ಟಿಪ್ಪುವಿನ ಬಗ್ಗೆ ಈಗ ನಾವು ಸತ್ಯ ಹೇಳಿದರೆ ಅದು ವಿವಾದವಾಗುತ್ತದೆ
ಮೈಸೂರು

ಟಿಪ್ಪುವಿನ ಬಗ್ಗೆ ಈಗ ನಾವು ಸತ್ಯ ಹೇಳಿದರೆ ಅದು ವಿವಾದವಾಗುತ್ತದೆ

November 27, 2021

ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ವಿಷಾದ ಇದುವರೆಗೆ ಸುಳ್ಳನ್ನೇ ಹೇಳುತ್ತಾ ಸತ್ಯವೆಂದು ನಂಬಿಸಲಾಗಿದೆ
ನಾಲ್ಕು ದಿನದ ನಾಟಕೋತ್ಸವಕ್ಕೆ ಚಾಲನೆ; ಎಂ.ಆರ್.ಶ್ರೀನಿವಾಸ ಮೂರ್ತಿಯವರ `ಧರ್ಮ ದುರಂತ’ ಪುಸ್ತಕ ಬಿಡುಗಡೆ

ಸ.ರ.ಸುದರ್ಶನ ಮಾತಿಗೆ ಪ್ರೇಕ್ಷಕರ ಆಕ್ಷೇಪ
ಟಿಪ್ಪು ಸುಲ್ತಾನ್ ಇತಿಹಾಸದ ಒಂದು ಭಾಗವನ್ನು ಮಾತ್ರ ಅಡ್ಡಂಡ ಸಿ.ಕಾರ್ಯಪ್ಪ ಹಾಗೂ ಅವರ ಮನಸ್ಥಿತಿಯವರು ಹೇಳುತ್ತಾರೆ. ಆದರೆ, ಟಿಪ್ಪು ಸಮರ್ಥಕರು ಆತನ ಬಗ್ಗೆ ಬೇರೊಂದು ಘಟನೆಯನ್ನು ಹೇಳುತ್ತಾರೆ. ಪೇಶ್ವೆಗಳು ಶೃಂಗೇರಿ ಮಠದ ಮೇಲೆ ಆಕ್ರಮಣ ಮಾಡಿದಾಗ, ಟಿಪ್ಪು ರಕ್ಷಣೆ ಮಾಡಿದ್ದ ಘಟನೆಯನ್ನು ಮರೆಮಾಚುತ್ತಾರೆ. ಆತನ ಆಡಳಿತದಲ್ಲಿ ಸುಧಾರಣೆ ತಂದ ಬಗ್ಗೆ ಹೇಳುವುದಿಲ್ಲ. ತನ್ನ ಅರಮನೆ ಆವರಣದಲ್ಲಿದ್ದ ಹಿಂದೂಗಳ ಶ್ರೀರಂಗನಾಥ ದೇವಸ್ಥಾನದ ಬಗ್ಗೆ ಹೇಳುವುದಿಲ್ಲ. ನಂಜನಗೂಡು ದೇವಸ್ಥಾನಕ್ಕೆ ಹಣಕಾಸಿನ ನೆರವಿನ ಬಗ್ಗೆ ಹೇಳುವುದಿಲ್ಲ. ಈ ತಾರತಮ್ಯ ಏಕೆ ಎಂದು ಪ್ರಶ್ನಿಸಿದಾಗ, ಸಭಾಂಗಣ ದಲ್ಲಿದ್ದ ಕೆಲ ಪ್ರೇಕ್ಷಕರು ಸ.ರಾ.ಸುದರ್ಶನ ಅವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿ, ನೀವು ಟಿಪ್ಪುವನ್ನು ಸಮರ್ಥಿಸಿಕೊಳ್ಳಬೇಡಿ, ಮಾತು ನಿಲ್ಲಿಸಿ ಎಂದು ಆಗ್ರಹಿಸಿದರು. ಸುದರ್ಶನ, ತನ್ನ ಮಾತುಗಳನ್ನು ಸಮರ್ಥನೆ ಮಾಡಿಕೊಳ್ಳಲು ಅವಕಾಶ ಸಿಗದಿದ್ದಾಗ ವೇದಿಕೆಯಿಂದ ಇಳಿದರು. ಈ ವೇಳೆ ಕನ್ನಡ ಪರ ಹೋರಾಟಗಾರ ಪ.ಮಲ್ಲೇಶ್ ಅವರ ಜೊತೆಯಾದರು.

ಮೈಸೂರು: ಟಿಪ್ಪು ಸುಲ್ತಾನ್ ಕನ್ನಡ ಪ್ರೇಮಿ, ದೇಶಪ್ರೇಮಿಯೆಂದು ಇತಿಹಾಸಕಾರರು ಸಾರ್ವಜನಿಕವಾಗಿ ಸುಳ್ಳನೇ ನೂರಾರು ಬಾರಿ ಸತ್ಯವೆಂದು ಹೇಳಿ ಹೇಳಿ ಇಂದಿನವರನ್ನು ನಂಬಿ ಸಿದ್ದಾರೆ. ಕಾಲಾನಂತರ ಬೇರೊಬ್ಬರು ಆತನ ಬಗ್ಗೆ ಸತ್ಯವನ್ನು ಹೇಳಿದಾಗ ಅದು ವಿವಾದವಾಗುತ್ತಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅಭಿಪ್ರಾಯಪಟ್ಟರು.

ಮೈಸೂರು ರಾಮಕೃಷ್ಣನಗರದ ರಮಾಗೋವಿಂದ ರಂಗಮAದಿರದಲ್ಲಿ ಅಪ್ರವರಂಬೆ ಸಂಸ್ಥೆ ವತಿಯಿಂದ ಆಯೋಜಿಸಿದ್ದ ೪ ದಿನದ ನಾಟಕೋತ್ಸವ ಹಾಗೂ ಎಂ.ಆರ್.ಶ್ರೀನಿವಾಸ ಮೂರ್ತಿ ಅವರ ಐತಿಹಾಸಿಕ ನಾಟಕ `ಧರ್ಮ ದುರಂತ’ ಪುಸ್ತಕವನ್ನು ಬಿಡುಗಡೆ ಮಾಡಿ, ಮಾತನಾಡಿದರು. ಇತಿಹಾಸಕಾರರು ಟಿಪ್ಪುವನ್ನು ಕನ್ನಡ ಪ್ರೇಮಿ ಎಂದು ಹೇಳುತ್ತಾರೆ. ಆದರೆ, ಶಿರಸ್ತೆದಾರ್, ತಹಸೀಲ್ದಾರ್, ಖುಷ್ಕಿ, ಆಡಳಿತದಲ್ಲಿ ಪರ್ಷಿಯನ್ ಪದಗಳು ಹೇಗೆ ಬಂದವು ಎಂಬುದನ್ನು ಇತಿಹಾಸಕಾರರು ಇಂದಿನ ಪೀಳಿಗೆ ತಿಳಿಸಿಲ್ಲ. ಮೈಸೂರಿನ ಹೆಸರನ್ನು ಬದಲಿಸಿ ನಜರ್‌ಬಾದ್ ಸೇರಿದಂತೆ ಇನ್ನಿತರೆ ಹೆಸರನ್ನಿಟ್ಟಿದ್ದು ಇತಿಹಾಸ. ಈತ ಹೇಗೆ ಕನ್ನಡ ಪ್ರೇಮಿಯಾಗುತ್ತಾನೆ ಎಂದು ಪ್ರಶ್ನಿಸಿದರು.
ನಾನು ಕೊಡವ, ಟಿಪ್ಪು ಕುರಿತು ಸತ್ಯವನ್ನು ಹೇಳಲಿಕ್ಕೆ ನನಗೆ ಯಾವುದೇ ಅಂಜಿಕೆ ಇಲ್ಲ. ಕೊಡಗನ್ನು ವಶಪಡಿಸಿಕೊಳ್ಳಲು ಟಿಪ್ಪು ತನ್ನ ಸೇನೆಯೊಂದಿಗೆ ೧೭ ಬಾರಿ ಆಕ್ರಮಣ ಮಾಡಿದರೂ ಕೊಡಗನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕೊನೆಗೆ ರಾಜೀ-ಸಂಧಾನದ ನೆಪದಲ್ಲಿ ಪುತ್ತರಿ ಹಬ್ಬದ ಸಂದರ್ಭದಲ್ಲಿ ಕೊಡವರನ್ನು ನಂಬಿಸಿ ಮಾತುಕತೆಗೆ ಕರೆದು, ಆ ವೇಳೆ ಬಹಳ ಜನರ ಸೆರೆ ಹಿಡಿದು ಶ್ರೀರಂಗಪಟ್ಟಣದ ಗಂಜಾAನಲ್ಲಿ ಬಲವಂತವಾಗಿ ಮತಾಂತರ ಮಾಡಿದ. ಆ ವೇಳೆ ಮತಾಂತರ ಮಾಡಿದ ಸೇನೆಗೆ ಮಹಮದೀ ಯರ ಸೇನೆ ಎಂದು ಹೆಸರಿಟ್ಟಿದ್ದನು. ಈಗಲೂ ಅದರ ಕುರುಹಾಗಿ `ಮಾಪಿಳ್ಳೆ’ ಎಂಬ ಹೆಸರಿನೊಂದಿಗೆ ಆ ಜನರು ಬದುಕುತ್ತಿರುವುದನ್ನು ನಾವು ಕಾಣಬಹುದು ಎಂದರು.
ಆತನಿಗೆ ತನ್ನ ರಾಜ್ಯದ ವಾಣ ಜ್ಯ ವ್ಯವಹಾರಗಳನ್ನು ಕೊಡಗು ಮಾರ್ಗವಾಗಿ ಕೇರಳಕ್ಕೆ ವಿಸ್ತರಿಸಲು ಕೊಡಗಿನ ಅಂದಿನ ರಾಜ ಅಡ್ಡಿಯಾಗಿದ್ದರು. ಆ ಸೇನೆಯಲ್ಲಿದ್ದ ಕೊಡವರು ಟಿಪ್ಪು ಆಕ್ರಮಣವನ್ನು ತಡೆದಿದ್ದರು. ಇದನ್ನು ಅರಿತ ಟಿಪ್ಪು ಸುಲ್ತಾನ್ ಹುತ್ತರಿ ಹಬ್ಬದ ಸಂದರ್ಭದಲ್ಲಿ ನಿರಾಯುಧರಾಗಿದ್ದ ಸಾವಿರಾರು ಕೊಡವರನ್ನು ಸೆರೆ ಹಿಡಿದು ಮತಾಂತರ ಮಾಡಿ, ಇನ್ನು ಕೆಲವರನ್ನು ಕೊಲೆ ಮಾಡಿದ್ದು ಇತಿಹಾಸ ಎಂದು ತಿಳಿಸಿದರು.
ಮೈಸೂರು ಅರಸರ ಕೊಡುಗೆ ಅಪಾರ: ಮೈಸೂರಿನಲ್ಲಿ ಕನ್ನಡವನ್ನು ಕಟ್ಟಿದ್ದು, ಬೆಳೆಸಿದ್ದು, ಹಳೆ ಮೈಸೂರು ಪ್ರಾಂತ್ಯದ ಅಭಿವೃದ್ಧಿಗೆ ಶ್ರಮಿಸಿದ್ದು, ಮೈಸೂರು ಅರಸರೇ ಹೊರತು, ಟಿಪ್ಪು ಸುಲ್ತಾನ್ ಅಲ್ಲ. ಟಿಪ್ಪುವಿಗೆ ಕೇವಲ ಬ್ರಿಟಿಷರು ಮಾತ್ರ ವೈರಿಗಳಾಗಿರಲಿಲ್ಲ. ಮೈಸೂರು ಅರಸರು, ಕೊಡಗಿನ ರಾಜ, ಪೇಶ್ವೆಗಳು ಸೇರಿಕೊಂಡಿ ದ್ದಾರೆ. ಇವೆರಲ್ಲೂ ಒಟ್ಟುಗೂಡಿ ಶ್ರೀರಂಗಪಟ್ಟಣ ಕೋಟೆ ಸುತ್ತುವರೆದಿದ್ದಾಗ, ಅರಮನೆಯಲ್ಲಿದ್ದವರೇ ಕೊಲೆ ಮಾಡಿದ್ದಾರೆ ಎಂಬುದು ಪುಸ್ತಕದಲ್ಲಿ ದಾಖಲಾಗಿದೆ. ಟಿಪ್ಪು ಮೇಲುಕೋಟೆಯ ೭೦೦ಕ್ಕೂ ಹೆಚ್ಚು ಬ್ರಾಹ್ಮಣರನ್ನು ದೀಪಾವಳಿ ಹಬ್ಬದ ದಿನದಂದೇ ಕೊಲೆ ಮಾಡಿದ್ದಾನೆ. ಇದರ ಸ್ಮರಣಾರ್ಥ ಅಲ್ಲಿನ ಬ್ರಾಹ್ಮಣರು ಇಂದಿಗೂ ದೀಪಾವಳಿ ಆಚರಣೆ ಮಾಡುತ್ತಿಲ್ಲ. ಇದು ಇತಿಹಾಸ ಎಂದು ತಿಳಿಸಿದರು.

ಹುಲಿಯೊಂದಿಗೆ ಕಾದಾಡಲು ಸಾಧ್ಯವೇ: ಟಿಪ್ಪುವನ್ನು ಹುಲಿಯೊಂದಿಗೆ ಕಾದಾಡಿದ ಪ್ರಸಂಗವನ್ನು ಚಿತ್ರಿಸಿ `ಮೈಸೂರು ಹುಲಿ’ ಎಂದು ಕರೆದಿದ್ದಾರೆ. ಯಾರಾದರು ಹುಲಿಯೊಂದಿಗೆ ಕಾದಾಡಲು ಸಾಧ್ಯವೇ?. ಆತ ಮೈಸೂರು ಸಂಸ್ಥಾನವನ್ನು ಅಭಿವೃದ್ಧಿ ಮಾಡಿದ್ದಾನೆಯೇ?. ಕನ್ನಡ ಬೆಳವಣ Uಗೆೆ ಈತನ ಕೊಡುಗೆ ಶೂನ್ಯ. ಇವೆಲ್ಲವೂ ಸಲ್ಲಬೇಕಾದುದು ಮೈಸೂರು ಅರಸರಿಗೆ, ಅವರ ಕಾಲದ ಆಡಳಿತದಲ್ಲಿ ಮೀಸಲಾತಿ ಜಾರಿಗೆಗೊಳಿಸಿ, ಸರ್ವರಿಗೂ ಸಮಬಾಳು-ಸಮಪಾಲು ನೀತಿಯನ್ನು ಜಾರಿಗೆ ತಂದವರು ಮೈಸೂರು ಅರಸರ ಸಾಧನೆ. ಈ ಸಂಗತಿಯನ್ನು ಎದೆತಟ್ಟಿ ಇಂದಿನ ಪೀಳಿಗೆಗೆ ಹೇಳ ಬಹುದು ಎಂದರು.

ವಿರೊಧಿಸುವವರು ಕೊಡವರು: ಕೊಡಗಿನಲ್ಲಿ ಟಿಪ್ಪುವನ್ನು ವಿರೋಧಿಸುವವರು ಕೊಡವರೇ ಹೊರತು, ಯಾವುದೇ ಬಜರಂಗ, ವಿಶ್ವಹಿಂದೂ ಪರಿಷತ್ ಕಾರ್ಯಕರ್ತರಲ್ಲ. ಈ ವಾಸ್ತವವನ್ನು ಮೈಸೂರಿಗರಿಗೂ ತಿಳಿಸಿಕೊಡುವ ಅಗತ್ಯವಿದೆ. ನಾನು ರಂಗಾಯಣದಲ್ಲಿ ಇರುವತನಕ ಈ ಸತ್ಯವನ್ನು ಹೇಳುತ್ತಲೇ ಇರುತ್ತೇನೆ. ಈ ಕುರಿತು ನನಗೆ ಯಾವುದೇ ಅಂಜಿಕೆಯಿಲ್ಲ. ಹೆದರಿಕೆ ಇಲ್ಲ ಎಂದು ತಮ್ಮ ಹೇಳಿಕೆಯನ್ನು ಬಲವಾಗಿ ಸಮರ್ಥಿಸಿಕೊಂಡರು.
ಇತಿಹಾಸ ತಿರುಚಿದ್ದಾರೆ: ಇಂದಿನ ಯುವಕರಿಗೆ ಭಾರತೀಯ ರಾಜರ ಋಣಾತ್ಮಕ ಅಂಶಗಳನ್ನು ಮಾತ್ರ ಪರಿಚಯಿಸಿದ್ದಾರೆ. ಇದರಿಂದ ನಮ್ಮ ಯುವಕರಲ್ಲಿ ದೇಶಪ್ರೇಮದಿಂದ ಹಿಮ್ಮುಖರಾಗಿದ್ದಾರೆ. ಇದರಿಂದಾಗಿ ನಮ್ಮ ಹಿಂದೂ ಯುವಕರು ಪರಾವಲಂಭಿಗಳಾಗಿ ಬದುಕು ಕಟ್ಟಿಕೊಂಡಿರುವುದು ಬೇಸರದ ಸಂಗತಿ. ಅಲ್ಲದೆ, ಇಂದು ಎಂ.ಆರ್.ಶ್ರೀ ರಚಿತ `ಧರ್ಮ ದುರಂತ’ ಪುಸ್ತಕದಲ್ಲಿ ಟಿಪ್ಪುವಿನ ಮತಾಂತರ ಕ್ರೌರ್ಯ ಕುರಿತು ಲೇಖಕರು ವಸ್ತು ನಿಷ್ಟವಾಗಿ ದಾಖಲಿಸಿದ್ದು, ಎಲ್ಲರೂ ಈ ಪುಸ್ತಕವನ್ನು ಖರೀದಿಸಿ ಓದುವಂತೆ ಸಲಹೆ ನೀಡಿದರು. ಈ ವೇಳೆ ಹಿರಿಯ ರಂಗಕರ್ಮಿ ನಾ.ನಾಗಚಂದ್ರ ಉಪಸ್ಥಿತರಿದ್ದರು. ವೇದಿಕೆ ಕಾರ್ಯ ಕ್ರಮದ ನಂತರ ಶ್ರೀ ಗುರುಕುಲಾ ಶಾಲೆ ವಿದ್ಯಾರ್ಥಿ ಗಳಿಂದ `ರಾಗರಂಗ’ ಕಾರ್ಯಕ್ರಮ ನಡೆಸಿಕೊಟ್ಟರು.

Translate »