ಚಾ.ಬೆಟ್ಟ ತಪ್ಪಲಲ್ಲಿ ಪುಂಡರ ಹಾವಳಿ: ಸಾರ್ವಜನಿಕರ ಬೇಸರ
ಮೈಸೂರು

ಚಾ.ಬೆಟ್ಟ ತಪ್ಪಲಲ್ಲಿ ಪುಂಡರ ಹಾವಳಿ: ಸಾರ್ವಜನಿಕರ ಬೇಸರ

August 27, 2021

ಮೈಸೂರು, ಆ.೨೬(ಎಂಕೆ)- ಸಾಂಸ್ಕೃತಿಕ ನಗರಿ ಮೈಸೂರಿನ ಪ್ರಸಿದ್ಧ ಧಾರ್ಮಿಕ ತಾಣ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಪುಂಡರ ಹಾವಳಿ ದಿನೇದಿನೆ ಹೆಚ್ಚಾಗುತ್ತಿದ್ದು, ಭಕ್ತರು, ವಾಯುವಿಹಾರಿಗಳಲ್ಲಿ ಆತಂಕ ಹೆಚ್ಚಿಸಿದೆ.

ಸ್ವಚ್ಛ ಮತ್ತು ಸಂಸ್ಕೃತಿಯಲ್ಲಿ ವಿಶ್ವದ ಗಮನ ಸೆಳೆದಿರುವ ಮೈಸೂರಿನಲ್ಲಿ ಭಯದ ವಾತಾ ವರಣ ನಿರ್ಮಾಣವಾಗುತ್ತಿದೆ. ನಗರದ ಸುಪ್ರಸಿದ್ಧ ಯಾತ್ರಾ ಸ್ಥಳ ಎಂದೆಲ್ಲಾ ಕರೆ ಯುವ ಚಾಮುಂಡಿಬೆಟ್ಟದ ತಪ್ಪಲು ಪ್ರದೇಶ ದಲ್ಲಿ ಭಯ-ಆತಂಕ ಹೆಚ್ಚಾಗುತ್ತಿದ್ದು, ಪೊಲೀ ಸರ ಏನು ಮಾಡುತ್ತಿದ್ದಾರೆ ಎಂದು ಮೈಸೂ ರಿನ ಪ್ರಜ್ಞಾವಂತ ನಾಗರಿಕರು ಪ್ರಶ್ನಿಸುತ್ತಿದ್ದಾರೆ.
ಪ್ರತಿನಿತ್ಯ ಬೆಳಗ್ಗೆ-ಸಂಜೆಯ ವೇಳೆ ಚಾಮುಂಡಿಬೆಟ್ಟ ಹತ್ತುವ ಸಾವಿರಾರು ಮಂದಿ ವಾಯುವಿಹಾರಿಗಳು, ದೇವಿಯ ದರ್ಶನಕ್ಕೆ ಬರುವ ಲಕ್ಷಾಂತರ ಭಕ್ತಾದಿ ಗಳಿಗೆ ಹಾಗೂ ಹಸಿರು ಪರಿಸರವನ್ನು ಕಣ್ತುಂಬಿಕೊಳ್ಳಲು ಬರುವ ಪ್ರೇಮಿಗಳಿಗೂ ಭದ್ರತೆ ಇಲ್ಲದಂತಾಗಿದೆ. ಈಗ ವಿದ್ಯಾರ್ಥಿ ನಿಯ ಮೇಲೆ ನಡೆದ ಸಾಮೂಹಿಕ ಅತ್ಯಾ ಚಾರದಂತಹ ಪ್ರಕರಣ, ಸಾಂಸ್ಕೃತಿಕ ನಗರಿ ಹೆಸರಿಗೆ ಮಸಿ ಬಳಿದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ತಪಾಸಣೆಯೂ ಇಲ್ಲ, ಭದ್ರತೆಯೂ ಇಲ್ಲ: ಜೆ.ಸಿ.ನಗರ, ನಂದಿ ಮಾರ್ಗ, ಉತ್ತನಹಳ್ಳಿ ಮತ್ತು ಜೆಎಸ್‌ಎಸ್ ಕಾಲೇಜಿನ ಕಡೆಯ ಮೆಟ್ಟಿಲು ಮಾರ್ಗ ಸೇರಿ ಚಾಮುಂಡಿಬೆಟ್ಟಕ್ಕೆ ಹೋಗಲು ೪ ಮಾರ್ಗಗಳಿವೆ. ಆದರೆ ಜೆ.ಸಿ. ನಗರ ಮಾರ್ಗ ಬಿಟ್ಟು ಬೇರೆ ಕಡೆಗಳಲ್ಲಿ ಪೊಲೀಸ್ ಭದ್ರತೆಯಾಗಲೀ, ವಾಹನ ತಪಾಸಣೆಯಾಗಲೀ ಇಲ್ಲ. ಕುಡುಕರು, ಪುಂಡರು, ಅನೈತಿಕ ಚಟುವಟಿಕೆ ನಡೆಸು ವವರ ಕೇಳುವವರೇ ಇಲ್ಲದಂತಾಗಿದೆ ಎಂದು ಕಿಡಿಕಾರಿದರು.

ಸಂಜೆಯ ಭಯ: ಬೆಳಗ್ಗೆ ಮತ್ತು ಮಧ್ಯಾ ಹ್ನದ ವೇಳೆ ಭಕ್ತರ ಸಂಖ್ಯೆ ಹೆಚ್ಚಾಗಿರುವು ದರಿಂದ ಅನೈತಿಕ ಚಟುವಟಿಕೆಗಳು ನಡೆ ಯುವುದು ಕಡಿಮೆ. ಆದರೆ ಸಂಜೆಯಾಗು ತ್ತಿದ್ದಂತೆ ಬೆಟ್ಟದ ಸುತ್ತಲೂ ಭಯದ ವಾತಾ ವರಣ ಆವರಿಸುತ್ತದೆ. ಬೆಟ್ಟ ಹತ್ತುವ ಮಾರ್ಗದ ಪೊದೆಗಳೇ ಅನೈತಿಕ ಚಟುವಟಿಕೆಗಳ ತಾಣವಾಗಿವೆ. ಇದು ಪುಂಡರಿಗೆ ವರದಾನ ವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಬಿಗಿ ಭದ್ರತೆ: ಚಾಮುಂಡಿಬೆಟ್ಟಕ್ಕೆ ಹೋಗುವ ಎಲ್ಲಾ ರಸ್ತೆ ಮಾರ್ಗಗಳಿಗೂ ಬೀದಿದೀಪ ಅಳವಡಿಸಬೇಕಿದೆ. ಅಲ್ಲದೆ ಎಲ್ಲಾ ಮಾರ್ಗದಲ್ಲೂ ಪೊಲೀಸರನ್ನು ನಿಯೋ ಜಿಸಬೇಕು. ಪ್ರತಿಯೊಂದು ವಾಹನಗಳ ತಪಾಸಣೆ ಜೊತೆಗೆ ಬೆಟ್ಟಕ್ಕೆ ಬರುವವರ ಮೇಲೆ ನಿಗಾ ವಹಿಸಬೇಕು. ಬೆಟ್ಟದ ತಪ್ಪಲಿ ನಲ್ಲಿ ತೀವ್ರ ಕಟ್ಟೆಚ್ಚರಕ್ಕೆ ಒತ್ತಾಯಿಸಿದ್ದಾರೆ.

Translate »