ಪ್ರತಿಭಟನೆ ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ
ಮೈಸೂರು

ಪ್ರತಿಭಟನೆ ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ

December 29, 2021

ಮೈಸೂರು, ಡಿ.೨೮(ಆರ್‌ಕೆಬಿ)- ಆರ್‌ಎಸ್‌ಎಸ್ ಅಜೆಂಡಾ ಇಟ್ಟುಕೊಂಡು ರಂಗಾಯಣವನ್ನು ಆರ್‌ಎಸ್‌ಎಸ್ ಮಯ ವಾಗಿ ಮಾಡುತ್ತಿದ್ದಾರೆ. ಅವರನ್ನು ವಜಾ ಮಾಡÀಬೇಕು ಎಂದು ಆಗ್ರಹಿಸಿ ರಂಗಾ ಯಣ ಉಳಿಸಿ ಹೋರಾಟ ಸಮಿತಿ ಕಾರ್ಯ ಕರ್ತರು ರಂಗಾಯಣದ ಗೇಟ್ ಬಳಿ ಮಂಗಳವಾರವೂ ಪ್ರತಿಭಟನೆ ನಡೆಸಿದರು.
ರಂಗಾಯಣದ ಎದುರು ಪ್ರತಿಭಟನೆ ಮಾಡದಂತೆ ಪೊಲೀಸರು ನೀಡಿದ್ದ ಸೂಚನೆಯನ್ನು ಲೆಕ್ಕಿಸದೇ ಕುಕ್ಕರಹಳ್ಳಿ ಕೆರೆ ಬಳಿಯಿಂದ ರಂಗಾಯಣದವರೆಗೆ ಮೆರವಣ ಗೆ ನಡೆಸಿದ ಸಮಿತಿ ಸದಸ್ಯರು, ರಂಗಾಯಣದ ಎದುರಿನ ಗೇಟಿನ ರಸ್ತೆ ಬದಿಯಲ್ಲಿ ನಿಂತು ಅಡ್ಡಂಡ ಕಾರ್ಯಪ್ಪ ವಿರುದ್ಧ ದಿಕ್ಕಾರ ಕೂಗಿದರು. ನಿರ್ದೇ ಶಕ ಸ್ಥಾನದಿಂದ ವಜಾಗೊಳಿಸುವಂತೆ ಸರ್ಕಾರವನ್ನು ಆಗ್ರಹಿಸಿದರು.

ಕಳೆದ ಎಂಟು ದಿನಗಳಿಂದ ನಿರಂತರ ವಾಗಿ ಪ್ರತಿದಿನ ಪ್ರತಿಭಟನೆ ನಡೆಸುತ್ತಿ ರುವ ರಂಗಾಯಣ ಉಳಿಸಿ ಹೋರಾಟ ಸಮಿತಿ ಕಾರ್ಯಕರ್ತರು ಕೂಡಲೇ ರಂಗಾ ಯಣ ನಿರ್ದೇಶಕರನ್ನು ವಜಾಗೊಳಿಸ ಬೇಕು ಎಂದು ಒತ್ತಾಯಿಸಿ, ಘೋಷಣೆ ಗಳನ್ನು ಕೂಗಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಇಲ್ಲಿ ಯಾರ ಚಾರಿತ್ರö್ಯ ವಧೆ ಮಾಡುವ ಉದ್ದೇಶವಲ್ಲ. ರಂಗಾಯಣ ಉಳಿಯ ಬೇಕು. ಇಲ್ಲಿ ಬಲಪಂಥೀಯ, ಎಡ ಪಂಥೀಯ ಎಂಬ ಭೇದ ತರಬಾರದು. ಎಲ್ಲರೂ ಸಮಾನರು. ಆದರೆ ಶಾಂತಿಯುತ ವಾಗಿ ಪ್ರತಿಭಟನೆ ನಡೆಸುತ್ತಿರುವವರನ್ನು ಪ್ರತಿಭಟನೆ ನಡೆಸದಂತೆ ಹತ್ತಿಕ್ಕುವ ಪ್ರಯತ್ನ ಸಲ್ಲದು. ಪ್ರತಿಭಟನೆ ಸಾರ್ವಜನಿಕರ ಹಕ್ಕು. ಅದನ್ನು ಹತ್ತಿಕ್ಕಿ, ಪ್ರತಿಭಟನಾಕಾರರನ್ನು ಬಂಧಿಸುವುದಾದರೆ ಅದಕ್ಕೆ ನಾವು ಸಿದ್ದರಾಗಿ ದ್ದೇವೆ. ಪ್ರತಿಭಟನೆ ಮಾತ್ರ ನಿಲ್ಲದು ಎಂದರು.

ಪ್ರಗತಿಪರ ಮುಖಂಡ ಪ.ಮಲ್ಲೇಶ್ ಮಾತನಾಡಿ, ಎರಡು ವರ್ಷದಿಂದ ನಾವು ತಡೆದುಕೊಂಡಿದ್ದೇವೆ. ನಿರ್ದೇಶಕರು ಬರೀ ನಾಟಕ, ಕಾರ್ಯಕ್ರಮ ಮಾಡಿದರೆ ನಮ್ಮ ವಿರೋಧವಿಲ್ಲ. ಆದರೆ ರಂಗಾಯಣಕ್ಕೆ ಆರ್‌ಎಸ್‌ಎಸ್ ತುರುಕುವ ಪ್ರಯತ್ನ ನಡೆದಿದೆ. ಎಲ್ಲಾ ಮಕ್ಕಳಿಗೂ ರಂಗ ತರಬೇತಿ ಹೆಸರಿ ನಲ್ಲಿ ಆರ್‌ಎಸ್‌ಎಸ್ ಸಿದ್ಧಾಂತ ಹೇಳಲು ಹೊರಟಿದ್ದಾರೆ. ಸಂಸ್ಕಾರ, ಸಂಸ್ಕೃತಿ ಇಲ್ಲದ ನಿರ್ದೇಶಕರು ಇಷ್ಟೆಲ್ಲ ರಾದ್ಧಾಂತ ನಡೆಸುತ್ತಿದ್ದಾರೆ. ಅವರು ಕೂಡಲೇ ರಾಜಿ ನಾಮೆ ನೀಡಿ ಹೋಗಬೇಕು. ಸರ್ಕಾರದ ಬೆಂಬಲವಿದೆ ಎನ್ನುವುದಾದರೆ ಅಂಥ ಸರ್ಕಾರ ಬಡಿಯುವುದು ನಮಗೆ ಗೊತ್ತಿದೆ ಎಂದು ಆಕ್ರೋಶದಿಂದ ನುಡಿದರು.

ಪ್ರತಿಭಟನೆಯಲ್ಲಿ ಹಿರಿಯ ರಂಗ ಕರ್ಮಿ ಸಿ.ಬಸವಲಿಂಗಯ್ಯ, ಜನಾರ್ಧನ್ (ಜನ್ನಿ), ಮೈಮ್ ರಮೇಶ್, ರಾಜ್ಯ ಹಿಂದು ಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾ ಧ್ಯಕ್ಷ ಕೆ.ಎಸ್.ಶಿವರಾಮು, ಜಿ.ಪಿ.ಬಸವ ರಾಜು, ಮಾಜಿ ಮೇಯರ್ ಪುರುಷೋ ತ್ತಮ್, ಹಿರಿಯ ಪತ್ರಕರ್ತ ಟಿ.ಗುರು ರಾಜ್, ಶಶಿಧರ್, ಕರ್ನಾಟಕ ಕಾವಲು ಪಡೆ ರಾಜ್ಯಾಧ್ಯಕ್ಷ ಮೊಹನ್‌ಕುಮಾರ್ ಗೌಡ, ಸೋಸಲೆ ಸಿದ್ದರಾಜು, ದಸಂಸ ಸಂಚಾಲಕ ಚರ‍್ನಳ್ಳಿ ಶಿವಣ್ಣ, ಕೆ.ವಿ. ದೇವೇಂದ್ರ, ಹಾರೋಹಳ್ಳಿ ನಟರಾಜು ಇನ್ನಿತರರು ಭಾಗವಹಿಸಿದ್ದರು.

Translate »