ಕೊರೊನಾ ಬಗ್ಗೆ ಮತ್ತಷ್ಟು ಎಚ್ಚರಿಕೆ ವಹಿಸಲು ಸಲಹೆ
ಕೊಡಗು

ಕೊರೊನಾ ಬಗ್ಗೆ ಮತ್ತಷ್ಟು ಎಚ್ಚರಿಕೆ ವಹಿಸಲು ಸಲಹೆ

April 22, 2020

ಮಡಿಕೇರಿ ಏ.21- ಕೋವಿಡ್-19ಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಕಳೆದ 28 ದಿನಗಳಿಂದ ಯಾವುದೇ ಪಾಸಿಟಿವ್ ಪ್ರಕರಣಗಳು ಕಂಡು ಬಂದಿಲ್ಲ. ಇದೇ ರೀತಿ ಮುಂದಿನ ದಿನಗಳಲ್ಲಿಯೂ ಕಾಪಾಡಿ ಕೊಂಡು ಹೋಗಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ.ಅನ್ಬು ಕುಮಾರ್ ಸಲಹೆ ನೀಡಿದರು.

ಜಿಲ್ಲೆಯಲ್ಲಿ ಕೋವಿಡ್-19 ಸ್ಥಿತಿಗತಿ ಸಂಬಂಧ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಅಧಿಕಾರಿ ಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇದುವರೆಗೆ ಕೋವಿಡ್-19 ಸಂಬಂಧ ಜ್ವರ ಪ್ರಕರಣಗಳು, ಕಂಟೈನ್‍ಮೆಂಟ್‍ನಲ್ಲಿ ಇರುವವರು ಮತ್ತಿತರ ಬಗ್ಗೆ ಮಾಹಿತಿ ಪಡೆದ ಅವರು, ಕಳೆದ 28 ದಿನಗಳಿಂದ ಯಾವುದೇ ರೀತಿಯ ಪಾಸಿಟಿವ್ ಪ್ರಕರಣ ಕಂಡು ಬರದಿರುವ ಬಗ್ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸುದ್ದಿ ಗೋಷ್ಠಿ ಸಂದರ್ಭದಲ್ಲಿ ಪ್ರಸ್ತಾಪಿಸಿದ್ದು, ಮೇ 3 ರವರೆಗೆ ಲಾಕ್‍ಡೌನ್ ಇರುವುದರಿಂದ ಮತ್ತಷ್ಟು ಮುನ್ನೆಚ್ಚರಿಕೆ ವಹಿಸಬೇಕು ಎಂದರು.

ಸರ್ಕಾರದ ನಿರ್ದೇಶನಗಳನ್ನು ಪ್ರತಿಯೊ ಬ್ಬರೂ ಪಾಲಿಸಬೇಕು. ಮಾಸ್ಕ್, ಗ್ಲೌಸ್, ಸ್ಯಾನಿ ಟೈಸರ್ ಮತ್ತಿತರವನ್ನು ಕಂಟೈನ್‍ಮೆಂಟ್ ಪ್ರದೇಶದಲ್ಲಿ ಒದಗಿಸಬೇಕು. ಹೃದಯ, ಶ್ವಾಸಕೋಶ ಇತರೆ ಖಾಯಿಲೆಗಳ ಬಗ್ಗೆಯೂ ಸಹ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎಂದರು.

ಯಾವುದೇ ರೀತಿಯ ರೋಗ ಲಕ್ಷಣ ಬಂದರೂ ಸಹ ಸರಿಯಾಗಿ ತಪಾಸಣೆ ಮಾಡ ಬೇಕು. ಜಿಲ್ಲೆಯ ಎಲ್ಲಾ ಹಂತದ ಆಸ್ಪತ್ರೆಗಳಲ್ಲಿ ಔಷಧಿಗಳು ದಾಸ್ತಾನು ಇರಬೇಕು. ಸಕಾಲ ದಲ್ಲಿ ಚಿಕಿತ್ಸೆ ದೊರೆಯುವಂತಾಗಬೇಕು ಎಂದರು.

ಬಿಪಿಎಲ್ ಕಾರ್ಡ್‍ಗೆ ಅರ್ಜಿ ಸಲ್ಲಿಸಿರುವ ಎಲ್ಲಾ ಕುಟುಂಬಕ್ಕೂ ಆಹಾರ ಪೂರೈಸ ಬೇಕು. ಮೇ 3 ರವರೆಗೆ ಲಾಕ್‍ಡೌನ್ ಇರುವು ದರಿಂದ ಆಹಾರ ಸಿಕ್ಕಿಲ್ಲ ಎಂಬ ದೂರು ಗಳು ಬರಬಾರದು ಎಂದರು.

ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾತನಾಡಿ, ಕೋವಿಡ್-19 ಸಂಬಂಧ ಜಿಲ್ಲಾಡಳಿತ ಎಲ್ಲಾ ರೀತಿಯ ಮುನ್ನೆಚ್ಚರಿಕೆ ವಹಿಸಿದೆ. ಜಿಲ್ಲೆಯಲ್ಲಿ ಪಡಿತರ ಚೀಟಿ ಇಲ್ಲದವರಿಗೂ ಸಹ ಪಡಿತರ ವಿತರಿಸಲಾಗು ತ್ತದೆ. ಲೈನ್‍ಮನೆಗಳಲ್ಲಿ ವಾಸಿಸುವ ಕಾರ್ಮಿಕರು, ವಲಸಿಗ ಕಾರ್ಮಿಕರು ಹೀಗೆ ಎಲ್ಲರಿಗೂ ಆಹಾರ ಕಿಟ್ ಪೂರೈಸ ಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಆಹಾರ ಇಲಾಖೆ ಉಪ ನಿರ್ದೇಶಕ ಗೌರವ್ ಕುಮಾರ್ ಶೆಟ್ಟಿ ಮಾತನಾಡಿ, ಈಗಾ ಗಲೇ ಶೇ.93 ರಷ್ಟು ಆಹಾರ ಪೂರೈಕೆ ಯಾಗಿದ್ದು, ಬಿಪಿಎಲ್ ಕಾರ್ಡ್‍ಗಾಗಿ ಅರ್ಜಿ ಸಲ್ಲಿಸಿರುವ 4,500 ಕುಟುಂಬಗಳಿಗೂ ಆಹಾರ ಪೂರೈಕೆ ಮಾಡಲಾಗುತ್ತಿದೆ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿ ಡಾ.ಕೆ.ಮೋಹನ್, ವೈದ್ಯ ಕೀಯ ವಿಜ್ಞಾನ ಸಂಸ್ಥೆ ಅಧೀಕ್ಷಕ ಡಾ. ಲೋಕೇಶ್, ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥ ಡಾ.ರಾಮಚಂದ್ರ ಕಾಮತ್ ಅವರು ಕೋವಿಡ್- 19 ಸಂಬಂಧಿಸಿದಂತೆ ಹಲವು ಮಾಹಿತಿ ನೀಡಿದರು. ಜಿಲ್ಲಾ ಎಸ್ಪಿ ಡಿ.ಪನ್ನೇಕರ್, ಜಿಪಂ ಸಿಇಓ ಕೆ.ಲಕ್ಷ್ಮೀಪ್ರಿಯ, ಎಡಿಸಿ ಡಾ. ಸ್ನೇಹ, ಎಸಿ ಟಿ.ಜವರೇಗೌಡ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ನಿರ್ದೇಶಕ ಡಾ. ಕಾರ್ಯಪ್ಪ ಸೇರಿದಂತೆ ಇತರರಿದ್ದರು.

Translate »