ಹೆಚ್.ಡಿ.ಕೋಟೆ ಆಸ್ಪತ್ರೆಯ ಒತ್ತುವರಿ ಜಾಗ ತೆರವು
ಮೈಸೂರು

ಹೆಚ್.ಡಿ.ಕೋಟೆ ಆಸ್ಪತ್ರೆಯ ಒತ್ತುವರಿ ಜಾಗ ತೆರವು

March 10, 2020

ಸಂದೇಶ್ ಪ್ರಶ್ನೆಗೆ ಆರೋಗ್ಯ ಸಚಿವ ಶ್ರೀರಾಮುಲು ಸ್ಪಷ್ಟನೆ
ಚಾ.ನಗರ ಉಪ್ಪಾರ ಬೀದಿ ಸರ್ಕಾರಿ ಶಾಲೆ ಕಾಂಪೌಂಡ್ ಶೀಘ್ರ ನಿರ್ಮಾಣ, ಶಾಲಾವರಣ ಸ್ವಚ್ಛತೆಗೆ ಕ್ರಮ
ಬೆಂಗಳೂರು, ಮಾ.9- ಹೆಗ್ಗಡದೇವನಕೋಟೆ ತಾಲೂಕು ಆಸ್ಪತ್ರೆಯ ನಿವೇ ಶನದ ವಿಸ್ತೀರ್ಣ 5 ಎಕರೆ 12 ಗುಂಟೆ ಆಗಿದ್ದು, ಇದರಲ್ಲಿ ಒತ್ತುವರಿ ಆಗಿದ್ದ 13 ಗುಂಟೆ ಜಾಗವನ್ನು ತೆರವು ಗೊಳಿಸಿ, ಇಲಾಖಾ ವಶಕ್ಕೆ ತೆಗೆದು ಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಇಂದು ವಿಧಾನ ಪರಿಷತ್ತಿನಲ್ಲಿ ಸ್ಪಷ್ಟಪಡಿಸಿದರು. ಹೆಗ್ಗಡದೇವನ ಕೋಟೆ ತಾಲೂಕು ಆಸ್ಪತ್ರೆಗೆ ಸೇರಿದ ಒತ್ತುವರಿ ಆಗಿರುವ ನಿವೇಶನವನ್ನು ತೆರವುಗೊಳಿಸಿ, ಕಾಂಪೌಂಡ್ ನಿರ್ಮಿಸುವ ಮೂಲಕ ಸಂರಕ್ಷಿಸಿ, ಸ್ವಚ್ಛತೆ ಕಾಪಾಡುವ ಬಗ್ಗೆ ಸಂದೇಶ್ ನಾಗರಾಜ್ ಅವರು ಕೇಳಿದ್ದ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಆಸ್ಪತ್ರೆಗೆ ಸೇರಿದ್ದ ಜಾಗವನ್ನು ಸರ್ವೇ ಮಾಡಿಸಿ, ಒತ್ತುವರಿ ತೆರವುಗೊಳಿಸಲಾಗಿದೆ ಹಾಗೂ ಈಗಾಗಲೇ 250 ಮೀಟರ್ ಕಾಂಪೌಂಡ್ ನಿರ್ಮಾಣ ಕಾರ್ಯ ಮುಗಿದಿದ್ದು, ಉಳಿದ ಭಾಗಕ್ಕೆ ಕಾಂಪೌಂಡ್ ನಿರ್ಮಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ವಿವರಿಸಿದರು.

ಶಾಲಾ ಕಾಂಪೌಂಡ್ ನಿರ್ಮಾಣ: ಚಾಮರಾಜನಗರ ಉಪ್ಪಾರ ಬೀದಿಯ ಸರ್ಕಾರಿ ಶಾಲೆಯ ಕಾಂಪೌಂಡ್ ನಿರ್ಮಾಣ ಕಾಮಗಾರಿಯನ್ನು ಚಾಮರಾಜನಗರ ಅಭಿವೃದ್ಧಿ ಪ್ರಾಧಿಕಾರದಿಂದ ಕೈಗೊಳ್ಳಲಾಗುತ್ತಿದೆ. ಪ್ರತಿ ದಿನ ಶಾಲೆ ಆವರಣ ವನ್ನು ನಗರಸಭೆ ಸ್ವಚ್ಛತಾ ಸಿಬ್ಬಂದಿಯಿಂದ ಸ್ವಚ್ಛಗೊಳಿಸಲಾಗುತ್ತಿದೆ ಎಂದು ಸಂದೇಶ್ ಅವರ ಮತ್ತೊಂದು ಪ್ರಶ್ನೆಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದರು. ಚಾಮರಾಜನಗರ ಉಪ್ಪಾರ ಬೀದಿಯ ಪ್ರಾಥಮಿಕ ಶಾಲೆಯ ಕಾಂಪೌಂಡನ್ನು ರಸ್ತೆ ಅಗಲೀಕರಣದ ವೇಳೆ ಒಡೆದು ಹಾಕಿದ್ದು, ಅದನ್ನು ಪುನರ್ ನಿರ್ಮಿಸುವುದು ಹಾಗೂ ಶಾಲಾ ಆವರಣದಲ್ಲಿ ಗಿಡಗಂಟಿ ಬೆಳೆದು ಕೊಳಚೆ ನೀರು ನಿಲ್ಲುತ್ತಿರುವುದನ್ನು ಸ್ವಚ್ಛಗೊಳಿಸುವ ಅನಿವಾರ್ಯತೆ ಬಗ್ಗೆ ಸಂದೇಶ್ ನಾಗರಾಜ್ ಪ್ರಸ್ತಾಪಿಸಿದ್ದರು.

Translate »