ರಂಗಾಯಣ ಕಲಾವಿದರ `ಸೂತ್ರಧಾರ’ ನಾಟಕದ ಯಶಸ್ವಿ ಪ್ರದರ್ಶನ
ಮೈಸೂರು

ರಂಗಾಯಣ ಕಲಾವಿದರ `ಸೂತ್ರಧಾರ’ ನಾಟಕದ ಯಶಸ್ವಿ ಪ್ರದರ್ಶನ

November 27, 2021
  • ಸಂವಿಧಾನ ದಿನಾಚರಣೆ ಅಂಗವಾಗಿ ಸಂವಿಧಾನದ ಆಶಯ ಆಧಾರಿತ ನಾಟಕ
  • ವಿದ್ಯಾರ್ಥಿಗಳಿಂದ ಕಿಕ್ಕಿರಿದು ತುಂಬಿದ್ದ ಸೆನೆಟ್ ಭವನ

ಮೈಸೂರು, ನ.೨೬(ಆರ್‌ಕೆಬಿ)- ಸಂವಿಧಾನ ದಿನಾಚರಣೆ ಅಂಗವಾಗಿ ಮೈಸೂರು ವಿಶ್ವ ವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋ ಧನಾ ಹಾಗೂ ವಿಸ್ತರಣಾ ಕೇಂದ್ರ ಮತ್ತು ರಂಗಾಯಣ ಜಂಟಿಯಾಗಿ ಸೆನೆಟ್ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಸಂವಿಧಾನ ಆಶಯ ಕುರಿತ `ಸೂತ್ರ ಧಾರ’ ನಾಟಕ ಪ್ರದರ್ಶನ ಒಂದು ವಿಭಿನ್ನ ಪ್ರಯೋಗ.

ಎಸ್.ರಾಮನಾಥ ರಚನೆಯ ಸಂವಿಧಾನ ಆಶಯ ಆಧಾರಿತ ಒಂದೂವರೆ ಗಂಟೆಗಳ `ಸೂತ್ರಧಾರ’ ನಾಟಕ ವನ್ನು ಮಹೇಶ ಕಲ್ಲತ್ತಿ ನಿರ್ದೇಶನದಲ್ಲಿ ಮೈಸೂರು ರಂಗಾಯಣದ ೧೫ ಮಂದಿ ಕಲಾವಿದರು ಅಭಿನಯಿಸಿದರು.
ರಂಗಾಯಣವು ಬೀದರ್‌ನಿಂದ ಚಾಮರಾಜನಗರದವರೆಗಿನ ಆಸಕ್ತ ಕಲಾವಿದರನ್ನು ಆಯ್ಕೆ ಮಾಡಿಕೊಂಡು ಸಿದ್ಧಪಡಿಸಿದ ಈ ನಾಟಕ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯ ಗಳನ್ನು ಎಲ್ಲರಿಗೂ ತಿಳಿಯ ಪಡಿಸುವ ಪ್ರಯತ್ನವಾಗಿದೆ.

ಸಮಾನತೆ, ಭ್ರಾತೃತ್ವ, ಎಲ್ಲರಿಗೂ ಆರ್ಥಿಕ, ಶೈಕ್ಷಣ ಕ ಹಕ್ಕುಗಳನ್ನು ಕೊಡುವುದು ಇತ್ಯಾದಿ ಸಂದೇಶ ಗಳನ್ನು ಜನರ ಮುಂದಿಡುವಲ್ಲಿ ಸಫಲ ವಾಗಿದೆ. ಡಾ.ಬಿ.ಆರ್. ಅಂಬೇಡ್ಕರ್ ಪಾತ್ರದಲ್ಲಿ ಸುಭಾಷ್ ಅಭಿನಯ ಎಲ್ಲರ ಗಮನ ಸೆಳೆಯಿತು. ಉಳಿದಂತೆ ಎಲ್ಲ ಕಲಾವಿದರು ತಮ್ಮ ಪಾತ್ರಕ್ಕೆ ಜೀವ ತುಂಬುವ ಮೂಲಕ ಹೀಗೂ ಒಂದು ನಾಟಕ ನೀಡಬಹುದು ಎಂಬುದನ್ನು ತೋರಿಸಿಕೊಟ್ಟರು.
ಮೈಸೂರಿನ ಮಾನಸಗಂಗೋತ್ರಿಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣ (ಸೆನೆಟ್ ಭವನ) ದಲ್ಲಿ ಎಲ್ಲಾ ಆಸನಗಳು ಭರ್ತಿ ಯಾಗಿ ಹೆಚ್ಚುವರಿ ಆಸನ ಗಳನ್ನು ಇರಿಸಿದ್ದರಿಂದ ಸಭಾ ಂಗಣ ವಿದ್ಯಾರ್ಥಿಗಳಿಂದ ಕಿಕ್ಕಿರಿದು ಭರ್ತಿಯಾಗಿತ್ತು.

ಮೈಸೂರು ವಿವಿ ಕುಲ ಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅವರು ಸಂವಿ ಧಾನದ ಪೀಠಿಕೆಯ ಮೊದಲ ಸಾಲುಗಳನ್ನು ಓದುವ ಮೂಲಕ ಸಭಾಂಗಣದಲ್ಲಿದ್ದ ಎಲ್ಲರಿಗೂ ಪ್ರಮಾಣವಚನ ಬೋಧಿಸುವ ಮೂಲಕ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿದರು. ಕುಲ ಸಚಿವ ಪ್ರೊ.ಆರ್.ಶಿವಪ್ಪ, ರಂಗಾಯಣ ಜಂಟಿ ನಿರ್ದೇ ಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರದ ನಿರ್ದೇಶಕ ಡಾ.ಎಸ್.ನರೇಂದ್ರಕುಮಾರ್, ಪ್ರಾಧ್ಯಾಪಕ ಜೆ.ಸೋಮಶೇಖರ್, ಬೌದ್ಧ ಬಿಕ್ಕು ಕಲ್ಯಾಣ ಬಂತೇಜಿ ಇನ್ನಿತರರು ಉಪಸ್ಥಿತರಿದ್ದರು.

Translate »