ಕಾಡಿಗೆ ಬೆಂಕಿಹಚ್ಚಿ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ನಾಲ್ವರ ಬಂಧನ
ಚಾಮರಾಜನಗರ

ಕಾಡಿಗೆ ಬೆಂಕಿಹಚ್ಚಿ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ನಾಲ್ವರ ಬಂಧನ

April 22, 2020

ಹನೂರು, ಏ.21- ಕಾಡಿಗೆ ಬೆಂಕಿಯಿಟ್ಟು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ನಾಲ್ವರು ಖದೀಮರನ್ನು ಬಂಧಿಸಿರುವ ಘಟನೆ ಕಾವೇರಿ ವನ್ಯಧಾಮದ ಕೊತ್ತನೂರು ವಲಯದಲ್ಲಿ ನಡೆದಿದೆ.

ಕೊಳ್ಳೇಗಾಲ ತಾಲೂಕಿನ ಜಾಗೇರಿ ಗ್ರಾಮದ ವಿನ್ಸೆಂಟ್, ಸಗಾಯ್ ರಾಜ್, ಚಾರ್ಲಿಸ್ ಸವರಿನಾಥನ್ ಹಾಗೂ ಜ್ಞಾನ ಪ್ರಕಾಶ್ ಬಂಧಿತ ಬೇಟೆಗಾರರು. ಆರೋಪಿ ಗಳು ಕಾಡಿಗೆ ಬೆಂಕಿಯಿಟ್ಟು ಅರಣ್ಯ ಇಲಾಖೆ ಸಿಬ್ಬಂದಿಗಳ ಗಮನ ಬೇರೆಡೆಗೆ ಸೆಳೆದು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದರು ಎನ್ನಲಾಗಿದೆ. ಈ ಹಿಂದೆಯೂ ಬೇಟೆಯಾಡಿ ಆರೋಪಿಗಳು ಸಿಕ್ಕಿಬಿದ್ದಿದ್ದರು ಎಂದು ಡಿ ಎಫ್‍ಓ ಡಾ.ಎಸ್. ರಮೇಶ್ ತಿಳಿಸಿದ್ದಾರೆ.

ಪರಿಕರಗಳ ವಶ: ಅರಣ್ಯ ಪ್ರದೇಶದಲ್ಲಿ ಬೇಟೆಗಾಗಿ ಬಳಸಲಾಗುತ್ತಿದ್ದ ನಾಡ ಬಂದೂಕು, ಡೈನಾಮೇಟ್, ಮದ್ದುಗುಂಡು, ಚಾಕುಗಳು, ಸಾಂಬಾರ ಪದಾರ್ಥಗಳು, ಬೇಟೆಯಾಡಿರುವ ಟಿಟ್ಟುಬ ಪಕ್ಷಿ ಯನ್ನು ವಶಪಡಿಸಿಕೊಳ್ಳಲಾಗಿದೆ.

ಲಾಕ್‍ಡೌನ್ ಎಫೆಕ್ಟ್ ಕಳ್ಳಬೇಟೆಗಾರ ರಿಗೆ ವರದಾನ: ಲಾಕ್‍ಡೌನ್‍ನಿಂದ ಕಳ್ಳ ಬೇಟೆಗಾರರ ಕರಾಮತ್ತು ಹೆಚ್ಚಾಗುತ್ತಿದ್ದು, ಜಿಲ್ಲೆಯಲ್ಲಿ ಈ ವರ್ಷ ಕಾವೇರಿ ವನ್ಯಜೀವಿ ಧಾಮದಲ್ಲಿ ಪದೇ ಪದೇ ಬೆಂಕಿ ಬೀಳು ತ್ತಿರುವುದು ಅರಣ್ಯ ಇಲಾಖೆಗೆ ತಲೆ ನೋವಾಗಿ ಪರಿಣಮಿಸಿತ್ತು. ಇದರಿಂದಾಗಿ ಕಳೆದ ಒಂದು ವಾರದಿಂದ ನೂರಾರು ಹೆಕ್ಟೇರ್ ಅರಣ್ಯ ಪ್ರದೇಶ ಕಳ್ಳ ಬೇಟೆಗಾರ ರಿಂದ ಬೆಂಕಿಗೆ ಆಹುತಿಯಾಗಿದೆ. ಇಂದು ಬೆÉೀಟೆಗಾರರು ತಮ್ಮ ಚಾಳಿಯನ್ನು ಮುಂದು ವರಿಸಿದ್ದರಿಂದ ಅರಣ್ಯ ಇಲಾಖೆ ಸಿಬ್ಬಂದಿ ಕಟ್ಟುನಿಟ್ಟಿನ ಗಸ್ತು ನಡೆಸಿದ ಪರಿ ಣಾಮ ಅರಣ್ಯ ಇಲಾಖೆ ಅಧಿಕಾರಿಗಳು ಬೇಟೆಗಾರ ರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಎಸಿಎಫ್ ಅಂಕ ರಾಜು, ಆರ್‍ಎಫ್‍ಓ ರಾಜಶೇಖರಪ್ಪ, ಅರಣ್ಯ ರಕ್ಷಕರಾದ ಮಧುಕುಮಾರ್, ಅನಿಲ್ ವಾಲೀಕಾರ, ಪುಂಡಲೀಕ ಕಂಠೇಕರ, ರಾಘವೇಂದ್ರ ರಾಥೋಡ್, ಅನಿಲ್ ಪಡಶೆಟ್ಟಿ, ಮಾದೇಶ್, ಚಾಲಕ ಮಾದೇಶ್ ಪಾಲ್ಗೊಂಡಿದ್ದರು.

Translate »