ಉಕ್ರೇನ್‌ನಲ್ಲಿ ರಷ್ಯಾ ರಣಕೇಕೆ
ಮೈಸೂರು

ಉಕ್ರೇನ್‌ನಲ್ಲಿ ರಷ್ಯಾ ರಣಕೇಕೆ

March 9, 2022

ರಾಜಧಾನಿ ಕೀವ್ ಮೇಲೆರಗಲು ಕಾದು ಕುಳಿತಿರುವ ರಷ್ಯಾ ಸೇನೆ

ಮುಂದುವರೆದ ಬಾಂಬ್, ಮಿಸೈಲ್ ದಾಳಿಯಿಂದ ಉಕ್ರೇನ್ ನಗರಗಳ ರಸ್ತೆಗಳಲ್ಲಿ ಚೆಲ್ಲಾಡಿದ ಹೆಣಗಳು

ಕದನ ವಿರಾಮ ಘೋಷಿಸಿ ಕಾದು ಹೊಡೆಯಲು ರಷ್ಯಾ ರಣತಂತ್ರ

ಬೀದಿಗೆ ಬಿದ್ದ ಮಕ್ಕಳು, ಕುಟುಂಬಗಳೇ ಛಿದ್ರ ಛಿದ್ರ; ಜೀವ ಉಳಿಸಿಕೊಳ್ಳಲು ಪಲಾಯನ

ದೇಶಭಕ್ತಿ ಅಸ್ತçವನ್ನೇ ಹಿಡಿದು ಅಸ್ತಿತ್ವಕ್ಕಾಗಿ ಹೋರಾಡುತ್ತಿರುವ ಉಕ್ರೇನ್

ಕೀವ್(ಉಕ್ರೇನ್), ಮಾ. ೮- ಸಮರ ಮುಂದು ವರೆಸಿರುವ ರಷ್ಯಾ, ಉಕ್ರೇನ್ ಸರ್ವನಾಶಕ್ಕೆ ಶಪಥ ಮಾಡಿರುವಂತೆ ರಣಕೇಕೆ ಹಾಕುತ್ತಿದೆ. ಯುದ್ಧ ಪ್ರಾರಂಭವಾಗಿ ೧೩ ದಿನಗಳಾಗಿದ್ದು, ಎಲ್ಲಿ ನೋಡಿ ದರೂ ಬಾಂಬ್, ಮಿಸೈಲ್, ಗುಂಡಿನ ಸದ್ದು, ರಾಕೆಟ್ ದಾಳಿ. ಉಕ್ರೇನ್ ಸಂಪೂರ್ಣ ಧ್ವಂಸವಾಗಿ, ಕಣ್ಣಾಯಿಸಿದೆಡೆ ಹೆಣಗಳ ರಾಶಿಯೇ ಬಿದ್ದಿದೆ.
ಉಕ್ರೇನ್‌ನ ೯ ನಗರಗಳಲ್ಲಿ ಕದನ ವಿರಾಮ ಘೋಷಿಸಿರುವ ರಷ್ಯಾ ಜಾಣ ನಡೆ ಇಟ್ಟಿದೆ. ಜಾಗತಿಕ ಮಟ್ಟದಲ್ಲಿ ತನ್ನ ಹೆಸರು ಉಳಿಸಿಕೊಂಡೇ ಉಕ್ರೇನ್ ಸರ್ವನಾಶಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ ಕದನ ವಿರಾಮ ರಣತಂತ್ರ ಅನುಸರಿಸುತ್ತಿದ್ದಾರೆ.

ಉಕ್ರೇನ್‌ನಲ್ಲಿರುವ ಜನರು ಮತ್ತು ವಿದೇಶಿಯನ್ನರು ಹೊರ ಹೋಗುವ ಸಲುವಾಗಿಯೇ ಕದನ ವಿರಾಮ ಘೋಷಿಸಿದ್ದು, ಅವರುಗಳು ದೇಶ ಬಿಟ್ಟು ಹೋದ ಮೇಲೆ ಇಡೀ ಉಕ್ರೇನ್ ಮೇಲೆ ದಾಳಿ ನಡೆಸಲು ನಿರ್ಧರಿಸಿದೆ. ಇದರೊಂದಿಗೆ ಉಕ್ರೇನ್ ರಾಜಧಾನಿ ಕೀವ್ ನಗರದ ಮೇಲೆರಗಲು ಸಿದ್ಧತೆ ನಡೆಸಿದ್ದು, ನಗರದ ಹೊರವಲಯದ ೨೦ ಕಿ.ಮೀ. ದೂರದಲ್ಲಿ ಸುಮಾರು ೬೪ ಕಿ.ಮೀ.ಯಷ್ಟು ಸೇನಾ ಜಮಾವಣೆ ಮಾಡಿದೆ. ಈಗಾಗಲೇ ಉಕ್ರೇನ್‌ನ ಹಲವಾರು ನಗರಗಳ ನಾಶ ಮಾಡಿ, ಮುನ್ನಡೆಯುತ್ತಿರುವ ರಷ್ಯಾ ಕೀವ್ ನಗರದ ಮೇಲೆ ಕಣ ್ಣಟ್ಟಿದ್ದು, ಶತಾಯ ಗತಾಯ ವಶಪಡಿಸಿಕೊಳ್ಳಲೇಬೇಕು ಎಂದು ಪಣ ತೊಟ್ಟಿದೆ. ಸುಮಾರು ೬೪ ಕಿಮಿ ವಿಸ್ತೀರ್ಣ ಹೊಂದಿ ರುವ ರಷ್ಯಾ ಸೇನೆಯು ಕೀವ್ ನಗರದಲ್ಲಿ ಭೋರ್ಗರೆಯುತ್ತಾ ಮುನ್ನುಗ್ತುತ್ತಿದ್ದು, ಯಾವುದೇ ಸಂದರ್ಭದಲ್ಲಿ ದಾಳಿ ನಡೆಸುವ ಸಾಧ್ಯತೆಗಳಿವೆ. ಇದಕ್ಕೆ ಪ್ರತ್ಯುತ್ತರ ನೀಡಲು ಉಕ್ರೇನ್ ಸೇನೆ ಕೂಡ ತಯಾರಿ ನಡೆಸಿದ್ದು, ಅಕ್ಕ-ಪಕ್ಕದ ಕೆಲ ದೇಶಗಳು ಬೆಂಬಲಕ್ಕೆ ನಿಂತಿವೆ ಎನ್ನಲಾಗಿದೆ. ರಷ್ಯಾ ಯುದ್ಧ ದಿಂದ ಉಕ್ರೇನ್ ದೇಶದಲ್ಲಿ ರಕ್ತದೋಕುಳಿಯೇ ಹರಿಯುತ್ತಿದ್ದು, ರಷ್ಯಾದ ೧೦ ಸಾವಿರಕ್ಕೂ ಹೆಚ್ಚು ಸೈನಿಕರನ್ನು ಹತ್ಯೆ ಮಾಡಿರುವುದಾಗಿ ಉಕ್ರೇನ್ ಸರ್ಕಾರ ಹೇಳಿಕೊಂಡಿದೆ.

 

ತನ್ನ ಶತ್ರು ದೇಶಗಳ ಪಟ್ಟಿ ಬಿಡುಗಡೆ ಮಾಡಿದ ರಷ್ಯಾ
ಮಾಸ್ಕೋ, ಮಾ. ೮- ಉಕ್ರೇನ್ ಮೇಲೆ ರಷ್ಯಾದ ಯುದ್ಧ ಮುಂದುವರೆದಿರುವAತೆಯೇ ಇತ್ತ ರಷ್ಯಾ ಸರ್ಕಾರ ತನ್ನ ಶತ್ರು ದೇಶಗಳ ಪಟ್ಟಿ ಬಿಡುಗಡೆ ಮಾಡಿ ಸಂಚಲನ ಸೃಷ್ಟಿಸಿದೆ.
ಉಕ್ರೇನ್‌ನ ಪ್ರಮುಖ ನಗರಗಳ ಮೇಲೆ ರಷ್ಯಾ ಸೇನೆ ಬಾಂಬ್‌ಗಳ ಮಳೆ ಸುರಿಯುತ್ತಲೇ ಇದೆ. ಅಂತಾರಾಷ್ಟಿçÃಯ ದೇಶಗಳ ದಿಗ್ಬಂಧನಗಳಿಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕಿವಿಗೊಡುತ್ತಿಲ್ಲ. ಉಕ್ರೇನ್ ತನ್ನ ದಾರಿಯಲ್ಲಿ ಬರುವವರೆಗೂ ಬಾಂಬ್ ದಾಳಿಯನ್ನು ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಪಟ್ಟಿಯಲ್ಲಿ ಅಮೆರಿಕ, ಬ್ರಿಟನ್ ಸೇರಿದಂತೆ ೩೧ ದೇಶಗಳು ಇವೆ. ಈ ವಿಚಾರವನ್ನ ರಷ್ಯಾದ ಮಾಧ್ಯಮಗಳು ಬಹಿರಂಗಪಡಿಸಿವೆ. ಅಮೆರಿಕ, ಬ್ರಿಟನ್, ಉಕ್ರೇನ್ ಮತ್ತು ಜಪಾನ್ ಸೇರಿದಂತೆ ಐರೋಪ್ಯ ರಾಷ್ಟçಗಳನ್ನು ಪುಟಿನ್ ತಮ್ಮ ಪರಮ ಶತ್ರುಗಳೆಂದು ಘೋಷಿಸಿದ್ದಾರೆ. ಇದಲ್ಲದೆ ಯುರೋಪಿಯನ್ ಒಕ್ಕೂಟದ ಒಟ್ಟು ೨೭ ದೇಶಗಳೂ ಕೂಡ ಈ ಪಟ್ಟಿಯಲ್ಲಿದೆ. ಉಳಿದಂತೆ ಮಾಂಟೆನೆಗ್ರೊ, ಸ್ವಿಜರ್ಲಾ್ಯಂಡ್, ಅಲ್ಬೇನಿಯಾ, ಅಂಡೋರಾ, ಐಸ್ಲಾ÷್ಯಂಡ್, ಲಿಚ್ಟೆನ್‌ಸ್ಟೆöÊನ್, ಮೊನಾಕೊ, ನಾರ್ವೆ, ಸ್ಯಾನ್ ಮರಿನೋ, ಉತ್ತರ ಮೆಸಿಡೋನಿಯಾ, ಜಪಾನ್, ದಕ್ಷಿಣ ಕೊರಿಯಾ, ಆಸ್ಟೆçÃಲಿಯಾ, ಮೈಕ್ರೋನೇಷಿಯಾ, ನ್ಯೂಜಿಲೆಂಡ್, ಸಿಂಗಾಪುರ ಮತ್ತು ಟ್ರೇವಾನ್ ಕೂಡ ಈ ಪಟ್ಟಿಯಲ್ಲಿದೆ ಎಂದು ಹೇಳಲಾಗಿದೆ.

ಪಟ್ಟಿ ಬಿಡುಗಡೆ ಏಕೆ?: ಉಕ್ರೇನ್ ಮೇಲೆ ದಾಳಿಗಿಳಿದ ಬಳಿಕ ಜಗತ್ತಿನ ಬಹುತೇಕ ಅಮೆರಿಕ ಸ್ನೇಹಿ ರಾಷ್ಟçಗಳು ರಷ್ಯಾ ಮೇಲೆ ದಿಗ್ಬಂಧನ ಹೇರುತ್ತಿವೆ. ಈ ರಾಷ್ಟçಗಳಿ ರಷ್ಯಾ ಕೂಡ ದಿಗ್ಬಂಧನ ಹೇರಿ ತಿರುಗೇಟು ನೀಡುತ್ತಿದೆಯಾದರೂ, ಭವಿಷ್ಯದ ವ್ಯವಹಾರಗಳ ದೃಷ್ಟಿಕೋನದಿಂದ ಈ ಪಟ್ಟಿ ಬಿಡುಗಡೆ ಮಾಡುವ ಮೂಲಕ ಭಾರತ, ಚೀನಾ ಸೇರಿದಂತೆ ತನ್ನ ಮಿತ್ರರಾಷ್ಟçಗಳಿಗೆ ಪರೋಕ್ಷ ಸಂದೇಶ ರವಾನಿಸಿದೆ.

ರಷ್ಯಾ ಮೇಲೆ ಅಮೆರಿಕ ಹಲವಾರು ನಿರ್ಬಂಧಗಳನ್ನು ವಿಧಿಸುತ್ತಿದೆ. ಕೆಲವು ದೇಶಗಳಿಗೆ ನಿರ್ಬಂಧಗಳನ್ನು ವಿಧಿಸುವಂತೆಯೂ ಕರೆ ನೀಡಿದೆ. ಜೋ ಬೈಡೆನ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಅವರ ವಿದೇಶಾಂಗ ಸಚಿವರನ್ನು ಯುನೈಟೆಡ್ ಸ್ಟೇಟ್ಸ್ ಪ್ರವೇಶಿಸುವುದನ್ನು ನಿಷೇಧಿಸಿದ್ದಾರೆ. ಇದರ ಜೊತೆಗೆ, ಯುನೈಟೆಡ್ ಸ್ಟೇಟ್ಸ್ ರಷ್ಯಾದ ಬ್ಯಾಂಕುಗಳ ಮೇಲೆ ನಿರ್ಬಂಧಗಳನ್ನು ವಿಧಿಸಿದೆ. ರಷ್ಯಾದ ವಿಮಾನಗಳು ತನ್ನ ವಾಯುಪ್ರದೇಶವನ್ನು ಪ್ರವೇಶಿಸುವುದನ್ನು ಅಮೆರಿಕ ಕೂಡ ನಿಷೇಧಿಸಿದೆ.

 

ಯುದ್ಧ ನಿಲ್ಲಿಸಲು ಉಕ್ರೇನ್‌ಗೆ ೨ ಷರತ್ತು
ಮಾಸ್ಕೋ, ಮಾ. ೮- ಯುದ್ಧ ನಿಲ್ಲಿಸಲು ರಷ್ಯಾ ಎರಡು ಷರತ್ತುಗಳನ್ನು ಉಕ್ರೇನ್ ಮುಂದಿಟ್ಟಿದೆ. ಕ್ರಿಮಿಯಾವನ್ನು ರಷ್ಯಾದ ಭೂಭಾಗವೆಂದು, ಡೋನ್ಯಸ್ಕ್, ಲುಹಾನ್ಸ್ಕ್ ಪ್ರಾಂತ್ಯಗಳನ್ನು ಸ್ವಾತಂತ್ರ÷್ಯ ದೇಶಗಳೆಂದು ಉಕ್ರೇನ್ ಪರಿಗಣ ಸಬೇಕು ಎಂಬ ಷರತ್ತು ಒಡ್ಡಿದೆ.

ಈ ಮಧ್ಯೆ ರಷ್ಯಾ ಮೇಲೆ ವಿಶ್ವದ ದಿಗ್ಬಂಧನ ಮತ್ತಷ್ಟು ಹೆಚ್ಚುತ್ತಿದೆ. ಐಬಿಎಂ ಸಂಸ್ಥೆ ರಷ್ಯಾದಲ್ಲಿ ಚಟುವಟಿಕೆ ನಿಲ್ಲಿಸುವುದಾಗಿ ಘೋಷಿಸಿದೆ. ಈ ಮೂಲಕ ಜಗತ್ತಿನಲ್ಲೇ ಅತ್ಯಧಿಕ ದಿಗ್ಬಂಧನಗಳಿಗೆ ಒಳಗಾಗಿರುವ ದೇಶ ಎಂಬ ಕೆಟ್ಟ ದಾಖಲೆಗೆ ರಷ್ಯಾ ಪಾತ್ರವಾಗಿದೆ. ಈ ಬೆಳವಣ ಗೆ ಜಾಗತಿಕ ಮಹಾ ಪಲ್ಲಟಕ್ಕೆ ದಾರಿ ಮಾಡಿಕೊಡುವಂತೆ ಕಾಣುತ್ತಿದೆ.
ರಷ್ಯಾ ತನ್ನ ಅಗತ್ಯಗಳನ್ನು ಪೂರೈಸಿಕೊಳ್ಳಲು ಈಗ ಚೀನಾ ಮೇಲೆ ಹೆಚ್ಚು ಅವಲಂಬಿತ ವಾಗುತ್ತಿದೆ. ಅಲ್ಲದೇ ವಿಶ್ವದ ದೊಡ್ಡಣ್ಣ ಅಮೆರಿಕಾ ಅಲ್ಲ, ಚೀನಾ ಎಂದು ರಷ್ಯಾ ಬಿಂಬಿಸತೊಡಗಿದೆ. ಜೊತೆಗೆ ದೇಶಿಯ ತಂತ್ರಜ್ಞಾನಗಳ ಬಳಕೆಗೆ ಮುಂದಾಗಿದೆ. ಇಷ್ಟಕ್ಕೆ ಸುಮ್ಮನಾಗಿಲ್ಲ ರಷ್ಯಾ, ಉಕ್ರೇನ್‌ಗೆ ಬೆಂಬಲ ನೀಡೋದನ್ನು ಮುಂದುವರೆಸಿದರೆ, ಇನ್ನಷ್ಟು ದಿಗ್ಬಂಧನ ವಿಧಿಸಿದ್ರೇ ಯುರೋಪ್‌ಗೆ ಅನಿಲ ಪೂರೈಕೆ ನಿಲ್ಲಿಸೋದಾಗಿ ಬೆದರಿಕೆ ಹಾಕಿದೆ.

ರಷ್ಯಾದ ಕಚ್ಛಾ ತೈಲ ಪೂರೈಕೆ ನಿಂತರೆ, ಒಂದು ಬ್ಯಾರಲ್ ಬೆಲೆ ೩೦೦ ಡಾಲರ್ ಗಡಿ ದಾಟಲಿದೆ. ನೀವು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಕನಿಷ್ಠ ೧ ವರ್ಷ ಹಿಡಿಯುತ್ತದೆ. ಯೋಚಿಸಿ ಎಂದು ವಾರ್ನಿಂಗ್ ನೀಡಿದೆ. ಇನ್ನು, ನ್ಯಾಟೋ ರಾಷ್ಟçಗಳು ನೇರವಾಗಿ ಬೆಂಬಲ ನೀಡದಿರುವುದು ಝೆಲೆನ್‌ಸ್ಕಿ ಸಿಟ್ಟಿಗೆ ಕಾರಣವಾಗಿದೆ. ರಷ್ಯಾಕ್ಕೆ ನ್ಯಾಟೋ ರಾಷ್ಟçಗಳು ಭಯಬಿದ್ದಿದೆ ಎಂದು ಕಿಡಿಕಾರಿದ್ದಾರೆ. ತಾವು ಕ್ರಿಮಿಯಾ, ಡಾನ್ ಬಾಸ್ ಬಗ್ಗೆ ಚರ್ಚೆಗೆ ರೆಡಿ ಎಂದಿದ್ದಾರೆ.

ರಷ್ಯಾ ಪರ್ಯಾಯ ಮಂತ್ರ: ಅಂತಾರಾಷ್ಟಿçÃಯ ಹಣಕಾಸು ವ್ಯವಹಾರಗಳಿಗೆ SWIಈಖಿ ಬದಲು SPSಈ ಬಳಕೆ (ದೇಶಿಯವಾಗಿ ತಯಾರಿಸಲಾದ ಸಿಸ್ಟಮ್ ಫಾರ್ ‘ಟ್ರಾನ್ಸ್ ಫರ್ ಆಫ್ ಫೈನಾನ್ಶಿಯಲ್ ಮೆಸೇಜೆಸ್’ ವ್ಯವಸ್ಥೆ ಸದ್ಯ ೫ ದೇಶಗಳ ೪೦೦ ಬ್ಯಾಂಕ್‌ಗಳು ಇದರ ವ್ಯಾಪ್ತಿಯಲ್ಲಿವೆ) ಎಸ್‌ಪಿಎಸ್‌ಎಫ್ ಜೊತೆಗೆ ಚೀನಾದ ಅPIS ಬಳಕೆಗೂ ಚಿಂತನೆ (೨೦೧೫ರಿಂದ ಷಾಂಘೈ ಕೇಂದ್ರವಾಗಿ ಕಾರ್ಯ, ಇದರ ವ್ಯಾಪ್ತಿಯಲ್ಲಿ ೧೦೩ ದೇಶಗಳ ೧೨೮೦ ಬ್ಯಾಂಕ್ ಸ್ವಿಫ್ಟ್ಗೆ ಹೋಲಿಸಿದರೆ ೧೦ ಪಟ್ಟು ಚಿಕ್ಕದು) ವೀಸಾ, ಮಾಸ್ಟರ್ ಕಾರ್ಡ್ ಬದಲು ಚೀನಾದ `ಯೂನಿಯನ್ ಪೇ’ ಬಳಕೆ ಪ್ಲಾನ್ (೧೮೦ ದೇಶಗಳಲ್ಲಿ ಬಳಕೆಯಲ್ಲಿದೆ)

 

ಉಕ್ರೇನ್‌ನ ಸುಮಿ ಮೇಲೆ ಬಾಂಬ್ ಸುರಿಮಳೆ ಚೆರ್ನಿಹೀವ್ ಮೇಲೆ ೫೦೦ ಕೆಜಿ ಬಾಂಬ್, ಸ್ಫೋಟ ಇಲ್ಲ
ಕೀವ್, ಮಾ. ೮- ಉಕ್ರೇನ್-ರಷ್ಯಾ ನಡುವಿನ ಯುದ್ಧ ೧೩ನೇ ದಿನ ಪೂರೈಸಿದೆ. ರಷ್ಯಾ ಪಡೆಗಳು ಮಾರಣಹೋಮವನ್ನೇ ಸೃಷ್ಟಿಸ್ತಿವೆ. ಯುದ್ಧದ ನಿಯಮಗಳನ್ನು ಉಲ್ಲಂಘಿಸಿ ಜನವಸತಿ ಪ್ರದೇಶಗಳ ಮೇಲೆ ಬಾಂಬ್‌ಗಳ ಸುರಿಮಳೆಗೈಯ್ಯುತ್ತಿದೆ.

ಖಾರ್ಕೀವ್, ಸುಮಿ ನಗರಗಳ ಮೇಲೆ ಭೂಮಿ, ಆಕಾಶಗಳಿಂದ ಗುಂಡಿನ ಮಳೆಗ ರೆದಿದೆ. ಈ ನಗರಗಳು ಸ್ಮಶಾನ ಸದೃಶವಾಗಿ ಮಾರ್ಪಟ್ಟಿವೆ. ಸಾವು ನೋವಿನ ಖಚಿತ ಅಂಕಿ-ಅAಶಗಳು ಸಿಗುತ್ತಿಲ್ಲ. ಇದೇ ವೇಳೆ ಕೀವ್, ಚೆರ್ನಿಹೀವ್, ಮೈಕೋಲೈವ್, ಓಲ್ವಿಯಾ ನಗರಗಳ ಮೇಲೆ ಹಿಡಿತ ಸಾಧಿಸಲು ಇನ್ನಿಲ್ಲದ ಪ್ರಯತ್ನವನ್ನು ಮಾಡ್ತಿದೆ. ಚೆರ್ನಿಹೀವ್ ನಗರದ ಮೇಲೆ ೫೦೦ ಕೆಜಿ ತೂಕದ ಬಾಂಬ್ ಹಾಕಿದೆ. ಅದೃಷ್ಟವಶಾತ್ ಅದು ಸ್ಫೋಟಿಸಿಲ್ಲ.

ಈಗಾಗಲೇ ಖೇರ್ಸಾನ್, ಬುಚಾ, ವೋರ್ಡಲ್, ಹೋಸ್ಟಾಮೆಲ್, ಜಪೋರಿಜಿಯಾ ಪ್ರಾಂತ್ಯದ ಆರು ನಗರಗಳನ್ನು ರಷ್ಯಾ ತನ್ನ ವಶಕ್ಕೆ ತೆಗೆದುಕೊಂಡಿದೆ. ಬ್ರಿಟನ್ ಪ್ರಕಾರ, ರಷ್ಯಾ ಈಗಾಗಲೇ ಉಕ್ರೇನ್‌ನ ಅರ್ಧ ಭಾಗವನ್ನು ವಶಕ್ಕೆ ತೆಗೆದುಕೊಂಡಿದೆ. ಕೀವ್ ಹೊರವಲಯದಲ್ಲಿ ೬೫ ಕಿಲೋಮೀಟರ್ ಉದ್ದದಷ್ಟು ರಷ್ಯಾ ಪಡೆಗಳು ನಿಂತಿವೆ. ಜೊತೆಗೆ ಗಡಿಯಲ್ಲಿ ಬೀಡುಬಿಟ್ಟಿದ್ದ ರಷ್ಯಾದ ೯೫ ಸಾವಿರ ಸೈನಿಕರು ಇದೀಗ ಉಕ್ರೇನ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಉಕ್ರೇನ್ ಕೂಡ ವಿರೋಚಿತ ಹೋರಾಟ ಮುಂದುವರಿಸಿದೆ.

ಕೀವ್, ಖಾರ್ಕೀವ್, ಚೆರ್ನಿಹೀವ್, ಸುಮಿಯಂತಹ ನಗರಗಳನ್ನು ತನ್ನ ನಿಯಂತ್ರಣದಲ್ಲೇ ಉಳಿಸಿಕೊಂಡಿದೆ. ರಷ್ಯಾದ ದಾಳಿಯನ್ನು ಸಮರ್ಥವಾಗಿ ಹಿಮ್ಮೆಟ್ಟಿಸುತ್ತಿದೆ. ಖಾರ್ಕೀವ್ ಬಳಿ ರ‍್ಫೀಲ್ಡ್ನಲ್ಲಿದ್ದ ರಷ್ಯಾದ ೩೦ಕ್ಕೂ ಹೆಚ್ಚು ಹೆಲಿಕಾಪ್ರ‍್ಗಳನ್ನು ಧ್ವಂಸ ಮಾಡಿದೆ. ೧೨ ಸಾವಿರ ಯೋಧರನ್ನು ಕೊಂದಿರೋದಾಗಿ ಘೋಷಿಸಿದೆ. ಇದು ರಷ್ಯಾ ಸೇನೆಯ ಮಾನಸಿಕ ಸ್ಥೆöÊರ್ಯವನ್ನು ಕುಗ್ಗಿಸುತ್ತಿದೆ ಎನ್ನಲಾಗಿದೆ. ಈ ಮಧ್ಯೆ ಇಂದು ಕೂಡ ಕೀವ್, ಸುಮಿ ಸೇರಿ ಐದು ನಗರಗಳಲ್ಲಿ ರಷ್ಯಾ ತಾತ್ಕಾಲಿಕ ಕದನ ವಿರಾಮ ಘೋಷಿಸಿತ್ತು. ಆದ್ರೇ, ಮಾನವೀಯ ಕಾರಿಡರ‍್ಗಳು ರಷ್ಯಾ-ಬೆಲಾರಸ್ ಕಡೆಗೆ ಸಾಗಿರುವುದನ್ನು ಉಕ್ರೇನ್ ವಿರೋಧಿಸ್ತಿದೆ. ಜೊತೆಗೆ ಲಕ್ಷಾಂತರ ನಾಗರಿಕರನ್ನು ರಷ್ಯಾ ನಿರ್ಬಂಧಿಸಿದೆ ಎಂದು ಉಕ್ರೇನ್ ಆರೋಪಿಸಿದೆ.

Translate »