ಕರಿಕೆ-ಕೇರಳ ಗಡಿ ಪರಿಶೀಲಿಸಿದ ಶಾಸಕ ಕೆ.ಜಿ.ಬೋಪಯ್ಯ
ಕೊಡಗು

ಕರಿಕೆ-ಕೇರಳ ಗಡಿ ಪರಿಶೀಲಿಸಿದ ಶಾಸಕ ಕೆ.ಜಿ.ಬೋಪಯ್ಯ

April 22, 2020

ಮಡಿಕೇರಿ, ಏ.21- ಕೇರಳ-ಕರ್ನಾಟಕ ಗಡಿ ಕರಿಕೆಗೆ ಶಾಸಕ ಕೆ.ಜಿ.ಬೋಪಯ್ಯ ಭೇಟಿ ನೀಡಿ ಗಡಿಯಲ್ಲಿ ಕೈಗೊಂಡಿರುವ ಭದ್ರತೆಯನ್ನು ಪರಿಶೀಲನೆ ನಡೆಸಿದರು. ಸದ್ಯದ ಮಟ್ಟಿಗೆ ಮುಚ್ಚಿರುವ ಅಂತರಾಜ್ಯ ಗಡಿಯನ್ನು ತೆರವುಗೊಳಿಸುವುದಿಲ್ಲ . ಭದ್ರತೆಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪೊಲೀಸ್‍ರನ್ನು ಅಳವಡಿಸಲು ಕ್ರಮ ವಹಿಸಲಾಗುವುದು. ಅಲ್ಲದೆ ಗ್ರಾಮಕ್ಕೆ ಅಗತ್ಯ ಸಾಮಗ್ರಿ ಯನ್ನು ರಾಜ್ಯದ ಒಳಗೆ ಸಾಗಾಟ ಮಾಡಲು ಬದಲಿ ವ್ಯವಸ್ಥೆ ಮಾಡಲಾಗು ವುದು ಎಂದರು.

ಕರಿಕೆ ಆರೋಗ್ಯ ವಿಸ್ತರಣಾ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ವೀಕ್ಷಿಸಿ, ತುರ್ತಾಗಿ ಕೆಲವು ಅಗತ್ಯ ಕಾಮಗಾರಿ ಯನ್ನು ನಿರ್ವಹಣೆ ಮಾಡಲು ಸೂಚನೆ ನೀಡಿದರು. ಅಲ್ಲದೇ ಅಗತ್ಯವಿರುವ ಔಷಧಿಗಳನ್ನು ತುರ್ತಾಗಿ ಸರಬರಾಜು ಮಾಡಲು ಜಿಲ್ಲಾಡಳಿತಕ್ಕೆ ಸೂಚಿಸಲಾಗುವುದು. ಭಾಗಮಂಡಲ ಕರಿಕೆ ರಸ್ತೆಯ ಕಾಮಗಾರಿಯನ್ನು ಲಾಕ್‍ಡೌನ್ ಸ್ವಲ್ಪ ಮಟ್ಟಿಗೆ ಸಡಿಲಗೊಂಡ ಕೂಡಲೇ ಪ್ರಾರಂಭ ಮಾಡಲಾಗುವುದು ಎಂದರು. ಈ ಸಂದರ್ಭ ಜಿಪಂ ಸದಸ್ಯೆ ಕವಿತಾ, ಗ್ರಾಪಂ ಅಧ್ಯಕ್ಷ ಬಾಲಚಂದ್ರ ನಾಯರ್, ಅಭಿವೃದ್ಧಿ ಅಧಿಕಾರಿ ಬಿಪಿನ್, ಪ್ರಮುಖರಾದ ಹೊಸಮನೆ ಹರೀಶ್, ರಮಾನಾಥ ಬೇಕಲ್, ಕೋಡಿ ಪೊನ್ನಪ್ಪ, ಕಾಳನ ರವಿ ಸೇರಿದಂತೆ ಪ್ರಮುಖರು ಹಾಜರಿದ್ದರು.

Translate »