ವಿಜಯಪುರದ ಗ್ರಾಮೀಣ ವಿದ್ಯಾರ್ಥಿ ಶ್ರೀಧರ್ ದೊಡ್ಡಮನಿ ಇಂಜಿನಿಯರಿಂಗ್, ಕೃಷಿಯಲ್ಲಿ ರಾಜ್ಯಕ್ಕೆ ಪ್ರಥಮ
ಮೈಸೂರು

ವಿಜಯಪುರದ ಗ್ರಾಮೀಣ ವಿದ್ಯಾರ್ಥಿ ಶ್ರೀಧರ್ ದೊಡ್ಡಮನಿ ಇಂಜಿನಿಯರಿಂಗ್, ಕೃಷಿಯಲ್ಲಿ ರಾಜ್ಯಕ್ಕೆ ಪ್ರಥಮ

June 2, 2018

ದಕ್ಷಿಣ ಕನ್ನಡದ ನಾರಾಯಣ ಪೈ, ಬಳ್ಳಾರಿಯ ದೇಬರ್ಸೋ ಸನ್ಯಾನಿಗೆ ಕ್ರಮವಾಗಿ ದ್ವಿತೀಯ, ತೃತೀಯ ಸ್ಥಾನ

ಬೆಂಗಳೂರು: ವಿಜಯ ಪುರದ ಗ್ರಾಮೀಣ ವಿದ್ಯಾರ್ಥಿ ಶ್ರೀಧರ್ ದೊಡ್ಡಮನಿ ಇಂಜಿನಿಯರಿಂಗ್ ಹಾಗೂ ಕೃಷಿ ಎರಡೂ ವಿಭಾಗಗಳಲ್ಲೂ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದ್ದಾರೆ. ಈ ಬಾರಿ ನಾಲ್ಕು ವಿಭಾಗಗಳಲ್ಲೂ ನಗರ ಪ್ರದೇಶ ಕ್ಕಿಂತ ಗ್ರಾಮೀಣ ವಿದ್ಯಾರ್ಥಿಗಳು ಉನ್ನತ ಶ್ರೇಣ ಪಡೆದಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಿವಿಧ ವೃತ್ತಿಪರ ಕೋರ್ಸ್ ಗಳಿಗೆ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ಪ್ರಕಟವಾಗಿದ್ದು, ಶ್ರೀಧರ್ ದೊಡ್ಡಮನಿ ಮೊದಲ ಶ್ರೇಯಾಂಕ ಗಳಿಸಿ ದರೆ, ನಾರಾಯಣ ಪೈ ದ್ವಿತೀಯ ರ್ಯಾಂಕ್ ಪಡೆದಿದ್ದಾರೆ. ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಂಜುಳಾ ಮತ್ತು ಕಾರ್ಯ ದರ್ಶಿ ರಾಜಕುಮಾರ್ ಕತ್ರಿ ಜಂಟಿ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದಲ್ಲದೆ, ಎಂಜಿನಿಯರಿಂಗ್ ವಿಭಾಗದಲ್ಲಿ 14,6,063 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.

ಉಳಿದಂತೆ ಕೃಷಿ ಪದವಿಗೆ 11,3,999, ಪಶು ಸಂಗೋಪನೆ 11,5,364, ಬಿ-ಫಾರ್ಮ್ ಕೋರ್ಸಿಗೆ ಮತ್ತು ಫಾರ್ಮ್-ಡಿ ಕೋರ್ಸಿಗೆ 14,7,543 ವಿದ್ಯಾರ್ಥಿಗಳು ಅರ್ಹತೆ ಪಡೆದಿ ದ್ದಾರೆ ಎಂದು ಪ್ರಕಟಿಸಿದರು. ಕಳೆದ ಏಪ್ರಿಲ್ 19ರಿಂದ 20ರಂದು ಸಿಇಟಿ ಪರೀಕ್ಷೆ ನಡೆದಿತ್ತು. ಈ ಬಾರಿ 1,98,639ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಕೃಷಿ ಕೋಟಾದಡಿ 83,302 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಓಇಇಖಿ, ಫಲಿತಾಂಶ ಬಂದ ನಂತರ ಅಂಕಗಳ ಆಧಾರದ ಮೇಲೆ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಭಾರತೀಯ ವೈದ್ಯ ಪದ್ಧತಿ ಹಾಗೂ ಹೋಮಿಯೋಪತಿ ಕೋರ್ಸುಗಳ ಪ್ರವೇಶಕ್ಕೆ ಪರಿಗಣ ಸಲಾಗುತ್ತದೆ ಎಂದರು.

ಇಂಜಿನಿಯರಿಂಗ್ ಟಾಪರ್ಸ್:1. ಶ್ರೀಧರ್ ದೊಡ್ಡಮನಿ, ಎಕ್ಸಲೆಂಟ್ ಸೈನ್ಸ್ ಕಾಲೇಜು ವಿಜಯಪುರ; 2. ನಾರಾಯಣ ಪೈ- ಶಾರದಾ ಇಂಡಿಪೆಂಡೆಂಟ್ ಪಿಯು ಕಾಲೇಜು ದಕ್ಷಿಣ ಕನ್ನಡ; 3. ದೇಬರ್ಶೋ ಸನ್ಯಾಸಿ – ಜಿಂದಾಲ್ ವಿದ್ಯಾ ಮಂದಿರ್, ಬಳ್ಳಾರಿ.

ಕೃಷಿ ಪದವಿ: 1. ಶ್ರೀಧರ್ ದೊಡ್ಡಮನಿ, ಎಕ್ಸಲೆಂಟ್ ಸೈನ್ಸ್ ಕಾಲೇಜು ವಿಜಯಪುರ; 2. ಶೈಕುಮಾರ್- ಚೇತನ ಇಂಡಿಪೆಂಡೆಂಟ್ ಪಿಯು ಕಾಲೇಜು, ಹುಬ್ಬಳ್ಳಿ ಧಾರವಾಡ; 3. ಮಹಿಮಾ ಕೃಷ್ಣ-ವಿವಿಎಸ್ ಸರ್ದಾರ್ ಪಟೇಲ್, ಬೆಂಗಳೂರು.
ಪಶುವೈದ್ಯ: 1. ವಿನೀತ್ ಮೆಗುರ್-ಎಕ್ಸ್‍ಪರ್ಟ್ ಪಿಯು ಕಾಲೇಜು, ಮಂಗಳೂರು; 2. ಅಪರೂಪ-ಸಂಕಲ್ಪ ಪಿಯು ಕಾಲೇಜು, ಬಳ್ಳಾರಿ; 3. ಆದಿತ್ಯ ಚಿದಾನಂದ-ಕುಮಾರನ್ ಚಿಲ್ರನ್ಸ್ ಹೋಮ್, ಬೆಂಗಳೂರು.
ಫಾರ್ಮ: 1. ತುಹೀನ್ ಗಿರಿನಾಥ್, ನಾರಾಯಣ ಇ ಟೆಕ್ನೋ ಬೆಂಗಳೂರು; 2. ಅನಿತಾ ಜೇಮ್ಸ್-ನ್ಯಾಷನಲ್ ಪಬ್ಲಿಕ್ ಸ್ಕೂಲ್, ಬೆಂಗಳೂರು; 3. ಯೋಗೇಶ್ ಮಾಧವ, ನಾರಾಯಣ ಇ ಟೆಕ್ನೋ, ಬೆಂಗಳೂರು.

Translate »