ಚಾಮರಾಜನಗರ,ಮಾ.3- ಮುಂಬರುವ ಬಜೆಟ್‍ನಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮುಖ್ಯಮಂತ್ರಿ ಯಡಿಯೂರಪ್ಪನವರು 2500 ಕೋಟಿ ರೂ. ಅನುದಾನ ನೀಡಬೇಕು ಎಂದು ಕನ್ನಡ ಚಳವಳಿ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಒತ್ತಾಯಿಸಿದರು.
ನಗರದ ಸಾರಿಗೆ ನಿಲ್ದಾಣದಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಹೆಚ್ಚಿನ ಅನುದಾನ ನೀಡುವಂತೆ ಹಾಗೂ ಬಸ್ ದರ ಇಳಿಸುವಂತೆ ಒತ್ತಾಯಿಸಿ ತಮ್ಮ ಬೆಂಬಲಿಗ ರೊಂದಿಗೆ ಬಸ್ ತಡೆದು ಪ್ರತಿಭಟನೆ ನಡೆಸಿದರು.
ನಂತರ ಮಾತನಾಡಿದ ಅವರು, ಜಿಲ್ಲೆಯ ಶಾಸಕರು ಅವರ ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಪಡೆದು ಕೊಳ್ಳುತ್ತಾರೆ ಹೊರತು ಚಾಮರಾಜನಗರ ಅಭಿವೃದ್ದಿ ಬಗ್ಗೆ ಹೇಳೋರಿಲ್ಲ- ಕೇಳೋ ರಿಲ್ಲ. ಜಿಲ್ಲಾಧಿಕಾರಿಗಳ ಜತೆ ಒಂದು ಸಭೆ ನಡೆÀಸಿಲ್ಲ ಎಂದರು. ಜಿಲ್ಲೆ ಹಿಂದುಳಿದಿದೆ. ಇದನ್ನು ಜಿಲ್ಲೆಯಾಗಿ ಮಾಡಿದ್ದು ನಾನು. ನಾಡಿನ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಶಿವಮೊಗ್ಗ ಜಿಲ್ಲೆಗೆ ಹೋಗು ತ್ತಾರೆ ಹೊರತು ಮೌಢ್ಯಕ್ಕೆ ಜೋತು ಬಿದ್ದು ಚಾಮರಾಜನಗರಕ್ಕೆ ಬರುತ್ತಿಲ್ಲ ಏಕೆ. ಕರ್ನಾಟಕಕ್ಕೆ ಚಾಮರಾಜನಗರ ಸೇರಿಲ್ಲವೇ ಎಂದು ಪ್ರಶ್ನಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‍ಕುಮಾರ್ ಚಾ.ನಗರ ಎಂದರೆ ಗೋಳು ಅಂತಾ ಅಳುತ್ತಾರೆ. ಚಾಮರಾಜನಗರ ಏನಾಗಿದೆ. ಜಾತಿ, ಹಣ ನನ್ನ ಸೋಲಿಗೆ ಕಾರಣವಾಯಿತು. ನಾನು ಶಾಸಕನಾಗಿದ್ದರೆ 2ನೇ ಹಂತ ಕಾವೇರಿ ಯೋಜನೆ ಸೇರಿದಂತೆ ಬೇಕಾದಷ್ಟು ಯೋಜನೆಗಳನ್ನು ತರುತ್ತಿದ್ದೆ ಎಂದರು.
ಮಾ.5 ರಂದು ಪ್ರತಿಭಟನೆ: ಚಾಮ ರಾಜನಗರ ಸಮಗ್ರ ಅಭಿವೃದ್ಧಿಗೆ 2500 ಕೋಟಿ ರೂ. ಅನುದಾನ ಮೀಸಲಿಡಬೇಕು. ಇದಕ್ಕಾಗಿ ಒತ್ತಾಯಿಸಿ ಮಾ.5 ರಂದು ಬೆಂಗಳೂರಿನ ವಿಧಾನಸೌಧ ಮುಂದೆ ಪ್ರತಿ ಭಟನೆ ನಡೆಸಲಾಗುವುದು ಎಂದರು.
ವಾಸವಿಲ್ಲದ ಅಧಿಕಾರಿಗಳ ವಸತಿಗೆ ಬೀಗ: ನಗರದಲ್ಲಿ ಅಧಿಕಾರಿಗಳಿಗೆ ಸರ್ಕಾರ ಕೊಟ್ಟಿರುವ ವಸತಿಗಳಿಗೆ ಮುಂದಿನವಾರ ಭೇಟಿ ನೀಡಿ ಪರಿಶೀಲಿಸಿ ವಾಸವಿಲ್ಲದ ಅಧಿಕಾರಿಗಳ ಮನೆಗಳಿಗೆ ಬೀಗ ಜಡಿಯುವು ದಾಗಿ ವಾಟಾಳ್ ನಾಗರಾಜ್ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ನಾಗರಾಜಮೂರ್ತಿ, ಕಾರ್‍ನಾಗೇಶ್, ಸುರೇಶ್‍ನಾಗ್, ಶ್ರೀನಿವಾಸಗೌಡ, ರೇವಣ್ಣ, ವರದರಾಜು, ಶಿವಲಿಂಗಮೂರ್ತಿ, ಮಹೇಶ್, ಅಜಯ್, ಪುರುಷೋತ್ತಮ ಇತರರಿದ್ದರು.