ಜಂತಗಳ್ಳಿಯಲ್ಲಿ ಲಕ್ಷಿö್ಮÃದೇವಿ, ಬಸವೇಶ್ವರ, ಮಾರಮ್ಮ ದೇವಾಲಯಗಳ ಉದ್ಘಾಟಿಸಿದ ಸಿದ್ದರಾಮಯ್ಯ
ಮೈಸೂರು,ನ.೨೬(ಎಂಟಿವೈ)- ದೇವರು ಎಲ್ಲೆಲ್ಲೂ ಇದ್ದಾನೆ. ಒಳ ಗೊಂದು ಹೊರಗೊಂದು ಭಾವನೆಯಿ ಲ್ಲದೆ ಶುದ್ಧ ಮನಸ್ಸಿನಿಂದ ಬೇಡಿಕೊಂಡಾಗ ಮಾತ್ರ ಒಳ್ಳೆಯದ್ದಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿ ಪ್ರಾಯಪಟ್ಟಿದ್ದಾರೆ. ಎರಡು ದಿನಗಳ ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿ ರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಶುಕ್ರವಾರ ಮಧ್ಯಾಹ್ನ ಬೆಂಗಳೂರಿAದ ಆಗಮಿಸಿ ವರುಣಾ ಕ್ಷೇತ್ರದ ಜಂತಗಳ್ಳಿ ಯಲ್ಲಿ ಲಕ್ಷಿö್ಮÃದೇವಿ, ಬಸವೇಶ್ವರ ಮತ್ತು ಮಾರಮ್ಮ ದೇವಸ್ಥಾನದ ಟ್ರಸ್ಟ್ ವತಿಯಿಂದ ನೂತನವಾಗಿ ನಿರ್ಮಿಸಿರುವ ದೇವಾಲಯ ಗಳÀನ್ನು ಉದ್ಘಾಟಿಸಿದ ಬಳಿಕ ಮಾತನಾಡಿದರು. ೧೫ ತಿಂಗಳ ಹಿಂದೆ ನಾನು ಬಂದು ಗುದ್ದಲಿ ಪೂಜೆ ಮಾಡಿದ್ದೆ. ಕಡಿಮೆ ಅವಧಿಯಲ್ಲಿಯೇ
ಸುಮಾರು ೧ ಕೋಟಿ ರೂ. ವೆಚ್ಚದಲ್ಲಿ ಗ್ರಾಮಸ್ಥರು ಹಾಗೂ ದಾನಿ ಗಳ ಸಹಕಾರದಿಂದ ಸುಂದರವಾದ ದೇವಾಲಯ ನಿರ್ಮಿಸಿರುವುದು ಶ್ಲಾಘನೀಯ.
ದಾನಿಗಳ ಉದಾರತೆಯ ಭಾವ ಮೆಚ್ಚುವಂತದ್ದು ಎಂದರು. ದೇವರನ್ನು ಶುದ್ಧವಾದ ಮನಸ್ಸು ಮತ್ತು ಭಕ್ತಿಯಿಂದ ಪೂಜೆ ಮಾಡಿ ನನಗೆ ಮಾತ್ರ ಒಳ್ಳೆಯದಾಗಲಿ, ಬೇರೆಯವರಿಗೆ ಕೆಟ್ಟದ್ದಾಗಲಿ ಎಂದು ಕೇಳಬೇಡಿ, ಎಲ್ಲ ರಿಗೂ ಒಳ್ಳೆಯದಾಗಲಿ ಎಂದು ದೇವರಲ್ಲಿ ಬೇಡಿಕೊಳ್ಳಿರಿ. ನಿಮಗೂ ಒಳ್ಳೆಯದಾಗು ತ್ತದೆ. ದೇವನೊಬ್ಬ ನಾಮ ಹಲವು ಎಂಬAತೆ ಬೇರೆ ಬೇರೆ ಹೆಸರುಗಳಿಂದ ದೇವರನ್ನು ಪೂಜಿಸುತ್ತಾರೆ. ಸತ್ಯವೇ ಸ್ವರ್ಗ, ಮಿಥ್ಯವೇ ನರಕ ಎಂಬAತೆ. ಪ್ರತಿಯೊಬ್ಬರು ಸತ್ಯದಿಂದ ನಡೆಯಬೇಕು. ಅದೇ ಸ್ವರ್ಗ, ಸುಳ್ಳನ್ನು ಹೇಳಬಾರದು ಪ್ರತಿಯೊಬ್ಬರು ಅಣ್ಣ ತಮ್ಮಂದಿರAತೆ ಬಾಳಬೇಕು. ಆಗ ದೇವರು ಮೆಚ್ಚುತ್ತಾನೆ, ನಿಮಗೂ ಮತ್ತು ನಿಮ್ಮ ಕುಟುಂಬಕ್ಕೂ ಒಳ್ಳೆಯದು ಮಾಡು ತ್ತಾನೆ ಎಂದರು. ನಂತರ ಆಯರಹಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ ಮಾರಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಡಾ. ಯತೀಂದ್ರ ಸಿದ್ಧರಾಮಯ್ಯ, ಅನಿಲ್ ಚಿಕ್ಕಮಾದು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಎಂ. ರಾಮಯ್ಯ, ಮಾಧ್ಯಮ ಸಂಯೋಜಕ ಎ.ಸಿ. ಪ್ರಭಾಕರ್, ಜಿ.ಪಂ. ಮಾಜಿ ಅಧ್ಯಕ್ಷ ಕೆ.ಮರೀಗೌಡ ಎ.ಪಿ.ಎಂ.ಸಿ. ಅಧ್ಯಕ್ಷ ಬಸವರಾಜು, ಮಾಜಿ ಅಧ್ಯಕ್ಷ ಹೊಸಹುಂಡಿ ರಘು, ತಾ.ಪಂ. ಮಾಜಿ ಸದಸ್ಯ ಸಿ.ಎಂ. ಸಿದ್ದರಾಮೇಗೌಡ, ಎಂ.ಟಿ. ರವಿಕುಮಾರ್, ವೆಂಕಟಪ್ಪ, ನಾಡನಹಳ್ಳಿ ರವಿ, ಮಾಕನ ಹುಂಡಿ ಗುಡ್ಡಪ್ಪ, ರವಿ, ಕುಂಬ್ರಳ್ಳಿ ಮಠ ಮಹಾದೇವ, ಉತ್ತನಹಳ್ಳಿ ಶಿವಣ್ಣ ಇನ್ನಿತರರು ಪಾಲ್ಗೊಂಡಿದ್ದರು.