- ಸಾರ್ವಜನಿಕರಲ್ಲಿ ಆತಂಕ, ಕುತೂಹಲ
- ವೈದ್ಯಾಧಿಕಾರಿಯಿಂದ ಆರೋಗ್ಯ ತಪಾಸಣೆ
- ಗೊಂದಲಕ್ಕೆ ತೆರೆ ಎಳೆದ ವೈದ್ಯರು; ಸ್ಥಳೀಯರು ನಿರಾತಂಕ
ಮೈಸೂರು,ಮಾ.23(ಎಂಟಿವೈ)- ಚೀನಾದ ವುಹಾನ್‍ನಲ್ಲಿ ಜನ್ಮ ತಳೆದು ಜಗತ್ತಿನ 160ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ತಲ್ಲಣವನ್ನುಂಟು ಮಾಡಿರುವ ನೊವೆಲ್ ಕೊರೊನಾ ಮೈಸೂರಿಗೂ ಎಂಟ್ರಿಯಾಗಿ ಭೀತಿ ಮೂಡಿಸಿರುವ ಬೆನ್ನಲ್ಲೇ ಲಲಿತಮಹಲ್ ಪ್ಯಾಲೇಸ್ ಬಳಿ ಖಾಲಿ ಜಾಗದಲ್ಲಿ ಕಳೆದ ಐದು ದಿನದಿಂದ ಗೆಳತಿ ಹಾಗೂ ಶ್ವಾನದೊಂದಿಗೆ ಚೀನಿ ಯುವಕನೊಬ್ಬ ಕ್ಯಾರವಾನ್‍ನಲ್ಲಿ ಬೀಡುಬಿಟ್ಟಿರುವುದು ಬೆಳಕಿಗೆ ಬಂದಿದೆ.
ನಿಯಮಾನುಸಾರ ಒಂದು ವರ್ಷದ ಹಿಂದೆಯೇ ತನ್ನ ವಾಹನ(ಕ್ಯಾರವಾನ್)ದಲ್ಲೇ ಭಾರತಕ್ಕೆ ಪ್ರವಾಸ ಬಂದಿರುವ ಚೀನಾ ಪ್ರಜೆ ಬ್ಯಾಟ್ರಿಕ್ ಎಂಬಾತ ಮಣಿಪುರದ ನಿವಾಸಿ ಬಿಜಿಯ ಎಂಬ ಗೆಳತಿಯೊಂದಿಗೆ ದೇಶದ ವಿವಿಧ ರಾಜ್ಯಗಳಲ್ಲಿ ಪ್ರವಾಸ ಮುಗಿಸಿ, ಕಳೆದ 3 ತಿಂಗಳ ಹಿಂದೆ ಕರ್ನಾಟಕಕ್ಕೆ ಬಂದಿದ್ದಾರೆ. 5-6 ದಿನದ ಹಿಂದೆ ಮೈಸೂರಿಗೆ ಬಂದಿರುವ ಈ ಜೋಡಿ, ಲಲಿತಮಹಲ್ ಪ್ಯಾಲೇಸ್ ಪಕ್ಕ ಇರುವ ಮೈದಾನದಲ್ಲಿ ಬೀಡು ಬಿಟ್ಟಿದೆ. ಚೀನಾ (ಎ-01ಡಿ3ಸಿ) ನೋಂದಣಿ ಸಂಖ್ಯೆ ಹೊಂದಿರುವ ವಾಹನ ದಿನ ವಿಡೀ ನಿಂತಿರುವುದನ್ನು ಗಮನಿಸಿದ ವಾಯು ವಿಹಾರಿಗಳು, ವಾಹನದ ಸಮೀಪ ಹೋಗಿ ಪರಿ ಶೀಲಿಸಿದಾಗ ಚೀನಾ ಯುವಕ, ಯುವತಿ ಹಾಗೂ ಸಾಕು ಶ್ವಾನವೊಂದು ಇರುವುದು ಕಂಡು ಬಂದಿದೆ.
ವಾಹನವನ್ನೇ ವಾಸ ಮಾಡಲು ಯೋಗ್ಯವಾದ ಮನೆಯಂತೆ ಮಾರ್ಪಡಿಸಲಾಗಿದ್ದು(ಕ್ಯಾರವಾನ್), ಅದರಲ್ಲಿ ಈ ಜೋಡಿ ವಾಸಿಸುತ್ತಿರುವುದು ಕಂಡು ಬಂದಿದೆ. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಭಯ ಗೊಂಡ ಸ್ಥಳೀಯರು ನಜರ್‍ಬಾದ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಳೆದ ಎರಡು ದಿನದ ಹಿಂದೆಯೇ ಜಿಲ್ಲಾ ಆರೋಗ್ಯಾಧಿಕಾರಿಗಳು ಕ್ಯಾರ ವಾನ್‍ನಲ್ಲಿರುವ ಜೋಡಿಯನ್ನು ತಪಾಸಣೆಗೊಳ ಪಡಿಸಿದ್ದಾರೆ. ಇವರಿಗೆ ಕೊರೊನಾ ಸೋಂಕು ಇಲ್ಲದೇ ಇರುವುದು ದೃಢಪಟ್ಟಿದೆ. ಇದರಿಂದ ಆ ಜೋಡಿಯಿಂದ ಸ್ಥಳೀಯರ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ ಎಂದು ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಇದೀಗ ವಾಯುವಿಹಾರಿ ಗಳು ಕ್ಯಾರವಾನ್‍ನಲ್ಲಿ ವಾಸ್ತವ್ಯ ಹೂಡಿರುವ ಜೋಡಿಯೊಂದಿಗೆ ಮಾತನಾಡಲಾರಂಭಿಸಿದ್ದಾರೆ.
ಈ ಕುರಿತು ಸೋಮವಾರ ಪತ್ರಕರ್ತರೊಂದಿಗೆ ಚೀನಿ ಪ್ರಜೆ ಬ್ಯಾಟ್ರಿಕ್ ಹಾಗೂ ಆತನ ಗೆಳತಿ ಮಣಿ ಪುರ ಬಿಜಿಯಾ ಮಾತನಾಡಿ, ಭಾರತ ಪ್ರವಾಸ ಕೈಗೊಂಡಿದ್ದೇವೆ. ವರ್ಷದ ಹಿಂದೆ ಭಾರತಕ್ಕೆ ಬಂದು ವಿವಿಧ ರಾಜ್ಯಗಳಲ್ಲಿ ಸಂಚರಿಸಿದ್ದೇವೆ. ನಾವು ಆರೋಗ್ಯದಿಂದ ಕೂಡಿದ್ದೇವೆ. ನಮ್ಮಿಂದ ಸ್ಥಳೀಯರಿಗೆ ಯಾವುದೇ ತೊಂದರೆ ಉಂಟಾಗಿಲ್ಲ. ಸ್ಥಳೀಯರು ನಮ್ಮೊಂದಿಗೆ ಮಾತನಾಡುತ್ತಿದ್ದಾರೆ. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಆರೋಗ್ಯಾಧಿಕಾರಿಗಳು ನಮ್ಮನ್ನು ತಪಾಸಣೆ ಮಾಡಿದ್ದಾರೆ. ಭಾರತಕ್ಕೆ ಬಂದು ಹಲವು ತಿಂಗಳ ನಂತರ ಕೊರೊನಾ ವೈರಸ್ ಚೀನಾದಲ್ಲಿ ಕಾಣಿಸಿಕೊಂಡಿದೆ ಎಂದರು.
ನಮ್ಮ ವಾಹನದಲ್ಲೇ ವಾಸ ಮಾಡಲು ಯೋಗ್ಯ ವಾದ ವಾತಾವರಣವಿದೆ. ಇದರಿಂದ ಹೋಟೆಲ್ ಗಳಲ್ಲಿ ರೂಮ್ ಮಾಡಲು ಪ್ರಯತ್ನಿಸಿಲ್ಲ. ನಮಗೆ ಅಗತ್ಯವಾದ ವಸ್ತು ಖರೀದಿಸಲು ಸಿಟಿಗೆ ಹೋಗು ತ್ತೇವೆ. ಆ ನಂತರ ಮತ್ತೆ ಇದೇ ಸ್ಥಳಕ್ಕೆ ಬರುತ್ತೇವೆ. ಇದು ನಮಗೆ ಸುರಕ್ಷಿತ ಸ್ಥಳ ಎನಿಸಿದೆ ಎಂದರು.