ವಾಣಿವಿಲಾಸ ವಾಟರ್ ವಕ್ರ್ಸ್ ಕಚೇರಿಯಲ್ಲಿ 24×7 ಕೋವಿಡ್-19 ಸಹಾಯವಾಣಿ ಆರಂಭ
ಮೈಸೂರು

ವಾಣಿವಿಲಾಸ ವಾಟರ್ ವಕ್ರ್ಸ್ ಕಚೇರಿಯಲ್ಲಿ 24×7 ಕೋವಿಡ್-19 ಸಹಾಯವಾಣಿ ಆರಂಭ

July 24, 2020

ಮೈಸೂರು, ಜು. 23(ಆರ್‍ಕೆ)- ಮೈಸೂ ರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ರಿಗೆ ಮಾಹಿತಿ ಹಾಗೂ ನೆರವು ನೀಡುವ ಸಲುವಾಗಿ 24×7 ರಂತೆ ಕೆಲಸ ನಿರ್ವ ಹಿಸುವ ಕೋವಿಡ್-19 ಸಹಾಯವಾಣಿ ಗುರುವಾರದಿಂದ ಆರಂಭವಾಗಿದೆ.

ಮೈಸೂರಿನ ಯಾದವಗಿರಿಯಲ್ಲಿರುವ ವಾಣಿವಿಲಾಸ ವಾಟರ್ ವಕ್ರ್ಸ್ ಎಕ್ಸಿಕ್ಯೂ ಟಿವ್ ಇಂಜಿನಿಯರ್ ಕಚೇರಿ ನವೀಕೃತ ಸಭಾಂಗಣದಲ್ಲಿ ಎನ್.ಆರ್, ಕೆಆರ್ ಹಾಗೂ ಚಾಮರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸಂಬಂಧಿಸಿದಂತೆ ಸ್ಥಾಪಿಸಿರುವ ಕೋವಿಡ್ -19 ಸಹಾಯವಾಣಿಯಲ್ಲಿ ಸಾರ್ವಜನಿ ಕರು ದೂರವಾಣಿ ಮೂಲಕ ಮಾಹಿತಿ ಹಾಗೂ ನೆರವು ಪಡೆಯಬಹುದಾಗಿದೆ.

ಸಹಾಯವಾಣಿ ಕೇಂದ್ರದಲ್ಲಿ 10 ಮಂದಿ ಸ್ವಸಹಾಯಕರು ದಿನದ 24 ಗಂಟೆ ಕಾಲ ಮೂರು ಪಾಳಿಯಲ್ಲಿ ಕಾರ್ಯನಿರ್ವಹಿ ಸುತ್ತಿದ್ದು, ಕರೆಗಳನ್ನು ಸ್ವೀಕರಿಸಿ ದೂರು ಗಳನ್ನು ದಾಖಲಿಸಿಕೊಂಡು ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಗಳನ್ನು ಇತ್ಯರ್ಥ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲಿ 10 ಸ್ಥಿರ ದೂರ ವಾಣಿಗಳನ್ನು ಪೂರೈಸಿದ್ದು, ಎಲ್ಲಾ ಕರೆಗಳನ್ನು ಸ್ವೀಕರಿಸಲಾಗುತ್ತಿದೆ. ಮೊದಲ ದಿನವಾದ ಇಂದು ಸುಮಾರು 150ಕ್ಕೂ ಹೆಚ್ಚು ಕರೆಗಳು ಬಂದಿದ್ದು, ಕೊರೊನಾ ಲಕ್ಷಣಗಳು ಕಂಡು ಬಂದವರು. ನಾವು ಎಲ್ಲಿ ಟೆಸ್ಟ್ ಮಾಡಿಸಿ ಕೊಳ್ಳಬೇಕು, ಯಾರೂ ದಿನಸಿ ಕಿಟ್ ವಿತ ರಿಸುತ್ತಿಲ್ಲ, ನಮ್ಮ ಮನೆ ಪಕ್ಕದ ಮನೆಯವ ರನ್ನು ಕ್ವಾರಂಟೈನ್ ಮಾಡಲಾಗಿದೆ. ಆದರೆ ಯಾವುದೇ ನಿರ್ಬಂಧ ವಿಧಿಸಿಲ್ಲ ಎಂಬಿ ತ್ಯಾದಿ ದೂರುಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ. ಸಹಾಯವಾಣಿಗೆ ಬರುವ ದೂರುಗಳ ಬಗ್ಗೆ ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡಿ ಸಮಸ್ಯೆ ಇರುವೆಡೆಗೆ ತೆರಳಿ ಪರಿಹರಿಸುವ ಕೆಲಸವನ್ನು ತ್ವರಿತವಾಗಿ ಮಾಡಲಾಗುವುದು ಎಂದು ನೋಡಲ್ ಅಧಿಕಾರಿ ಕೆ.ಆರ್.ಮಹೇಶ್ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಅಲ್ಲಿ ಕೆಲಸ ಮಾಡುವ ಸ್ವಯಂಸೇವಕರಿಗೆ ಮಾಸ್ಕ್, ಹ್ಯಾಂಡ್ ಗ್ಲೌಸ್, ಸ್ಯಾನಿಟೈಸರ್ ಗಳನ್ನು ವಿತರಿಸಿದ್ದು, ಸಭಾಂಗಣವನ್ನು ನಿತ್ಯ ಸ್ಯಾನಿಟೈಸ್ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
¸

Translate »