ವರ್ಚುವಲ್ ಮೂಲಕ ಗೊರಿಲ್ಲಾ ಮನೆ ಉದ್ಘಾಟಿಸಿದ ಸಿಎಂ ಬಸವರಾಜ ಬೊಮ್ಮಾಯಿ
ಮೈಸೂರು

ವರ್ಚುವಲ್ ಮೂಲಕ ಗೊರಿಲ್ಲಾ ಮನೆ ಉದ್ಘಾಟಿಸಿದ ಸಿಎಂ ಬಸವರಾಜ ಬೊಮ್ಮಾಯಿ

December 29, 2021

ಮೈಸೂರು, ಡಿ.೨೮(ಎಂಟಿವೈ)- ಜರ್ಮನಿಯಿಂದ ತಂದಿರುವ ಒಂದು ಜೋಡಿ ಗಂಡು ಗೊರಿಲ್ಲಾಗಳಿಗಾಗಿ ಇನ್ಫೋಸಿಸ್ ಫೌಂಡೇಷನ್ ವತಿಯಿಂದ ನಿರ್ಮಿಸಿರುವ ಮನೆಯನ್ನು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ವರ್ಚುವಲ್ ಮೂಲಕ ಉದ್ಘಾಟಿಸಿದರು.

ಮಂಗಳವಾರ ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರಿನಿAದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವರ್ಚುವಲ್ ಮೂಲಕ ಗೊರಿಲ್ಲಾ ಮನೆ ಉದ್ಘಾಟಿಸಿದ ಬಳಿಕ ಮಾತನಾಡಿ, ಕೊರೊನಾ ಸಂಕಷ್ಟದ ಸಮಯದಲ್ಲಿ ಎಲ್ಲಾ ಮೃಗಾಲಯಗಳಿಗೂ ಪ್ರವಾಸಿಗರ ಕೊರತೆಯಿಂದಾಗಿ ಸಮಸ್ಯೆ ಉಂಟಾಗಿತ್ತು. ಇಂತಹ ಸಂದರ್ಭದಲ್ಲಿ ಇನ್ಫೋಸಿಸ್ ಫೌಂಡೇಷನ್ ಸಿಎಸ್‌ಆರ್ ಫಂಡ್‌ನಲ್ಲಿ ೨.೭೦ ಕೋಟಿ ರೂ. ವೆಚ್ಚದಲ್ಲಿ ಗೊರಿಲ್ಲಾ ಗಳಿಗೆ ಸುಸಜ್ಜಿತ ಮನೆ ನಿರ್ಮಿಸಿಕೊಟ್ಟಿರು ವುದು ಶ್ಲಾಘನೀಯ. ಡಾ.ಸುಧಾಮೂರ್ತಿ ಅವರು ಈಗಾಗಲೇ ಕೆರೆ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರ ಸಹಕಾರ ಮುಂದಿನ ದಿನಗಳಲ್ಲೂ ರಾಜ್ಯ ಬಯಸುತ್ತದೆ. ಸುಧಾಮೂರ್ತಿ ಅವರು ಕಚೇರಿಯಿಂದ ನಿವೃತ್ತಿಯಾದರೂ ಸಮಾಜ ಸೇವಾ ಕ್ಷೇತ್ರದಲ್ಲಿ ಅವರ ಸೇವೆ ಇನ್ನಷ್ಟು ವರ್ಷ ಮುಂದುವರೆಯಬೇಕು. ಇನ್ನಷ್ಟು ಸೇವಾ ಕಾರ್ಯವನ್ನು ಸರ್ಕಾರ ಅವರಿಂದ ನಿರೀಕ್ಷಿಸುತ್ತದೆ ಎಂದರು.
ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಡಾ.ಸುಧಾ ಮೂರ್ತಿ ವರ್ಚುವಲ್ ಮೂಲಕ ಮಾತನಾಡಿ, ಮೈಸೂರು ಮೃಗಾಲಯವನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡಲಾಗಿದೆ. ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂಧುವಾಗಿದೆ. ಒಮ್ಮೆ ಭೇಟಿ ನೀಡುವ ಪ್ರವಾಸಿಗರು ಮತ್ತೆ ಮತ್ತೆ ಮೈಸೂರು ಮೃಗಾಲಯಕ್ಕೆ ಭೇಟಿ ನೀಡಬೇಕೆನಿಸುತ್ತದೆ. ಈ ನಿಟ್ಟಿನಲ್ಲಿ ಮೈಸೂರು ಮೃಗಾಲಯಕ್ಕೆ ಜರ್ಮನಿ ಯಿಂದ ತಂದ ಗೊರಿಲ್ಲಾಗಳಿಗೆ ಉತ್ತಮ ಮನೆ ಇಲ್ಲದೇ ಇರುವ ನಿಟ್ಟಿನಲ್ಲಿ ಸಿಎಸ್‌ಆರ್ ಫಂಡ್‌ನಲ್ಲಿ ಮನೆ ನಿರ್ಮಿಸಿಕೊಡಲಾ ಯಿತು. ಎರಡನೇ ಹಂತದಲ್ಲಿ ಬೇಕಾಗುವ ಮನೆಯನ್ನೂ ನಿರ್ಮಿಸಿಕೊಡಲು ಇನ್ಫೋಸಿಸ್ ಫೌಂಡೇಷನ್ ಬದ್ಧವಾಗಿದೆ. ಕೊಡಗು ಜಿಲ್ಲೆಯಲ್ಲಿ ಭೂಕುಸಿತ ಪ್ರಕ ರಣದ ಫಲಾನುಭವಿಗಳಿಗೆ ನಿರ್ಮಿಸಿ ಕೊಟ್ಟಿರುವ ಮನೆ ಕಾಮಗಾರಿ ಪೂರ್ಣ ಗೊಂಡಿದ್ದು, ಹಂಚಿಕೆ ಸಿದ್ಧವಾಗಿವೆ ಎಂದರು.

ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಮಾತ ನಾಡಿ, ಜರ್ಮನಿಯಿಂದ ತರಲಾಗಿದ್ದ ಎರಡು ಗೊರಿಲ್ಲಾಗಳಿಗೆ ಇನ್ಫೋಸಿಸ್ ಫೌಂಡೇಷನ್ ವತಿಯಿಂದ ಮನೆ ನಿರ್ಮಿಸಿ ಕೊಟ್ಟಿದ್ದಾರೆ. ಎರಡನೇ ಹಂತದಲ್ಲಿ ೩.೬೦ ಕೋಟಿ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಡಲು ಭರವಸೆ ನೀಡಿದ್ದಾರೆ.

ಕೊರೊನಾ ಸಂಕಷ್ಟದ ಕಾಲದಲ್ಲಿ ಪ್ರವಾಸಿಗರಿಲ್ಲದೆ ರಾಜ್ಯದ ಎಲ್ಲಾ ಮೃಗಾಲಯಗಳೂ ಸಂಕಷ್ಟಕ್ಕೆ ಸಿಲುಕಿವೆ. ಇದರಿಂದ ನಿರ್ವಹಣೆಗೆ ತೊಡಕಾಗಿದೆ. ಈ ನಿಟ್ಟಿನಲ್ಲಿ ಗುಲ್ಬರ್ಗಾ ಮೃಗಾಲಯ ಸೇರಿದಂತೆ ರಾಜ್ಯದ ಎಲ್ಲಾ ಮೃಗಾಲಯಗಳ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಡಾ.ಸುಧಾಮೂರ್ತಿ, ಶಾಸಕ ಎಸ್.ಎ. ರಾಮದಾಸ್ ವರ್ಚುವಲ್ ಆಗಿ ಪಾಲ್ಗೊಂಡರೆ, ಮೇಯರ್ ಸುನಂದಾ ಪಾಲನೇತ್ರ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ, ಮೃಗಾ ಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕಣ ð, ಮೃಗಾಲಯದ ಸದಸ್ಯರುಗಳಾದ ಗೋಕುಲ್ ಗೋವರ್ಧನ್, ಜ್ಯೋತಿ ರೇಚಣ್ಣ ಹಾಗೂ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

Translate »