ಬದಲಾದ ಜೀವನ ಶೈಲಿ, ಆಹಾರ ಪದ್ಧತಿಯಿಂದ ಜನರಲ್ಲಿ ಅನಾರೋಗ್ಯ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಸಿಎಫ್‌ಟಿಆರ್‌ಐ ವಿಶ್ರಾಂತ ನಿರ್ದೇಶಕ ಪ್ರಕಾಶ್ ವಿಷಾದ
ಮೈಸೂರು

ಬದಲಾದ ಜೀವನ ಶೈಲಿ, ಆಹಾರ ಪದ್ಧತಿಯಿಂದ ಜನರಲ್ಲಿ ಅನಾರೋಗ್ಯ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಸಿಎಫ್‌ಟಿಆರ್‌ಐ ವಿಶ್ರಾಂತ ನಿರ್ದೇಶಕ ಪ್ರಕಾಶ್ ವಿಷಾದ

November 27, 2021

ಮೈಸೂರು,ನ.೨೬(ಎಂಟಿವೈ)- ಬದಲಾದ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ಜನರು ಹಲವು ಆರೋಗ್ಯ ಸಮಸ್ಯೆಗೆ ತುತ್ತಾಗುತ್ತಿದ್ದು, ಇನ್ನಾದರೂ ಹಿತಮಿತ ವಾಗಿ ಆಹಾರ ಸೇವಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳುವಂತೆ ಸಿಎಫ್‌ಟಿಆರ್‌ಐ ವಿಶ್ರಾಂತ ನಿರ್ದೇಶಕ ಡಾ.ವಿ.ಪ್ರಕಾಶ್ ಸಲಹೆ ನೀಡಿದ್ದಾರೆ. ಮೈಸೂರಿನ ಮಾನಸಗಂಗೋತ್ರಿಯಲ್ಲಿ ರುವ ರಾಣ ಬಹದ್ದೂರ್ ಸಭಾಂಗಣದಲ್ಲಿ ಗುರುವಾರ ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರ, ಮಹಾರಾಜ ಕಾಲೇಜಿನ ಆಹಾರ ಮತ್ತು ಪೋಷಣ ವಿಭಾಗ, ಅಂತರರಾಷ್ಟಿçÃಯ ಒಕ್ಕೂಟ ಆಯುರ್ವೇದ ಪೋಷಣೆ ಮತ್ತು ಆಹಾರ ತಂತ್ರಜ್ಞಾನ, ಮೈಸೂರು ಸೈನ್ಸ್ ಫೌಂಡೇಷನ್ ಸಂಯುಕ್ತಾಶ್ರಯದಲ್ಲಿ ೬ನೇ ರಾಷ್ಟಿçÃಯ ಆಯುರ್ವೇದ ದಿನದ ಅಂಗವಾಗಿ ಆಯೋಜಿಸಿದ್ದ ಹಿತಾಹಾರ, ಪಾರಂಪರಿಕ ಆಹಾರ ಪದ್ಧತಿಗಳ ರಾಷ್ಟಿçÃಯ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಾವುಗಳು ಆರೋಗ್ಯ ವಾಗಿರಬೇಕಾದರೆ ದೇಹ ಮತ್ತು ಮಾನಸಿಕ ಸ್ವಾಸ್ಥö್ಯವನ್ನು ಉತ್ತಮವಾಗಿಟು ್ಟಕೊಳ್ಳಬೇಕು. ಭಾರತೀಯ ಪರಂಪರೆಯಲ್ಲಿ ಆಹಾರಕ್ಕೆ ತನ್ನದೇ ಆದ ಮೌಲ್ಯಗಳಿವೆ. ಇಂದಿನ ಪೀಳಿಗೆ ಪಾರಂಪರಿಕ ಆಹಾರ ವನ್ನು ಉಳಿಸಿಕೊಳ್ಳುವ ಅಗತ್ಯವಿದೆ. ಆಯುರ್ವೇ ದದಲ್ಲಿ ಆಹಾರವು ಹೇಗೆ ಇರಬೇಕು ಎಂಬುದನ್ನು ತಿಳಿಸಿಕೊಟ್ಟಿದೆ. ಅದರಲ್ಲಿ ಸ್ವಚ್ಛ, ಶುದ್ಧ, ಸುರಕ್ಷಾ, ಸ್ವಾದಿಷ್ಟ, ಸಾತ್ವಿಕ, ಸಂಸ್ಕರಿತ, ಸುಪಚ್ಯ, ಸ್ವಾರಸ್ಯ, ಸುಪಥ್ಯ, ಸ್ವಾಸ್ಥö್ಯ, ಸೌಖ್ಯ, ಶ್ರೇಷ್ಠ, ಸಂಪೂರ್ಣ ಹೀಗೆ ೧೬ ಆಹಾರದ ಗುಣಗಳನ್ನು ತಿಳಿಸಿಕೊಟ್ಟಿದೆ. ಇದನ್ನು ೨ ಸಾವಿರ ವರ್ಷಗಳ ಹಿಂದೆಯೇ ಆಯುರ್ವೇದ ನಮಗೆ ತಿಳಿಸಿದೆ. ನಾವು ಈ ಕ್ರಮವನ್ನು ಅನುಸರಿಸಿದಲ್ಲಿ ಆರೋಗ್ಯ ವಂತರಾಗಬಹುದು ಎಂದು ಅಭಿಪ್ರಾಯ ಪಟ್ಟರು. ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಮಾತನಾಡಿ, ಶತ ಶತಮಾನಗಳಿಂದಲೂ ಆಯುರ್ವೇದ ವೈದ್ಯ ಪದ್ಧತಿ ನಮ್ಮ ದೇಶದಲ್ಲಿ ಪ್ರಚಲಿತದಲ್ಲಿತ್ತು. ಇದೀಗ ಆಯುರ್ವೇದ ಎಂಬುದು ವಿಶ್ವದ ಎಲ್ಲೆಡೆ ಪಸರಿಸಿದೆ. ಆಯುರ್ವೇದದ ಮಹತ್ವ ಪಾಶ್ಚಾತ್ಯ ದೇಶಗಳ ಜನರು ಅರಿಯುತ್ತಿದ್ದಾರೆ. ಅಲ್ಲದೆ ಹಲವು ಮಂದಿ ಆಯುರ್ವೇಧ ಚಿಕಿತ್ಸಾ ಪದ್ಧತಿಗೆ ಮಾರುಹೋಗುತ್ತಿದ್ದಾರೆ. ಇದು ನಮ್ಮ ದೇಶಕ್ಕೆ ಹೆಮ್ಮೆ ಪಡುವ ಸಂಗತಿ ಎಂದು ತಿಳಿಸಿದರು.

ಆಯುಷ್‌ನ ನಿವೃತ್ತ ಅಧಿಕಾರಿ ಡಾ.ಎನ್.ಅಂಜನಮೂರ್ತಿ, ಜೆಎಸ್‌ಎಸ್ ಹಿರಿಯ ಆಯುರ್ವೇದ ವೈದ್ಯಾಧಿಕಾರಿ ಡಾ.ಬಿ.ಗುರುಬಸವರಾಜ್, ಡಾ.ಎಸ್. ಚಂದ್ರಶೇಖರ್ ಅವರು ಪಾರಂಪರಿಕ ಆಹಾರ ಪದ್ದತಿಗಳಲ್ಲಿ ಆರೋಗ್ಯ ವಿವೇಚನೆ, ಆರೋಗ್ಯಕ್ಕಾಗಿ ಆಹಾರ, ಸ್ವಾಸ್ಥö್ಯಕ್ಕಾಗಿ ಆಯುರ್ವೇದ ಕುರಿತು ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ರಾಜ್ಯ ಆಯುರ್ವೇದ ಸಂಶೋಧನಾ ಮಂಡಳಿಯ ಸಹಾಯಕ ನಿರ್ದೇಶಕ ಡಾ.ಲಕ್ಷಿö್ಮನಾರಾಯಣ ಶೆಣೈ, ಯುವರಾಜ ಕಾಲೇಜಿನ ಡಾ.ಆರ್. ಶೇಖರ್‌ನಾಯಕ್, ಡಾ.ಎಂ.ಎಸ್. ಮಹೇಶ್, ಜಿ.ಬಿ.ಸಂತೋಷ್‌ಕುಮಾರ್, ವಿಶ್ವನಾಥ್ ಶೇಷಾಚಲ ಮತ್ತಿತರರು ಉಪಸ್ಥಿತರಿದ್ದರು.

 

Translate »