ಬಾಲ್ಯವಿವಾಹ: ಆಪ್ರಾಪ್ತೆ ರಕ್ಷಣೆ, ಆರೋಪಿಗಳ ಪತ್ತೆಗೆ ಶೋಧ
ಮೈಸೂರು ಗ್ರಾಮಾಂತರ

ಬಾಲ್ಯವಿವಾಹ: ಆಪ್ರಾಪ್ತೆ ರಕ್ಷಣೆ, ಆರೋಪಿಗಳ ಪತ್ತೆಗೆ ಶೋಧ

April 22, 2020

ನಂಜನಗೂಡು, ಏ.21(ರವಿ)-ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ದೂರಿನ ಮೇರೆಗೆ ಗ್ರಾಮಾಂತರ ಠಾಣಾ ಪೊಲೀಸರು ಬಾಲ್ಯವಿವಾಹಕ್ಕೊ ಳಗಾಗಿದ್ದ ಆಪ್ರಾಪ್ತೆಯನ್ನು ರಕ್ಷಿಸಿ, ವರನ ಪೋಷಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಲೂಕಿನ ಹುಲ್ಲಹಳ್ಳಿ ಗ್ರಾಮದ ಮಲ್ಲೇಶನಾಯಕ ಪುತ್ರ ರವಿಕುಮಾರ್ (24) ಎಂಬಾತನಿಗೆ ತಾಲೂಕಿನ ಗ್ರಾಮ ವೊಂದರ 17 ವರ್ಷದ ಆಪ್ರಾಪ್ತೆಯೊಡನೆ ಏ.19ರಂದು ತಾಲೂಕಿನ ಹಲ್ಲರೆ ಗ್ರಾಮದ ಎತ್ತಮ್ಮನ ದೇವಸ್ಥಾನದಲ್ಲಿ ಅರ್ಚಕರ ಸಮ್ಮುಖ ದಲ್ಲಿ ವಿವಾಹ ನೆರವೇರಿಸಲಾಗಿತ್ತು. ಈ ಬಗ್ಗೆ ವಿಷಯ ತಿಳಿದ ತಾಲೂಕು ಶಿಶು ಅಭಿ ವೃದ್ಧಿ ಯೋಜನಾಧಿಕಾರಿ ಕವಿತಾ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳು ವಂತೆ ನಂಜನಗೂಡು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿ ಕೊಂಡ ಪೋಲಿಸರು ಬಾಲ್ಯ ವಿವಾಹ ಕ್ಕೊಳಗಾಗಿದ್ದ ಬಾಲಕಿಯನ್ನು ರಕ್ಷಿಸಿ, ಪೋಷಕರಿಗೆ ಒಪ್ಪಿಸಿದ್ದಾರೆ. ಈಕೆಯನ್ನು ವರಿಸಿದ್ದ ರವಿಕುಮಾರ್ ಹಾಗೂ ದೇವಸ್ಥಾನದ ಅರ್ಚಕ ಸೇರಿ ದಂತೆ ಇತರರ ಪತ್ತೆಗೆ ಬಲೆ ಬೀಸಿದ್ದಾರೆ.

Translate »