ಮೈಸೂರು, ಜು.23(ಎಂಕೆ)- ಸಿಬಿಎಸ್‍ಇ ಮತ್ತು ಐಸಿಎಸ್‍ಇ ಸ್ಟೇಟ್ ಬೋರ್ಡ್ ಪ್ರೈವೇಟ್ ಸ್ಕೂಲ್ ಮ್ಯಾನೇಜ್‍ಮೆಂಟ್ ಅಸೋಸಿಯೇಷನ್(ಸಿಐಎಸ್‍ಪಿಎಂಎಎಂ) ಮೈಸೂರು ವಿಭಾಗದ ವತಿಯಿಂದ ಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ಅವರನ್ನು ಸಂಪರ್ಕಿಸಿ ಖಾಸಗಿ ಶಾಲೆಗಳು ಎದುರಿ ಸುತ್ತಿರುವ ಸಮಸ್ಯೆಗಳನ್ನು ಚರ್ಚಿಸಲಾಯಿತು.
ಗುರುವಾರ ವಿಧಾನಸೌಧದಲ್ಲಿ ಜಿಲ್ಲಾ ಉಸ್ತು ವಾರಿ ಸಚಿವ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ಶಿಕ್ಷಣ ಸಚಿವರನ್ನು ಭೇಟಿ ಮಾಡಿದ ಸಿಐಎಸ್‍ಪಿಎಂಎಎಂ ಮೈಸೂರು ವಿಭಾಗದ ಪದಾಧಿಕಾರಿಗಳು ಖಾಸಗಿ ಶಾಲೆ ಗಳು ಎದುರಿಸುತ್ತಿರುವ ಸಮಸ್ಯೆಗಳು, ಶುಲ್ಕ ಪಾವತಿ ಮತ್ತು ಆನ್‍ಲೈನ್ ತರಗತಿ ಕುರಿತು ಚರ್ಚಿಸಿದರು. ಈಗಾಗಲೇ ಆನ್‍ಲೈನ್ ತರ ಗತಿಗಳು ಪ್ರಾರಂಭವಾಗಿವೆ. ಆದರೆ, ಪೋಷ ಕರು ಪ್ರಸಕ್ತ ಸಾಲಿನ ಶುಲ್ಕವನ್ನೂ ಪಾವತಿ ಮಾಡಿಲ್ಲ. ಬ್ಯಾಂಕ್ ಸಾಲದ ಕಂತು ಕಟ್ಟಲು ಸಾಧ್ಯವಾಗುತ್ತಿಲ್ಲ. ಶಿಕ್ಷಕರ ಮತ್ತು ಸಿಬ್ಬಂದಿ ವೇತನ ಪಾವತಿಸಲಾಗದ ಸ್ಥಿತಿಯಲ್ಲಿ ಖಾಸಗಿ ಶಾಲೆಗಳಿವೆ ಎಂದು ಮನವರಿಕೆ ಮಾಡಿ ಕೊಡಲಾಯಿತು. ಆರ್ಥಿಕವಾಗಿ ಸಂಕಷ್ಟದಲ್ಲಿ ರುವ ಖಾಸಗಿ ಶಾಲೆಗಳ ಪುನಶ್ಚೇತನಕ್ಕಾಗಿ ವಾರ್ಷಿಕ ಶುಲ್ಕದ ಹಣವನ್ನು ಕೆಎಸ್ ಎಫ್‍ಸಿ ಮುಖಾಂತರ ಶೇ.4ರ ಬಡ್ಡಿದರದಲ್ಲಿ ಸಾಲ-ಸೌಲಭ್ಯವನ್ನು ಒದಗಿಸಿಕೊಡಬೇಕು ಹಾಗೂ ಶಾಲಾ ವಾಹನಗಳ ಇನ್ಷೂರೆನ್ಸ್ ಮನ್ನಾ ಮಾಡುವಂತೆ ಮನವಿ ಮಾಡಲಾಯಿತು.
ಮನವಿಗೆ ಸ್ಪಂದಿಸಿದ ಶಿಕ್ಷಣ ಸಚಿವರು, ಸರ್ಕಾರಕ್ಕೆ ಖಾಸಗಿ ಶಾಲೆಗಳು ಹಾಗೂ ಅಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರು, ಸಿಬ್ಬಂದಿಗಳ ಬಗ್ಗೆ ಅನುಕಂಪವಿದೆ. ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿ ದ್ದಾರೆ. ಬಿಜೆಪಿ ಮುಖಂಡ ಹೆಚ್.ವಿ. ರಾಜೀವ್, ಸಿಐಎಸ್‍ಪಿಎಂಎಎಂ ಮೈಸೂರು ವಿಭಾಗದ ಅಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ, ಉಪಾಧ್ಯಕ್ಷರಾದ ಎಂ.ಎಲ್.ರವೀಂದ್ರ ಸ್ವಾಮಿ, ವೆಂಕಟೇಶ್, ಕಾರ್ಯದರ್ಶಿ ರಾಧಾಕೃಷ್ಣ, ವಿಜಯ್‍ಕುಮಾರ್, ಮಧು, ಶ್ರೀಶೈಲ ರಾಮಣ್ಣನವರ್, ಪ್ರಭಾಕರ್, ಗಣೇಶ್ ಉಪಸ್ಥಿತರಿದ್ದರು.