ಪುಣಜನೂರು ಚೆಕ್‍ಪೋಸ್ಟ್, ಅಂಗನವಾಡಿ ಕೇಂದ್ರಕ್ಕೆ ಶಾಸಕ ಭೇಟಿ: ಪರಿಶೀಲನೆ
ಚಾಮರಾಜನಗರ

ಪುಣಜನೂರು ಚೆಕ್‍ಪೋಸ್ಟ್, ಅಂಗನವಾಡಿ ಕೇಂದ್ರಕ್ಕೆ ಶಾಸಕ ಭೇಟಿ: ಪರಿಶೀಲನೆ

April 22, 2020

ಚಾಮರಾಜನಗರ ಏ.21- ತಾಲೂಕಿನ ಕಾಡಂಚಿನ ಗ್ರಾಮ ಪುಣಜನೂರಿನ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಶಾಸಕ ಸಿ.ಪುಟ್ಟರಂಗಶೆಟ್ಟಿ ಸರ್ಕಾರದ ವತಿಯಿಂದ ವಿತರಿಸಿರುವ ಆಹಾರ ಧಾನ್ಯ ಗಳ ದಾಸ್ತಾನನ್ನು ಪರಿಶೀಲಿಸಿದರು.

ಪುಣಜನೂರಿನಲ್ಲಿ ವಾಸಿಸುವ ಗಿರಿಜನರಿಗೆ ಸರ್ಕಾರದಿಂದ ಪೂರೈಕೆ ಯಾಗಲಿರುವ ಪೌಷ್ಟಿಕ ಆಹಾರದ ಧಾನ್ಯ ಗಳಾದ ಅಕ್ಕಿ, ರಾಗಿ, ಜೋಳ, ಸಕ್ಕರೆ, ಬೆಲ್ಲ, ಅಡುಗೆ ಎಣ್ಣೆ, ತುಪ್ಪ ಆಹಾರ ಪದಾರ್ಥ ಗಳ ಪ್ರಮಾಣವನ್ನು ಪರಿಶೀಲಿಸಿದರು. ನಂತರ ಕೊರೊನಾ ಹಿನ್ನೆಲೆಯಲ್ಲಿ ತಪಾಸಣೆಗಾಗಿ ಪುಣಜನೂರಿನಲ್ಲಿ ನಿರ್ಮಿಸಿರುವ ಚೆಕ್‍ಪೋಸ್ಟ್‍ಗೆ ಭೇಟಿ ನೀಡಿ ಅಗತ್ಯ ವಸ್ತುಗಳ ಸಾಗಾಣಿಕೆ ವಾಹನಗಳಿಗೆ ರಾಸಾಯನಿಕ ಸಿಂಪಡನೆ ಮಾಡಲಾಗುತ್ತಿರುವ ಬಗ್ಗೆ ವೀಕ್ಷಿಸಿದರು. ಕೊರೊನಾ ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆ ಸೂಚನೆಯಂತೆ ವಾಹನಗಳಿಗೆ ರಾಸಾಯನಿಕ ಸಿಂಪಡನೆ ಹಾಗೂ ವಾಹನ ಸವಾರರ ವೈದ್ಯಕೀಯ ತಪಾಸಣೆ ಬಗ್ಗೆ ಚೆಕ್ ಪೋಸ್ಟ್‍ನಲ್ಲಿದ್ದ ವೈದ್ಯರು ಹಾಗೂ ಪೊಲೀಸರಿಂದ ವಾಹನ ಬಗ್ಗೆ ಮಾಹಿತಿ ಪಡೆದರು.

ಈ ವೇಳೆ ತಾಪಂ ಸದಸ್ಯ ಪಿ.ಕುಮಾರ್ ನಾಯ್ಕ, ಗ್ರಾಪಂ ಮಾಜಿ ಉಪಾಧ್ಯಕ್ಷ ಷಾಮೀರ್ ಪಾಷಾ ಇತರರಿದ್ದರು.

Translate »