ಚಾಮರಾಜನಗರದಲ್ಲಿ ರಾತ್ರಿ ವೇಳೆಯೇ ಸ್ವಚ್ಛತಾ ಕಾರ್ಯ ಆರಂಭ
ಚಾಮರಾಜನಗರ

ಚಾಮರಾಜನಗರದಲ್ಲಿ ರಾತ್ರಿ ವೇಳೆಯೇ ಸ್ವಚ್ಛತಾ ಕಾರ್ಯ ಆರಂಭ

March 4, 2020

ಚಾಮರಾಜನಗರ,ಮಾ.3-ನಗರ ಸ್ಥಳೀಯ ಸಂಸ್ಥೆಗಳ ಸಮಗ್ರ ನೈರ್ಮಲ್ಯೀ ಕರಣ ಅಂಗವಾಗಿ ರೂಪಿಸಲಾಗಿರುವ ಚೆಲುವ ಚಾಮರಾಜನಗರ ಅಭಿಯಾನದ ಮೊದಲ ಹಂತವಾಗಿ ರಾತ್ರಿ ವೇಳೆಯೇ ಕೈಗೊಳ್ಳಲಿರುವ ಸ್ವಚ್ಛತಾ ಕೆಲಸ ಸೋಮ ವಾರ ರಾತ್ರಿಯಿಂದ ಚಾಮರಾಜನಗರ ಪಟ್ಟಣದಲ್ಲಿ ಆರಂಭಗೊಂಡಿದೆ.

ಚೆಲುವ ಚಾಮರಾಜನಗರ ಅಭಿಯಾನ ರೂಪುರೇಷೆ ಸಿದ್ಧಪಡಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ರಾತ್ರಿ ವೇಳೆಯೇ ಸ್ವಚ್ಛತಾ ಕೆಲಸ ನಿರ್ವಹಿಸು ವುದರಿಂದ ಬೆಳಿಗ್ಗೆ ವೇಳೆ ಕೆಲಸದ ಒತ್ತಡ ಕಡಿಮೆಯಾಗಿ ಕಸ ಸಂಗ್ರಹಣೆ ಕಾರ್ಯ ಸುಗಮವಾಗಲಿದೆ. ಈ ನಿಟ್ಟಿನಲ್ಲಿ ರಾತ್ರಿಯೇ ಸ್ವಚ್ಛತಾ ಕೆಲಸ ಕೈಗೊಳ್ಳಲು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಚಾಮರಾಜನಗರ ಪಟ್ಟಣದಲ್ಲಿ ಸೋಮವಾರ ರಾತ್ರಿಯಿಂದಲೇ ಸ್ವಚ್ಛತಾ ಕಾರ್ಯ ಆರಂಭವಾಗಿದೆ.

ಮಹಾನಗರಗಳು, ದೊಡ್ಡ ಪಟ್ಟಣ ಗಳಲ್ಲಿ ಮಾತ್ರ ರಾತ್ರಿ ವೇಳೆ ಸ್ವಚ್ಛತಾ ಕೆಲಸ ನಿರ್ವಹಿಸುವ ವ್ಯವಸ್ಥೆ ಇದೆ. ವಿಶೇಷ ಸಂದರ್ಭಗಳಲ್ಲಿಯೂ ಸಹ ಜನರು ಹಾಗೂ ವಾಹನ ಸಂಚಾರ ದಟ್ಟಣೆ ತಗ್ಗಿದ ಬಳಿಕ ನೈರ್ಮಲ್ಯ ಕೆಲಸ ಪೂರೈಸಲಾಗುತ್ತದೆ. ಇಂತಹ ರಾತ್ರಿ ವೇಳೆ ನಗರ ಶುಚಿಗೊಳಿಸುವ ಕಾರ್ಯ ಚೆಲುವ ಚಾಮರಾಜನಗರ ಅಭಿಯಾನ ಹಿನ್ನೆಲೆಯಲ್ಲಿ ಚಾ.ನಗರ ಜಿಲ್ಲಾ ಕೇಂದ್ರದಲ್ಲೂ ಆರಂಭವಾಗಿರುವುದು ವಿಶೇಷವೆನಿಸಿದೆ.

ಜಿಲ್ಲೆಯ ನಗರ, ಪಟ್ಟಣಗಳ ನೈರ್ಮಲ್ಯ ಕಾಪಾಡುವ ಮಹತ್ತರ ಉದ್ದೇಶದಿಂದ ಚೆಲುವ ಚಾ.ನಗರ ಅಭಿಯಾನ ಕೈಗೊಳ್ಳಲಾಗುತ್ತಿದೆ. ಇದರ ಅಂಗವಾಗಿ ರಾತ್ರಿಯೇ ನಗರದ ಬೀದಿ ಗಳನ್ನು ಸ್ವಚ್ಛಗೊಳಿಸಿ ಬೆಳಗಿನ ವೇಳೆಗೆ ಕಸ ಸಂಗ್ರಹಣೆ ಮಾಡಿ ಸ್ವಚ್ಛ ಪರಿಸರ ಉಂಟು ಮಾಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ನಿರ್ದೇಶನ ದಂತೆ ನಗರಸಭೆ ಕಾರ್ಯೋನ್ಮುಖವಾಗಿದೆ.

ಸೋಮವಾರ ರಾತ್ರಿ ನಗರದ ಪ್ರಮುಖ ಜೈ ಭುವನೇಶ್ವರಿ ವೃತ್ತದಿಂದ ರಾತ್ರಿ ವೇಳೆ ಪೌರಕಾರ್ಮಿಕರು ಸ್ವಚ್ಛತಾ ಕೆಲಸ ನಿರ್ವ ಹಿಸಿದರು. ಸಾಕಷ್ಟು ಸಂಖ್ಯೆಯಲ್ಲಿ ನಿಯೋ ಜಿತರಾಗಿದ್ದ ಕಾರ್ಮಿಕ ವರ್ಗ ಪಚ್ಚಪ್ಪ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಉತ್ಸಾಹದಿಂದಲೇ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು. ಪ್ರಮುಖ ವೃತ್ತದಲ್ಲಿದ್ದ ಅನುಪಯುಕ್ತ ವಸ್ತುಗಳನ್ನು ತೆರವು ಗೊಳಿಸಲಾಯಿತು. ನಗರಸಭೆ ಆಯುಕ್ತ ರಾಜಣ್ಣ ಖುದ್ದು ನಿಂತು ಸ್ವಚ್ಛತಾ ಕಾರ್ಯದ ಮೇಲ್ವಿಚಾರಣೆ ನಡೆಸಿದರು.

ಪಟ್ಟಣದಲ್ಲಿ ವ್ಯಾಪಕವಾಗಿ ಎಲ್ಲ ಬೀದಿ ಗಳಲ್ಲಿಯೂ ರಾತ್ರಿ ವೇಳೆ ಸ್ವಚ್ಛತಾ ಕೆಲಸ ವನ್ನು ಇನ್ನು ಮುಂದೆ ಕೈಗೊಳ್ಳಲಾಗುತ್ತದೆ. ಕಸ ಶೇಖರಣೆ ಸಹ ಕೈಗೊಂಡು ತಕ್ಷಣವೇ ರಸ್ತೆಗಳಿಂದ ಸಾಗಣೆ ಮಾಡುವ ಕಾರ್ಯ ವನ್ನು ನಿರ್ವಹಿಸಲಾಗುತ್ತದೆ. ಇನ್ನು ಮುಂದೆ ನಿರಂತರವಾಗಿ ಈ ಪ್ರಕ್ರಿಯೆ ನಡೆಯಲಿದೆ.

ಚೆಲುವ ಚಾ.ನಗರ ಅಭಿಯಾನದ ಆರಂಭಿಕ ಹಂತವಾಗಿ ರಾತ್ರಿಯೇ ನಡೆಯುತ್ತಿ ರುವ ಸ್ವಚ್ಚತಾ ಕೆಲಸಗಳ ಬಗ್ಗೆ ಜನರು, ವರ್ತಕರು ಸಹಕಾರ ಬಯಸಲಾಗಿದೆ.

Translate »