ಸೋರಿಕೆಯಾಗಿದ್ದ ಕ್ಲೋರಿನ್ ಸಿಲಿಂಡರ್ ಸ್ಥಳಾಂತರ
ಮೈಸೂರು

ಸೋರಿಕೆಯಾಗಿದ್ದ ಕ್ಲೋರಿನ್ ಸಿಲಿಂಡರ್ ಸ್ಥಳಾಂತರ

March 9, 2022

ಚಿಕ್ಕಮಗಳೂರು ಏಜೆನ್ಸಿಯಿಂದಲೇ ವಾಹನದ ಮೂಲಕ ಸಾಗಣೆ

ಆಸ್ಪತ್ರೆಯಲ್ಲಿ ಇನ್ನೂ ೨೭ ಮಂದಿಗೆ ಚಿಕಿತ್ಸೆ

ಒಟ್ಟಾರೆ ಅಸ್ವಸ್ಥರಾಗಿದ್ದವರು ಸುಮಾರು ೮೭ ಮಂದಿ

ಮೈಸೂರು, ಮಾ.೮(ಎಸ್‌ಬಿಡಿ)- ಮೈಸೂ ರಿನ ಕೆಆರ್‌ಎಸ್ ಮುಖ್ಯರಸ್ತೆಯ ರೈಲ್ವೆ ಕ್ವಾರ್ಟರ್ಸ್ ಆವರಣದಲ್ಲಿ ಸೋರಿಕೆಯಾಗಿದ್ದ ಕ್ಲೋರಿನ್ ಸಿಲಿಂಡರ್ ಅನ್ನು ಮಂಗಳವಾರ ಬೆಳಗ್ಗೆ ಸ್ಥಳಾಂತರ ಮಾಡಲಾಯಿತು.

ಕ್ಲೋರಿನ್ ಸಿಲಿಂಡರ್ ಸರಬರಾಜು ಮಾಡುತ್ತಿದ್ದ ಚಿಕ್ಕಮಗಳೂರಿನ ಏಜೆನ್ಸಿಗೆ ನಿನ್ನೆ ರಾತ್ರಿಯೇ ಮಾಹಿತಿ ನೀಡಿ, ಅಲ್ಲಿನ ಸಿಬ್ಬಂದಿಯನ್ನು ಕರೆಯಿಸಲಾಗಿತ್ತು. ಮಂಗಳವಾರ ಬೆಳಗ್ಗೆ ೬ ಗಂಟೆ ವೇಳೆಗೆ ಜೆಸಿಬಿ ಮೂಲಕ ಕ್ಲೋರಿನ್ ಸಿಲಿಂಡರ್ ಅನ್ನು ಚಿಕ್ಕಮಗಳೂರಿನಿಂದಲೇ ಕರೆ ತಂದಿದ್ದ ಟಾಟಾ ಏಸ್ ಗೂಡ್ಸ್ ವಾಹನ ಕ್ಕಿಡಲಾಯಿತು. ಸದ್ಯ ಸೋರಿಕೆಯಾಗಿ ಆತಂಕ

ಸೃಷ್ಟಿಸಿದ್ದ ಕ್ಲೋರಿನ್ ಸಿಲಿಂಡರ್ ಮೈಸೂರಿನಿಂದ ಸ್ಥಳಾಂತರಗೊAಡಿದ್ದು, ಏಜೆನ್ಸಿಯವರು ಅದನ್ನು ನಿಗದಿತ ಸ್ಥಳದಲ್ಲಿ ದುರ್ಬಲಗೊಳಿಸಲಿದ್ದಾರೆ.
ಬಂದ್ ಮಾಡಲಾಗಿದ್ದ ಕೆಆರ್‌ಎಸ್ ರಸ್ತೆ ಹಾಗೂ ಯಾದವಗಿರಿ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಯಿತು. ಸಿಲಿಂಡರ್ ಸ್ಥಳಾಂತರದ ನಂತರ ಬೋರ್‌ವೆಲ್ ನೀರಿನ ಶುದ್ಧೀಕರಣಕ್ಕಾಗಿ ಚಿಕ್ಕಮಗಳೂರಿನ ಏಜೆನ್ಸಿ ಮೂಲಕ ೨೦೧೫ರಲ್ಲಿ ಕ್ಲೋರಿನ್ ಸಿಲಿಂಡರ್ ಅಳವಡಿಸಲಾಗಿತ್ತು. ಆದರೆ ರೈಲ್ವೆ ವಸತಿ ಸಮುಚ್ಛಯಗಳಿಗೆ ನದಿ ನೀರು ಪೂರೈಕೆ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಿಂದ ಈ ಕ್ಲೋರಿನ್ ಸಿಲಿಂಡರ್ ಅನುಪ ಯುಕ್ತವಾಗಿತ್ತು ಎಂದು ಹೇಳಲಾಗಿದೆ.

ಒಟ್ಟು ೮೭ ಮಂದಿಗೆ ಪರಿಣಾಮ: ಸೋಮವಾರ ಮಧ್ಯಾಹ್ನ ೩ ಗಂಟೆ ಸಮಯದಲ್ಲಿ ಕ್ಲೋರಿನ್ ಸಿಲಿಂಡರ್ ಸೋರಿಕೆಯಾ ಗಿದ್ದು, ಕೆಲ ಹೊತ್ತಿನಲ್ಲಿ ಪ್ರಬಲ ವಾಸನೆ ಸುತ್ತಮುತ್ತಲ ಪ್ರದೇಶ ಆವರಿಸಿತ್ತು. ಕೆಆರ್‌ಎಸ್ ರಸ್ತೆ, ಯಾದವಗಿರಿ ರಸ್ತೆಯಲ್ಲಿ ವಾಹನಗಳಲ್ಲಿ ತೆರಳುತ್ತಿದ್ದವರು, ಪಾದ ಚಾರಿಗಳು, ರೈಲ್ವೆ ಕ್ವಾರ್ಟರ್ಸ್ನ ನಿವಾಸಿ ಗಳು, ಪರಿಹಾರ ಕಾರ್ಯಾಚರಣೆಗೆ ಮುಂದಾದ ಅಗ್ನಿಶಾಮಕ ಸಿಬ್ಬಂದಿ, ರೈಲ್ವೆ ಪೊಲೀಸರು ಅಸ್ವಸ್ಥಗೊಂಡಿದ್ದರು. ಎಲ್ಲರನ್ನೂ ರೈಲ್ವೆ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನಂತರ ಕೆ.ಆರ್.ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಕ್ಲೋರಿನ್ ಪರಿ ಣಾಮ ತಡವಾಗಿ ಕಾಣ ಸಿಕೊಂಡಿದ್ದರಿAದ ರಾತ್ರಿ ೯ ಗಂಟೆಯಲ್ಲೂ ಕೆಲವರು ಆಸ್ಪತ್ರೆಗೆ ದಾಖಲಾಗಿದ್ದು, ಒಟ್ಟಾರೆ ಕ್ಲೋರಿನ್ ಸೋರಿಕೆ ಯಿಂದ ೮೭ ಮಂದಿ ಅಸ್ವಸ್ಥಗೊಂಡು ಚಿಕಿತ್ಸೆ ಪಡೆದಿರುವುದಾಗಿ ರೈಲ್ವೆ ಇಲಾಖೆಯಿಂದ ಅಧಿಕೃತ ಮಾಹಿತಿ ಲಭ್ಯವಾಗಿದೆ.

Translate »