ಚರಣ್‌ಜಿತ್ ಸಿಂಗ್ ಚನ್ನಿ ಪಂಜಾಬ್ ನೂತನ ಸಿಎಂ
ಮೈಸೂರು

ಚರಣ್‌ಜಿತ್ ಸಿಂಗ್ ಚನ್ನಿ ಪಂಜಾಬ್ ನೂತನ ಸಿಎಂ

September 20, 2021

ಇAದು ಪ್ರಮಾಣ ವಚನ
ಅಮೃತಸರ್,ಸೆ.೧೯-ಕ್ಯಾಪ್ಟನ್ ಅಮ ರೀಂದರ್ ಸಿಂಗ್ ರಾಜೀನಾಮೆ ಬಳಿಕ ಪಂಜಾಬ್‌ನ ನೂತನ ಮುಖ್ಯಮಂತ್ರಿಯಾಗಿ ಚರಣ್‌ಜಿತ್ ಸಿಂಗ್ ಚನ್ನಿ ಆಯ್ಕೆಯಾಗಿ ದ್ದಾರೆ. ಕಾಂಗ್ರೆಸ್ ಹೈಕ ಮಾಂಡ್ ಅಚ್ಚರಿ ಬೆಳವಣ ಗೆಯಲ್ಲಿ ಚರಣ್ ಜಿತ್‌ಸಿಂಗ್ ಚನ್ನಿ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದು, ಅವರು ನಾಳೆ (ಸೋಮವಾರ) ಬೆಳಗ್ಗೆ ೧೧ ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನಂತರ ಸುದ್ದಿಗಾರರ ಜೊತೆ ಮಾತನಾಡಿದ ನಿಯೋಜಿತ ಸಿಎಂ ಚರಣ್‌ಜಿತ್ ಸಿಂಗ್, ನಮ್ಮ ಪಕ್ಷದ ಶಾಸಕರು ಸರ್ವಾನುಮತ ದಿಂದ ನಮ್ಮ ನಿಲುವನ್ನು ರಾಜ್ಯ ಪಾಲರ ಮುಂದೆ ಮಂಡಿಸಿದ್ದೇವೆ. ನಾಳೆ ಬೆಳಗ್ಗೆ ೧೧ ಗಂಟೆಗೆ ಪ್ರಮಾಣ ವಚನ ಸಮಾ ರಂಭ ನಡೆಯಲಿದೆ ಎಂದಿದ್ದಾರೆ. ಸಿಎಂ ಸ್ಥಾನಕ್ಕೆ ಶನಿವಾರ ರಾಜೀನಾಮೆ ನೀಡಿದ್ದ ಕ್ಯಾಪ್ಟನ್ ಅಮರೀಂದರ್ ಸಿಂಗ್ ನೂತನ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಅವರಿಗೆ ಶುಭಾಶಯ ಕೋರಿದ್ದಾರೆ.

Translate »