ವಿಶಿಷ್ಟ ರೀತಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಹುತಾತ್ಮ ಯೋಧರ ತಾಯಂದಿರು, ಪತ್ನಿಯರಿಗೆ ಸನ್ಮಾನ
ಮೈಸೂರು

ವಿಶಿಷ್ಟ ರೀತಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಹುತಾತ್ಮ ಯೋಧರ ತಾಯಂದಿರು, ಪತ್ನಿಯರಿಗೆ ಸನ್ಮಾನ

November 27, 2021

ಮನೋಭಾವ ಬದಲಾಗಬೇಕು
ದೇಶ ಕಾಯುವ ಸಂದರ್ಭದಲ್ಲಿ ಭಯೋ ತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ನನಗೆ ನಾಲ್ಕು ಕಡೆ ಗುಂಡು ತಗುಲಿ ಬೆನ್ನು ಹುರಿ (ಸ್ಪೆöÊನಲ್ ಕಾರ್ಡ್)ಗೆ ಹಾನಿಯಾಗಿ ಕಳೆದ ೨ ವರ್ಷದಿಂದ ನಡೆಯಲಾಗದೆ ಮನೆಯಲ್ಲಿಯೇ ಇದ್ದೇನೆ. ದೇಶಕ್ಕಾಗಿ ಹೋರಾಡಿದ ಹೆಮ್ಮೆ ನನಗಿದೆ. ಇಂದು ಒಬ್ಬ ಯೋಧ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದರೆ ವಾಟ್ಸಾಪ್‌ಗಳಲ್ಲಿ ರಿಪ್ ಎಂಬ ಮೂರಕ್ಷರದ ಸಂದೇಶ ಹಾಕಿ ಸುಮ್ಮನಾಗುತ್ತಾರೆ. ಆದರೆ ಸೆಲೆಬ್ರಿಟಿಗಳು ನಿಧನರಾದರೆ ಹೆಚ್ಚಿನ ಲೈಕ್ ಕೊಡುವ ಜೊತೆಗೆ ವಾಟ್ಸಾಪ್‌ನಲ್ಲಿ ಉದ್ದುದ್ದದ ಬರವಣ ಗೆ ಇರುತ್ತದೆ. ಇಂತಹ ಮನೋಭಾವನೆ ಬದಲಾಗಬೇಕು. ದೇಶಕ್ಕೆ ಬಲಿದಾನ ಮಾಡಿದವರನ್ನು ಸ್ಮರಿಸಬೇಕು. – ಬಿ.ನಾಯಕ್ ರಮೇಶ್,
ಮಾಜಿ ಸೈನಿಕ

ಮೈಸೂರು, ನ.೨೬(ಆರ್‌ಕೆಬಿ)- ಭಾರತೀಯ ವೀರ ಯೋಧರ ತಾಯಂದಿರು ಮತ್ತು ಪತ್ನಿಯರಿಗೆ ಸನ್ಮಾನಿಸುವ ಮೂಲಕ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ರಕ್ಷಣಾ ಸಮಿತಿಯು ಶುಕ್ರವಾರ ಕನ್ನಡ ರಾಜ್ಯೋತ್ಸವವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿತು.

ಮೈಸೂರಿನ ಇಂಜಿನಿಯರುಗಳ ಸಂಸ್ಥೆ ಸಭಾಂಗಣ ದಲ್ಲಿ ವೀರ ಹುತಾತ್ಮ ಯೋಧ ಹೇಮಚಂದು ಅವರ ತಾಯಿ ವಿಜಯನಗರದ ಲಕ್ಷಿö್ಮÃ, ಸಕ್ರಿಯಾ ನಾಯಕ್ ಅವರ ಪತ್ನಿ ಯರಗನಹಳ್ಳಿಯ ಜ್ಯೋತಿಬಾಯಿ, ಎ.ಪಿ.ಪ್ರಶಾಂತ್ ಅವರ ತಾಯಿ ಸಿದ್ದಾರ್ಥನಗರದ ಸರೋಜಾ, ಜಿ.ಶರತ್ ಅವರ ತಾಯಿ ವಸಂತನಗರದ ಬಾಲಮಣ , ಎನ್.ಎಸ್.ಮಹೇಶ್ ಅವರ ತಾಯಿ ಕೆ.ಆರ್. ನಗರ ತಾಲೂಕಿನ ನಾರಾಯಣಪುರದ ರತ್ನಮ್ಮ, ಅಶೋಕ್ ಪಿ ಅವರ ಕುಟುಂಬದವರಾದ ಮೈಸೂರು ಬೃಂದಾವನ ಬಡಾವಣೆಯ ತ್ರಿವೇಣ , ರಮೇಶ್ ಪಾಟಿಲ್ ಅವರ ಪತ್ನಿ ಮೈಸೂರು ಬೋಗಾದಿಯ ಲಕ್ಷಿö್ಮ ಮಾಲಿ ಪಾಟಿಲ್, ಎಸ್.ವಾಸು ಕುಟುಂಬದವರಾದ ಮೈಸೂರಿನ ಕಾವೇರಿ, ಬಿ.ಕೆ.ಸಧೀರ್ ಅವರ ತಾಯಿ ಮಂಡ್ಯ ಜಿಲ್ಲೆಯ ವಿಮಲಾ, ಎನ್.ಸುಂದರ್ ಅವರ ತಾಯಿ ಹೆಚ್.ಡಿ.ಕೋಟೆ ತಾಲೂಕಿನ ಮಹದೇವಿ ಹಾಗೂ ಮಾಜಿ ಸೈನಿಕ ಬಿ.ನಾಯಕ್ ರಮೇಶ್ ಅವರನ್ನು ಅಭಿನಂದಿಸಲಾಯಿತು.

ಸಮಾರAಭದ ಅಧ್ಯಕ್ಷತೆ ವಹಿಸಿದ್ದ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಮಾತನಾಡಿ, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹುತಾತ್ಮ ಯೋಧ ರಿಗೆ ಮತ್ತು ಅವರ ತಾಯಂದಿರು, ಪತ್ನಿಯರಿಗೆ ಅಭಿ ನಂದಿಸಿರುವ ಸಮಿತಿಯ ಕಾರ್ಯವನ್ನು ಶ್ಲಾಘಿಸಿದರು. ಅತ್ಯಂತ ಪ್ರಾಚೀನ ಭಾಷೆ. ಹೊರ ರಾಜ್ಯಗಳಿಂದ ಬಂದಿರುವ ಕನ್ನಡೇತರರಿಗೆ ಕನ್ನಡ ಕಲಿಸುವುದು ಕನ್ನಡ ಸಂಘಟನೆಗಳ ಕರ್ತವ್ಯ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮೇಯರ್ ಸುನಂದಾ ಪಾಲನೇತ್ರ ಅವರು ಹುತಾತ್ಮ ಯೋಧರ ಕುಟುಂಬದವರಿಗೆ ಶಾಲು ಹೊದಿಸಿ, ನೆನಪಿನ ಕಾಣ ಕೆ ನೀಡಿ ಅಭಿನಂದಿಸಿ ಮಾತನಾಡಿ, ಹುತಾತ್ಮ ಯೋಧರ ತಾಯಂದಿರು, ಪತ್ನಿಯರನ್ನು ಅಭಿನಂದಿಸುವ ಮೂಲಕ ಅವರ ನೋವಿನಲ್ಲಿ ನಾವೂ ಭಾಗಿಯಾಗಿದ್ದೇವೆ. ಮೈಸೂರಿ ನಲ್ಲಿ ಕನ್ನಡ ಭಾಷೆಯ ನಾಮಫಲಕಗಳ ಕಡ್ಡಾಯಕ್ಕೆ ಪಾಲಿಕೆ ನಿರ್ಧಾರ ಕೈಗೊಂಡಿದೆ. ಶೇ.೬೦ರಷ್ಟು ನಾಮ ಫಲಕ ಕನ್ನಡದಲ್ಲಿಯೇ ಇರಬೇಕು. ಅದಕ್ಕೆ ಪಾಲಿಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಮಾಜ ಸೇವಕ ಕೆ.ಎಸ್. ರಾಜೇಶ್, ರಾಷ್ಟçಕ್ರಾಂತಿ ಫೌಂಡೇಷನ್ ಅಧ್ಯಕ್ಷ ಜಿ.ಎಂ. ಮಹದೇವ, ವರುಣಾ ಡೈರಿ ಅಧ್ಯಕ್ಷ ವಿ.ಜಿ.ಮಲ್ಲೇಶ್, ಕನ್ನಡಾಂಬೆ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ರಾಜಶೇಖರ್, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ರಕ್ಷಣಾ ಸಮಿತಿ ರಾಜ್ಯಾಧ್ಯಕ್ಷೆ ವಿ.ಪಿ.ಸುಶೀಲಾ, ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಪುಟ್ಟರಾಜು, ಇತರೆ ಪದಾಧಿಕಾರಿಗಳಾದ ಮೊಹಮ್ಮದ್ ಅಶ್ರಫ್, ಭಾಗ್ಯಮ್ಮ, ಎಂ.ಮಾದೇಶ್ ಇನ್ನಿತರರು ಉಪಸ್ಥಿತರಿದ್ದರು.

Translate »