸುತ್ತಮುತ್ತ ಲಿನ ಪ್ರದೇಶದ ನೈರ್ಮಲ್ಯ ಕಾಪಾಡುತ್ತೇವೆ ಎಂದು ಅಪರ್ಣ ಗರ್ಗ್ ಅವರು ಸಿಬ್ಬಂದಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಪರಿಸರ ದಿನದ ಅಂಗವಾಗಿ ರೈಲ್ವೇ ಇಲಾಖೆಯಿಂದ 50ಕ್ಕೂ ಹೆಚ್ಚು ಸಿಲ್ವರ್ ಸ್ಟರ್ಸ್ ಗಿಡಗಳನ್ನು ನೆಡುವ ಮೂಲಕ ಸಿಬ್ಬಂದಿ ತಾವು ವಾಸಿಸುವ ಸ್ಥಳದ ಸುತ್ತಲಿನಲ್ಲಿ ಪರಿಸರ ಸಂರಕ್ಷಿಸುವ ಬಗ್ಗೆ ಜಾಗೃತಿ ಮೂಡಿಸಬೇಕೆಂದು ಅಪರ್ಣ ಗರ್ಗ್ ಸಲಹೆ ನೀಡಿದರು.

Translate »