ಕೊನೆಗೂ ‘ಪವರ್’ ಕಳೆದುಕೊಂಡ ಡಿಕೆಶಿ, ಸಮನ್ವಯ ಸಮಿತಿ ಅಧ್ಯಕ್ಷರಾಗಿ ಸಿದ್ದರಾಮಯ್ಯ
ಮೈಸೂರು

ಕೊನೆಗೂ ‘ಪವರ್’ ಕಳೆದುಕೊಂಡ ಡಿಕೆಶಿ, ಸಮನ್ವಯ ಸಮಿತಿ ಅಧ್ಯಕ್ಷರಾಗಿ ಸಿದ್ದರಾಮಯ್ಯ

June 2, 2018

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಖಾತೆ ಹಂಚಿಕೆ ವಿವಾದ ಬಗೆಹರಿದಿದ್ದು, ಕೊನೆಗೂ ಡಿ.ಕೆ. ಶಿವಕುಮಾರ್ `ಪವರ್’ ಕಳೆದುಕೊಂಡಿದ್ದಾರೆ. ಹಣಕಾಸು, ಇಂಧನ (ಪವರ್), ಲೋಕೋಪಯೋಗಿಯಂತಹ ಪ್ರಮುಖ ಖಾತೆಗಳು ಜೆಡಿಎಸ್‍ಗೆ ದಕ್ಕಿವೆ. ಗೃಹ, ಬೃಹತ್ ನೀರಾ ವರಿ, ಬೆಂಗಳೂರು ನಗರಾಭಿವೃದ್ಧಿ, ಬೃಹತ್ ಕೈಗಾರಿಕೆ, ಕಂದಾಯ ಸೇರಿದಂತೆ ಇನ್ನಿತರೆ ಪ್ರಮುಖ ಖಾತೆಗಳು ಕಾಂಗ್ರೆಸ್ ಪಾಲಾಗಿವೆ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ. ಜಿ.ಪರ ಮೇಶ್ವರ್ ಹಾಗೂ ಪಕ್ಷದ ಮುಖಂಡರ

ಸಮ್ಮುಖ ದಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ರಾಜ್ಯದ ಕಾಂಗ್ರೆಸ್ ಉಸ್ತುವಾರಿ ಹೊಣೆ ಹೊತ್ತ ಕೆ.ಸಿ.ವೇಣುಗೋಪಾಲ್ ಮೈತ್ರಿ ಪಕ್ಷಗಳ ಒಪ್ಪಂದ ಹಾಗೂ ಖಾತೆ ಹಂಚಿಕೆ ಅಲ್ಲದೆ, ಸಮನ್ವಯ ಸಮಿತಿ ರಚನೆ ಕುರಿತಂತೆ ಮಾಹಿತಿ ನೀಡಿದರು.

ಕುಮಾರಸ್ವಾಮಿ ಅವರೇ ಐದು ವರ್ಷಗಳ ಅವಧಿಗೆ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಲಿದ್ದು, ಅವರ ನಾಯಕತ್ವದಲ್ಲೇ ಮೈತ್ರಿ ಸರ್ಕಾರದ ಸಾಮಾನ್ಯ ಕನಿಷ್ಠ ಕಾರ್ಯ ಕ್ರಮಗಳು ಜಾರಿಗೆ ಬರಲಿವೆ ಎಂದರು. ಸಮನ್ವಯ ಸಮಿತಿ ಅಧ್ಯಕ್ಷರಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇರಲಿದ್ದು, ಸದಸ್ಯರಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್, ಜೆಡಿಎಸ್‍ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್ ಅಲಿ ಹಾಗೂ ತಾವು ಇರುತ್ತೇವೆ. ಸರ್ಕಾರಕ್ಕೆ ಬಲ ನೀಡಲು ಈ ಸಮಿತಿ ಪ್ರತಿ ತಿಂಗಳು ಸಭೆ ಸೇರುವುದಲ್ಲದೆ, ಎಲ್ಲಾ ಪ್ರಮುಖ ನಿರ್ಧಾರಗಳನ್ನು ಸಮಿತಿಯಲ್ಲೇ ನಿರ್ಧರಿಸಲಾಗುವುದು. ಮಂತ್ರಿ ಮಂಡಲ ಸದಸ್ಯರು ಹಾಗೂ ಖಾತೆ ಹಂಚಿಕೆ ಆಗಿರುವಂತೆ ನಿಗಮ-ಮಂಡಳಿಗಳಲ್ಲೂ ಮೂರನೇ ಎರಡು ಭಾಗವನ್ನು ಕಾಂಗ್ರೆಸ್, ಉಳಿದ ಮೂರನೇ ಒಂದು ಭಾಗವನ್ನು ಜೆಡಿಎಸ್ ಪಡೆದುಕೊಳ್ಳಲಿದೆ ಎಂದು ವಿವರಸಿದರು.
ರೇವಣ್ಣ ಜೊತೆ ಮಾತನಾಡಕ್ಕೆ

ನಾನು ಮೆಂಟಲ್ ಗಿರಾಕಿ ಅಲ್ಲ!

ಬೆಂಗಳೂರು: ಕಾಂಗ್ರೆಸ್‍ಗೆ ಬೇಕಾದರೆ ನನ್ನನ್ನು ಉಳಿಸಿ ಕೊಳ್ಳುತ್ತಾರೆ. ಇಲ್ಲದಿದ್ದರೆ ಇಲ್ಲ. 78 ಶಾಸಕರಲ್ಲಿ ನಾನೂ ಒಬ್ಬ ಅಷ್ಟೇ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹತಾಶ ನುಡಿಯಾಡಿದ್ದಾರೆ. ಇಂದಿಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮನೆಯಲ್ಲಿ ಕೆಲವರನ್ನು ಕುರ್ಚಿ ಮೇಲೆ ಕೂರಿಸಲು ಇಟ್ಟುಕೊಂಡಿರುತ್ತೇವೆ. ಕೆಲವರನ್ನು ಕಸ ಗುಡಿಸಲು ಇಟ್ಟುಕೊಂಡಿರುತ್ತೇವೆ. ಹಾಗೆ ನನಗೆ ವಾಚ್‍ಮನ್ ಕೆಲಸ ಕೊಟ್ಟಿದ್ದರು. ಅಂದರೆ ಆ ಕೆಲಸ ನಂಬಿಕಸ್ತ ಕೆಲಸ. ಪಕ್ಷ ಕೊಟ್ಟ ಕೆಲಸವನ್ನು ಮಾಡಿದ್ದೇನೆ. ಮುಂದೆ ಏನಾಗುತ್ತೋ ನೋಡೋಣ. ಎಲ್ಲದ್ದಕ್ಕೂ ಕಾಲವೇ ಉತ್ತರ ಕೊಡಲಿದೆ ಎಂದರು. ಹೆಚ್.ಡಿ.ರೇವಣ್ಣ ವಿರುದ್ಧ ಕಿಡಿಕಾರಿದ ಅವರು, ರೇವಣ್ಣ ಅವರನ್ನು ನನ್ನ ಜೊತೆ ಹೋಲಿಕೆ ಮಾಡಬೇಡಿ. ಅವರು ಜೆಡಿಎಸ್ ಶಾಸಕರು, ದೊಡ್ಡ ಮನುಷ್ಯರು, ಅವರು ಸಿಎಂ ಆಗಲಿ, ಎಲ್ಲಾ ಖಾತೆಗಳನ್ನು ಅವರೇ ಇಟ್ಟುಕೊಳ್ಳಲಿ ಎಂದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ನನಗೆ ರೇವಣ್ಣನವರ ಸಹವಾಸವೇ ಬೇಡ. ಕೈಮುಗಿಯುತ್ತೇನೆ, ಅವರ ಜೊತೆ ಮಾತನಾಡುವುದಕ್ಕೆ ನಾನೇನು ಮೆಂಟಲ್ ಗಿರಾಕಿ ಅಲ್ಲ. ಏನಿದ್ದರೂ ನಮ್ಮ ಪಕ್ಷದವರ ಜೊತೆ ಮಾತನಾಡುತ್ತೇನೆ ಎಂದರು.

Translate »