ಪ್ರಕೃತಿ ಕಾಳಜಿ ಇಲ್ಲದ ಕಾರಣ ಮಳೆಯಿಂದ ಹಾನಿ ಮಹಾರಾಜ ಯದುವೀರರಿಂದ ‘ಸಂಸ್ಕೃತಿ-೨೧’ ಉದ್ಘಾಟನೆ
ಮೈಸೂರು

ಪ್ರಕೃತಿ ಕಾಳಜಿ ಇಲ್ಲದ ಕಾರಣ ಮಳೆಯಿಂದ ಹಾನಿ ಮಹಾರಾಜ ಯದುವೀರರಿಂದ ‘ಸಂಸ್ಕೃತಿ-೨೧’ ಉದ್ಘಾಟನೆ

November 27, 2021

ಮೈಸೂರು, ನ.೨೬(ಜಿಎ)- ಪ್ರಕೃತಿ ಮತ್ತು ಪರಿಸರದ ಮೇಲೆ ಕಾಳಜಿ ಇಲ್ಲದ ಕಾರಣ ಈ ಬಾರಿ ಸುರಿದ ಮಳೆಯಿಂದ ಮೈಸೂರು ಸೇರಿದಂತೆ ರಾಜ್ಯಾದ್ಯಂತ ಅನೇಕ ಅನಾಹುತಗಳು ಸಂಭವಿಸಿದೆ ಎಂದು ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ವಿಷಾದ ವ್ಯಕ್ತಪಡಿಸಿದ್ದಾರೆ.

ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನ ಸಂಸ್ಥೆಯ ವತಿಯಿಂದ ಜೆ. ಕೆ. ಮೈದಾನದ ಪ್ಲಾಟಿನಂ ಜ್ಯೂಬಿಲಿ ಹಾಲ್‌ನಲ್ಲಿ ಏರ್ಪಡಿಸಲಾಗಿರುವ ಮೂರು ದಿನಗಳ ‘ಸಂಸ್ಕೃತಿ ೨೧’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮೈಸೂರು ಸಂಸ್ಥಾನವಿದ್ದ ಸಂದರ್ಭದಲ್ಲಿ ಇಂಗ್ಲೆAಡ್‌ಗಿAತಲೂ ಮೈಸೂರಿನಲ್ಲಿ ಉತ್ತಮವಾದ ಆರೋಗ್ಯ ಕೇಂದ್ರಗಳು ಇದ್ದವು, ಮೈಸೂರು ಆರೋಗ್ಯ ಕ್ಷೇತ್ರದಲ್ಲಿ ವಿಶೇಷ ಸ್ಥಾನವನ್ನು ಪಡೆದು ದೇಶಕ್ಕೆ ಮಾದರಿಯಾಗಿತ್ತು ಎಂದರು.

ಮೂರು ದಿನಗಳ ಕಾಲ ನಡೆಯುವ ಈ ಕಲಾ ಸಾಂಸ್ಕೃತೀಕ ಕಾರ್ಯಕ್ರಮವನ್ನು ಉದ್ಘಾಟಿಸಿರುವುದು ನನಗೆ ಸಂತೋಷ ತಂದಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯ ವಿರಾಮದಿಂದ ಇಂದು ಕಾರ್ಯಕ್ರಮ ಅದ್ಭುತವಾಗಿ ಆರಂಭಗೊAಡಿದೆ ಎಂದ ಅವರು ಇತ್ತೀಚೆಗೆ ಸುರಿದ ಮಳೆಗೆ ಅನೇಕ ಅನಾಹುತಗಳು ಸಂಭವಿಸಿದ್ದು ಅದಕ್ಕೆ ಮುಖ್ಯ ಕಾರಣ ಅಭಿವೃದ್ಧಿ ಹೆಸರಿನಲ್ಲಿ ಪ್ರಕೃತಿಯ ಮೇಲೆ ನಡೆಯುತ್ತಿರುವ ಘಟನೆಗಳೇ ಕಾರಣ ಎಂದರು. ನಮ್ಮ ಪೀಳಿಗೆ ಮೈಸೂರಿನ ಪಾರಂಪರಿಕತೆಯನ್ನು ನೋಡಿ ಆನಂದಿಸಿದೆ. ಅದರಂತೆ ನಮ್ಮ ಮುಂದಿನ ಪೀಳಿಗೆ ಮೈಸೂರಿನ ಪಾರಂಪರಿಕತೆ ನೋಡಿ ಆನಂದಿಸುವAತೆ ಮಾಡಬೇಕಾಗಿದೆ. ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರ ಜೊತೆಗೆ ನಗರ, ರಾಜ್ಯ, ದೇಶದ ಸಮಸ್ಯೆಗಳ ಬಗ್ಗೆ ಚರ್ಚಿಸಿ ಯಾವ ರೂಪದಲ್ಲಿ ಸಹಾಯ ಮಾಡಬಹುದು ಎಂಬುದರ ಬಗ್ಗೆ ಚಿಂತನೆ ನಡೆಸಬೇಕಿದೆ. ಮತ್ತು ಪ್ರಕೃತಿ ಸಂರಕ್ಷಣೆ ಕುರಿತು ಪ್ರಾಧಿಕಾರದ ಅಧಿಕಾರಿಗಳನ್ನು ಭೇಟಿ ಮಾಡಿ ಈ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕು ಎಂದು ತಿಳಿಸಿದರು.

ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನ ಸಂಸ್ಥೆಯ ನಿರ್ದೇಶಕರು, ಡೀನ್ ಡಾ. ಸಿ. ಪಿ ನಂಜರಾಜ್ ಮಾತನಾಡಿ ಇಡೀ ರಾಜ್ಯದಲ್ಲಿ ಇಷ್ಟು ದೊಡ್ಡ ವಿಸ್ತಾರವಾದ ವೈದ್ಯಕೀಯ ಕಾಲೇಜು ಎಲ್ಲೂ ಇಲ್ಲ. ಇದಕ್ಕೆ ಮುಖ್ಯ ಕಾರಣ ಮೈಸೂರಿನ ಮಹಾರಾಜರು. ೧೯೬೦ರ ಸಂದರ್ಭದಲ್ಲಿ ಈ ಸಂಸ್ಥೆಯಲ್ಲಿ ವೈದ್ಯಕೀಯ ಶಿಕ್ಷಣ ಪಡೆದವರು ನೇರವಾಗಿ ಅಮೆರಿಕ, ಇಂಗ್ಲೆAಡ್ ದೇಶಗಳಿಗೆ ತೆರಳಿ ಉದ್ಯೋಗ ಮಾಡುತ್ತಿದ್ದರು. ಏಕೆಂದರೆ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಓದಿದ್ದಾರೆ ಎಂಬ ಕಾರಣದಿಂದ ಅಲ್ಲಿ ಮಹತ್ವ ನೀಡುತ್ತಿದ್ದರು. ೧೦೦ನೇ ವರ್ಷದ ಆಚರಣೆಯನ್ನು ಅತ್ಯಂತ ವೈಭವದಿಂದ ಆಚರಿಸಬೇಕು ಎಂಬ ಉದ್ದೇಶವಿದೆ. ಅದರಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಗಮನಕ್ಕೂ ಈ ವಿಚಾರ ತಂದಿದ್ದೇನೆ. ೨೦೨೪ಕ್ಕೆ ಈ ಕಾರ್ಯಕ್ರಮ ಅದ್ಧೂರಿಯಿಂದ ಜರುಗಲಿದೆ ಎಂದು ತಿಳಿಸಿದರು. ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನ ಸಂಸ್ಥೆಯ ಪ್ರಾಂಶು ಪಾಲರಾದ ಡಾ. ಕೆ. ಆರ್. ದಾಕ್ಷಾಯಣ , ಕಾರ್ಯ ನಿರ್ವಾಹಕ ಅಧಿಕಾರಿ ಬಿ. ಎನ್. ವೀಣಾ, ಪಿಕೆಟಿಬಿ ಆಸ್ಪತ್ರೆ ಅಧೀಕ್ಷಕರಾದ ಡಾ. ಪ್ರಶಾಂತ್, ಕೆ. ಆರ್. ಆಸ್ಪತ್ರೆಯ ಅಧೀಕ್ಷಕರಾದ ಡಾ. ಬಿ. ಎಲ್. ನಂಜುAಡಸ್ವಾಮಿ, ಚೆಲುವಾಂಬ ಆಸ್ಪತ್ರೆ ಅಧೀಕ್ಷಕರಾದ ಡಾ. ಸುಧಾ ರುದ್ರಪ್ಪ ಮತ್ತು ಮತ್ತಿತರರು ಉಪಸ್ಥಿತರಿದ್ದರು.

Translate »