ಮೈಸೂರು,ಜು.23(ವೈಡಿಎಸ್)-ಮೈಸೂರು ವಿವಿಯಲ್ಲಿ ಇದೇ ಮೊದಲ ಬಾರಿಗೆ ಸೌರ ವಿದ್ಯುತ್ ಘಟಕ ಆರಂಭಿ ಸಲಾಗಿದೆ. ಮಾನಸಗಂಗೋತ್ರಿಯ ಭೌತಶಾಸ್ತ್ರ ವಿಭಾಗದಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ 30 ಕಿಲೋವ್ಯಾಟ್ ಸಾಮಥ್ರ್ಯದ ಸೋಲಾರ್ ಪವರ್ ಪ್ಲಾಂಟ್ ಆರಂಭಿಸಲಾಗಿದೆ.
ಖಾಸಗಿ ಕಂಪೆನಿಯೊಂದು ಸೋಲಾರ್ ಪವರ್ ಪ್ಲಾಂಟ್ ನಿರ್ಮಿಸಿದ್ದು, 80 ಸೋಲಾರ್ ಪ್ಯಾನಲ್‍ಗಳನ್ನು ಅಳವಡಿಸ ಲಾಗಿದೆ. ಇದರಿಂದ ತಿಂಗಳಿಗೆ 4,500 ಯುನಿಟ್ ವಿದ್ಯುತ್ ಉತ್ಪಾದನೆಯಾಗಲಿದೆ. 3,500 ಯುನಿಟ್ ಬಳಸಿಕೊಂಡು 1000 ಯುನಿಟ್‍ಗಳನ್ನು ಪ್ರತಿ ಯುನಿಟ್‍ಗೆ 3.57 ರೂ. ನಂತೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮಕ್ಕೆ (ಸೆಸ್ಕ್) ನೀಡಲಾಗುತ್ತದೆ. ಇದರಿಂದ ತಿಂಗಳಿಗೆ 40 ಸಾವಿರ ರೂ. ವಿದ್ಯುತ್ ಬಿಲ್ ಪಾವತಿಸುವುದು ತಪ್ಪಲಿದೆ. ಜತೆಗೆ ಹೆಚ್ಚುವರಿ ವಿದ್ಯುತ್ ಮಾರಾಟದಿಂದ ಆದಾಯವೂ ಬರಲಿದೆ ಎಂದು ಸೋಲಾರ್ ಕಂಪೆನಿ ಸಿಇಒ ಎ.ಜೆ.ರಜನೀಶ್ ತಿಳಿಸಿದರು.
ಭೌತಶಾಸ್ತ್ರ ವಿಭಾಗಕ್ಕೆ ಪ್ರತ್ಯೇಕ ವಿದ್ಯುತ್ ಮೀಟರ್ ಅಳವಡಿಸಲಾಗಿದೆ. ಇದರಿಂದ ಎಷ್ಟು ವಿದ್ಯುತ್ ಉತ್ಪಾ ದನೆ, ಬಳಕೆ, ಮಾರಾಟ ಎಷ್ಟೆಂದು ದಾಖಲಾಗುತ್ತದೆ ಎಂದರು.ಸಭೆಯಲ್ಲಿ ಕುಲಪತಿ ಪ್ರೊ.ಹೇಮಂತ್‍ಕುಮಾರ್ ರಸಾ ಯನಶಾಸ್ತ್ರ ಮತ್ತು ಗ್ರಂಥಾಲಯ ವಿಭಾಗಕ್ಕೂ ಸೌರವಿದ್ಯುತ್ ಘಟಕ ಅಳವಡಿಸುವಂತೆ ಸೂಚಿಸಿದ್ದಾರೆ ಎಂದರು.
ಉದ್ಘಾಟನೆ: ಗುರುವಾರ ಸಂಜೆ ನಡೆದ ಸರಳ ಕಾರ್ಯ ಕ್ರಮದಲ್ಲಿ ಮೈವಿವಿ ಕುಲಪತಿ ಪ್ರೊ.ಹೇಮಂತ್‍ಕುಮಾರ್ ಅವರು ಸೋಲಾರ್ ಪವರ್ ಪ್ಲಾಂಟ್ ಉದ್ಘಾಟಿಸಿದರು. ನಂತರ ಮಾತನಾಡಿ, ಇದೇ ಮೊದಲ ಬಾರಿಗೆ ಮೈಸೂರು ವಿವಿಯಲ್ಲಿ ಪವರ್ ಪ್ಲಾಂಟ್ ಆರಂಭಿಸಿದ್ದು, 30-40 ಕಿಲೋ ವ್ಯಾಟ್ ವಿದ್ಯುತ್ ಉತ್ಪಾದಿಸಬಹುದಾಗಿದೆ. ಬಳಸಿ ಉಳಿದ ವಿದ್ಯುತ್ ಸೆಸ್ಕ್‍ಗೆ ಹೋಗುತ್ತದೆ. ಇದಕ್ಕೆ ಅವರು ಹಣ ನೀಡು ತ್ತಾರೆ. ಇದೇ ರೀತಿ ಇನ್ನು ಕೆಲವು ವಿಭಾಗಗಳಲ್ಲಿ ಸೌರ ವಿದ್ಯುತ್ ಘಟಕ ಸ್ಥಾಪಿಸಬೇಕು ಅಂದುಕೊಂಡಿದ್ದೇವೆ ಎಂದರು.
ಭೌತಶಾಸ್ತ್ರ ್ರವಿಭಾಗದ ಮುಖ್ಯಸ್ಥ ಲೋಕನಾಥ್ ಮಾತ ನಾಡಿ, ವಿದ್ಯಾರ್ಥಿಗಳಿಗೆ ಬೆಳಗ್ಗೆ 11ರಿಂದ ಸಂಜೆ 6ರವರೆಗೆ ಲ್ಯಾಬ್ ಇರುತ್ತದೆ. ಈ ವೇಳೆ ಪದೇ ಪದೇ ವಿದ್ಯುತ್ ಕಡಿತವಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿತ್ತು. ಈಗ ಸೌರ ವಿದ್ಯುತ್ ಘಟಕ ಆರಂಭಿಸಿರುವುದರಿಂದ ನಿರಂತರ ವಾಗಿ ವಿದ್ಯುತ್ ಇರುತ್ತದೆ. ವಿದ್ಯಾರ್ಥಿಗಳು ಅಡೆತಡೆ ಇಲ್ಲದೇ ಪ್ರಯೋಗ ಮತ್ತು ಸಂಶೋಧನೆಯಲ್ಲಿ ತೊಡಗಿ ಸಿಕೊಳ್ಳಲು ಅನುಕೂಲವಾಗುತ್ತದೆ ಎಂದರು. ವಿವಿ ಕುಲ ಸಚಿವ ಶಿವಪ್ಪ, ಕಾರ್ಯಪಾಲಕ ಅಭಿಯಂತರ ಹೆಚ್. ಕುಮಾರ್, ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಶ್ರೀಧರ್, ಪ್ರೊ.ಚಂದ್ರಶೇಖರ್, ಪ್ರೊ.ಜ್ಞಾನಪ್ರಕಾಶ್, ರವಿಕುಮಾರ್, ಮಹೇಂದ್ರ, ಕೃಷ್ಣವೇಣಿ ಮತ್ತಿತರರಿದ್ದರು.