ಕರ್ನಾಟಕ ಆಹಾರ ನಿಗಮದ ಉಗ್ರಾಣಕ್ಕೆ ಡಿಸಿ ದಿಢೀರ್ ಭೇಟಿ: ದಾಸ್ತಾನು ಪರಿಶೀಲನೆ
ಚಾಮರಾಜನಗರ

ಕರ್ನಾಟಕ ಆಹಾರ ನಿಗಮದ ಉಗ್ರಾಣಕ್ಕೆ ಡಿಸಿ ದಿಢೀರ್ ಭೇಟಿ: ದಾಸ್ತಾನು ಪರಿಶೀಲನೆ

April 22, 2020

ಚಾಮರಾಜನಗರ, ಏ.21- ನಗರದ ಕರ್ನಾಟಕ ಆಹಾರ ನಾಗರಿಕ ಸರಬ ರಾಜು ನಿಗಮದ ಉಗ್ರಾಣಕ್ಕೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಂಗಳವಾರ ದಿಢೀರ್ ಭೇಟಿ ನೀಡಿ ಪಡಿತರ ಆಹಾರ ಧಾನ್ಯಗಳ ದಾಸ್ತಾನನ್ನು ಪರಿಶೀಲಿಸಿದರು.

ಯಾವ ಸುಳಿವು ನೀಡದೇ ಅನೀಕ್ಷಿತ ವಾಗಿ ಆಹಾರ ನಿಗಮದ ಉಗ್ರಾಣಕ್ಕೆ ಭೇಟಿ ಕೊಟ್ಟ ಜಿಲ್ಲಾಧಿಕಾರಿಗಳು, ಆಹಾರ ನಿಗಮದ ಉಗ್ರಾಣದಲ್ಲಿದ್ದ ಪಡಿತರಗಳ ಬಗ್ಗೆ ವ್ಯಾಪಕವಾಗಿ ಪರಿಶೀಲಿಸಿದರು.

ನ್ಯಾಯಬೆಲೆ ಅಂಗಡಿಗಳಿಗೆ ವಿತರಿಸಿರುವ ಪಡಿತರ ಪ್ರಮಾಣ, ಎತ್ತುವಳಿ ಹಾಗೂ ದಾಸ್ತಾನು ಮಾಡಿರುವ ಲೆಕ್ಕಪತ್ರ ಪರಿ ಶೀಲಿಸಿದ ಅವರು ಭೌತಿಕ ಹಾಗೂ ಲಿಖಿತ ವಾಗಿ ವಹಿಗಳಲ್ಲಿ ನಮೂದು ಮಾಡದಿ ರುವ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಆನ್‍ಲೈನ್ ಮೂಲಕ ದಾಖಲು ಎಂಬ ಸಬೂಬು ಹೇಳುವುದು ಬೇಡ. ಪ್ರತಿ ವಿತರಣೆ ಹಾಗೂ ದಾಸ್ತಾನು ಬಗ್ಗೆ ಲಿಖಿತವಾಗಿ ವಹಿಗಳಲ್ಲಿ ದಾಖಲಿಸ ಬೇಕು. ವಹಿಗಳಲ್ಲಿ ದಾಖಲು ಮಾಡಲು ತೊಂದರೆ ಏನಿದೆ? ಎಂದು ಪ್ರಶ್ನಿಸಿದ ಅವರು ನಿಯಮಾನುಸಾರ ನಮೂದು ಮಾಡುವಂತೆ ತಾಕೀತು ಮಾಡಿದರು.

ಪಡಿತರ ದಾಸ್ತಾನು ಮಾಡುವಾಗ ಹಳೆಯ ಹಾಗೂ ಇತ್ತೀಚಿನ ದಾಸ್ತಾನು ಗಳನ್ನು ವಿಂಗಡಿಸಬೇಕು. ಲೆಕ್ಕಪತ್ರಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ನಿಮ್ಮ ಇಚ್ಚೆಗೆ ಅನುಸಾರವಾಗಿ ಕೆಲಸ ನಿರ್ವಹಿಸಿ ನಿರ್ಲಕ್ಷ್ಯ ವಹಿಸಿದರೇ ಸಹಿಸಲಾಗುವು ದಿಲ್ಲ ಎಂದು ಎಚ್ಚರಿಕೆ ನೀಡಿದರು.

ಸ್ಟಾಕ್ ರಿಜಿಸ್ಟರ್ ಅನ್ನು ಇನ್ನು ಮುಂದೆ ಆಯಾ ದಿನವೇ ದಾಸ್ತಾನು ವಿತರಣೆ ಅನುಸಾರ ದಾಖಲಿಸಬೇಕು. ಲೆಕ್ಕಪತ್ರದಲ್ಲಿ ಗೊಂದಲವಿರಬಾರದು. ಆಹಾರ ಇಲಾಖೆ ಶಿರಸ್ತೇದಾರರು ಆಗಿಂದ್ದಾಗ್ಗೆ ಗೋದಾಮಿಗೆ ಭೇಟಿ ನೀಡಿ ತಪಾಸಣೆ ಮಾಡಬೇಕು. ಆಹಾರ ಇಲಾಖೆಯ ಹಿರಿಯ ಅಧಿಕಾರಿಗಳು ಮೇಲುಸ್ತುವಾರಿ ಮಾಡುವಂತೆ ನಿರ್ದೇಶನ ನೀಡಿದರು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಆರ್.ರಾಚಪ್ಪ, ತಹಶೀಲ್ದಾರ್ ಜೆ.ಮಹೇಶ್, ಆಹಾರ ನಿಗಮದ ಜಿಲ್ಲಾ ವ್ಯವಸ್ಥಾಪಕ ಬಾಲ ಕೃಷ್ಣ, ಆಹಾರ ಶಿರಸ್ತೇದಾರ್ ಲಕ್ಷ್ಮೀ, ಗೋದಾಮು ವ್ಯವಸ್ಥಾಪಕ ಲಕ್ಕೇಗೌಡ ಇದ್ದರು.

Translate »