ಶಾಲೆ ಉಳಿಸಿಕೊಳ್ಳಲು ಮಕ್ಕಳಿಬ್ಬರ ಹೋರಾಟ
ಸಿನಿಮಾ

ಶಾಲೆ ಉಳಿಸಿಕೊಳ್ಳಲು ಮಕ್ಕಳಿಬ್ಬರ ಹೋರಾಟ

September 4, 2020

ಇತ್ತೀಚಿನ ದಿನಗಳಲ್ಲಿ ಎಜುಕೇಶನ್ ಅನ್ನುವುದು ಬ್ಯುಸಿನೆಸ್ ಆಗಿಬಿಟ್ಟಿದೆ. ಇನ್ನು ಸರ್ಕಾರಿ ಶಾಲೆಗಳನ್ನು ಬಲವಂತವಾಗಿ ಮುಚ್ಚಲಾಗುತ್ತಿದೆ. ಬಡಮಕ್ಕಳು ವಿದ್ಯೆ ಕಲಿಯಲು ಆಧಾರಸ್ಥಂಭವಾಗಿರುವ ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರದ ಹಿಂದಿರುವ ಕಾಣದ ಕೈಗಳು ಯಾವುವು?, ತಮ್ಮ ಶಾಲೆಯನ್ನು ಉಳಿಸಿಕೊಳ್ಳಲು ಇಬ್ಬರು ಮಕ್ಕಳು ಪಟ್ಟಶ್ರಮ ಎಂಥದ್ದು ಎಂದು ಹೇಳುವ ಚಿತ್ರವೊಂದು ಮೊನ್ನೆ ಸೆಟ್ಟೇರಿದೆ. ಆ ಚಿತ್ರದ ಹೆಸರೇ ನಮ್ಮ ಪ್ರೀತಿಯ ಶಾಲೆ. ಮೊನ್ನೆ ಬೆಂಗಳೂರಿನ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಈ ಚಿತ್ರದ ಮುಹೂರ್ತ ಸಮಾರಂಭ ನೆರವೇರಿತು.

ಛಾಯಾಗ್ರಾಹಕರಾಗಿ ಹಲವಾರು ಚಿತ್ರಗಳಿಗೆ ಕೆಲಸ ಮಾಡಿರುವ ಸೆಲ್ವಂ ಈ ಚಿತ್ರಕ್ಕೆ ಆ್ಯಕ್ಷನ್‍ಕಟ್ ಹೇಳುತ್ತಿದ್ದಾರೆ. ಇದೇ ಮೊದಲಬಾರಿಗೆ ಸೆಲ್ವಂ ಚಿತ್ರದ ನಿರ್ದೇಶನ ಮಾಡುವುದರ ಜೊತೆಗೆ ನಿರ್ಮಾಪಕರೂ ಆಗುತ್ತಿದ್ದಾರೆ. ವೈ.ಆರ್.ವೇಮಿರೆಡ್ಡಿ ಅವರು ಚಿತ್ರ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ. ಪಳನಿ ಡಿ.ಸೇನಾಪತಿ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಮುಹೂರ್ತದ ನಂತರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ನಿರ್ದೇಶಕ ಸೆಲ್ವಂ ಈವರೆಗೆ ಕ್ಯಾಮೆರಾಮ್ಯಾನ್ ಆಗಿದ್ದ ನಾನು ಮಕ್ಕಳ ಕಥೆಯೊಂದನ್ನು ಮಾಡಿಕೊಂಡು ಈ ಚಿತ್ರವನ್ನು ನಿರ್ದೇಶಿಸುತ್ತಿz್ದÉೀನೆ, ಈಚೆಗೆ ಸರ್ಕಾರಿ ಶಾಲೆಗಳನ್ನು ಒಂದೊಂದಾಗಿ ಮುಚ್ಚುತ್ತಿದ್ದಾರೆ, ಇದರ ಒಳಮರ್ಮ ಏನೆಂದು ಹುಡುಕುತ್ತಾ ಹೋದಾಗ ನನಗೆ ಈ ಕಥೆ ಹೊಳೆಯಿತು, ಬೆಂಗಳೂರು ಮತ್ತು ಕೋಲಾರ ಸುತ್ತ ಮುತ್ತ 36 ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆಸುವುದು ಎಂದು ಪ್ಲಾನ್ ಮಾಡಿಕೊಂಡಿz್ದÉೀವೆ. ಚಿತ್ರದಲ್ಲಿ 2 ಹಾಡುಗಳಿದ್ದು ಪಳನಿ ಡಿ.ಸೇನಾಪತಿ ಅವರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಹಳ್ಳಿಯಲ್ಲಿ ಮುಚ್ಚಬೇಕೆಂದು ತೀರ್ಮಾನವಾಗಿದ್ದ ತಮ್ಮ ಶಾಲೆಯನ್ನು ಉಳಿಸಿಕೊಳ್ಳಲೆಂದು ಮಕ್ಕಳಿಬ್ಬರು ಮುಖ್ಯಮಂತ್ರಿಗಳನ್ನು ಕಂಡು ಮನವರಿಕೆ ಮಾಡಲು ಬೆಂಗಳೂರಿಗೆ ಬರುತ್ತಾರೆ. ಅವರಿಗೆ ಕೊನೆಗೂ ಸಿಎಂ ಸಂಪರ್ಕಿಸಲು ಸಾಧ್ಯವಾಯಿತೇ, ಅವರು ತಮ್ಮ ಶಾಲೆಯನ್ನು ಉಳಿಸಿಕೊಂಡರೇ ಎನ್ನುವುದೇ ನಮ್ಮ ಪ್ರೀತಿಯ ಶಾಲೆ ಚಿತ್ರದ ಕಥಾಹಂದರ ಎಂದು ಹೇಳಿದರು.

ಸಂಗೀತ ನಿರ್ದೇಶಕ ಪಳನಿ ಮಾತನಾಡಿ, ಈ ಮಕ್ಕಳು ಓದುತ್ತಿರುವ ಶಾಲೆಯಲ್ಲಿ ಒಬ್ಬರೇ ಟೀಚರ್ ಇದ್ದು ಎಲ್ಲಾ ವಿಷಯಗಳನ್ನು ಅವರೇ ಮಾಡುತ್ತಿರುತ್ತಾರೆ. ಅದೇ ಈ ಚಿತ್ರದ ಪ್ರಮುಖ ಅಂಶ. ಸೊಸೈಟಿಗೆ ತುಂಬಾ ಹತ್ತಿರವಾಗುವಂಥ ವಿಷಯ ಈ ಚಿತ್ರದಲ್ಲಿದೆ ಎಂದು ಹೇಳಿದರು. ಮಾ.ಜೀವಿತ್ ಭೂಷಣ್, ಅಚ್ಯುತ್‍ಕುಮಾರ್, ದತ್ತಣ್ಣ ಮುಂತಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

 

 

Translate »