ಜಿಲ್ಲಾಧಿಕಾರಿ ಕಚೇರಿ ಬಳಿ ಮೈಸೂರು ರಕ್ಷಣಾ ವೇದಿಕೆ, ಮೈಸೂರು ಕೊಡವ ಸಮಾಜ ಧರಣ
ಮೈಸೂರು

ಜಿಲ್ಲಾಧಿಕಾರಿ ಕಚೇರಿ ಬಳಿ ಮೈಸೂರು ರಕ್ಷಣಾ ವೇದಿಕೆ, ಮೈಸೂರು ಕೊಡವ ಸಮಾಜ ಧರಣ

December 29, 2021

ಮೈಸೂರು,ಡಿ.೨೮(ಆರ್‌ಕೆಬಿ)- ರಂಗಾ ಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿ ರಂಗಾಯಣ ದ್ವಾರದ ಬಳಿ ರಂಗಾಯಣ ಉಳಿಸಿ ಹೋರಾಟ ಸಮಿತಿ ಸದಸ್ಯರ ಪ್ರತಿ ಭಟನೆ ಎರಡನೇ ವಾರಕ್ಕೆ ಕಾಲಿಟ್ಟಿದೆ. ಈ ನಡುವೆ ಅಡ್ಡಂಡ ಕಾರ್ಯಪ್ಪ ಅವರ ಒಳ್ಳೆಯ ಕೆಲಸ ಕಾರ್ಯಗಳಿಗೆ ಕೆಲವರು ಅಡ್ಡಿ ಪಡಿ ಸುತ್ತಿದ್ದಾರೆಂದು ಮೈಸೂರು ರಕ್ಷಣಾ ವೇದಿಕೆ, ಕೊಡವ ಸಮಾಜ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಬಿಮಾನಿ ಬಳಗ ಸೇರಿದಂತೆ ವಿವಿಧ ಸಂಘಟನೆಗಳ ನೂರಾರು ಸದ ಸ್ಯರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣ ನಡೆಸಿದರು.

ಸ್ವಪ್ರತಿಷ್ಟೆ ಬಿಡಿ, ರಂಗಾಯಣ ನಡೆಯಲು ಬಿಡಿ, ರಂಗಾಯಣ ಇರುವುದು ರಂಗ ಚಟು ವಟಿಕೆಗಳಿಗೆ, ಅನೈತಿಕ ಹೋರಾಟಕ್ಕಲ್ಲ, ರಂಗಾಯಣ ನಿರ್ದೇಶಕರಿಗೆ ಸ್ವತಂತ್ರವಾಗಿ ಕೆಲಸ ಮಾಡಲು ಬಿಡಿ, ನಾಟಕ ನೋಡಲು ಬರುವವರಿಗೆ ತೊಂದರೆ ನೀಡಬೇಡಿ, ರಂಗಾಯಣದಲ್ಲಿ ದಬ್ಬಾಳಿಕೆ ಸಲ್ಲದು, ಚಕ್ರವರ್ತಿ ಸೂಲಿಬೆಲೆ ಭಾಷಣ ನಮಗೆ ಬೇಕು, ಮಾವೋವಾದಿ ಎಡಪಂಥೀಯರಿಗೆ ದಿಕ್ಕಾರ, ರಂಗಾಯಣದಲ್ಲಿ ಪಂಥ ಬೇಧ ನಿಲ್ಲಲಿ. ಪಟ್ಟಭದ್ರ ಹಿತಾಸಕ್ತಿಗಳಿಗೆ ಧಿಕ್ಕಾರ ಇನ್ನಿತರೆ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮೈಸೂರು ರಕ್ಷಣಾ ವೇದಿಕೆ ಅಧ್ಯಕ್ಷ ಮೈ.ಕಾ. ಪ್ರೇಮಕುಮಾರ್, ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ರಂಗಾಯಣ ಮತ್ತು ರಂಗಭೂಮಿಗೆ ಹೊಸ ಸ್ಪರ್ಶ ನೀಡುವ ಮೂಲಕ ತಮ್ಮ ಕೆಲಸಕ್ಕೆ ನ್ಯಾಯ ಸಲ್ಲಿಸುತ್ತಿ ದ್ದಾರೆ. ರಂಗಾಯಣವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಅವರ ಕಾರ್ಯಕ್ಕೆ ಎಲ್ಲರೂ ಬೆಂಬಲ ನೀಡಬೇಕಾದ ಅಗತ್ಯವಿದೆ, ಆದರೆ, ಬುದ್ಧಿಜೀವಿಗಳೆಂದು ಕರೆದುಕೊಳ್ಳುವ ಕೆಲವು ಬೆರಳೆಣ ಕೆಯಷ್ಟು ವ್ಯಕ್ತಿಗಳು ತಮ್ಮ ಸ್ವಾರ್ಥ ಕ್ಕಾಗಿ ನಡೆಸುತ್ತಿರುವ ಪ್ರತಿಭಟನೆಗೆ ಸರ್ಕಾರ ಕಿವಿಗೊಡಬಾರದು ಎಂದು ಆಗ್ರಹಿಸಿದರು.

ಭರಣ ಆರ್ಟ್ ಗ್ಯಾಲರಿ ಸಂಸ್ಥಾಪಕ ಎನ್.ವಿ.ಕಾವೇರಪ್ಪ ಮಾತನಾಡಿ, ಕಾರ್ಯಪ್ಪ ಅವರು ತಮ್ಮ ವಿನೂತನ ಕಾರ್ಯಕ್ರಮ ಗಳ ಮೂಲಕ ರಂಗಾಯಣದ ಘನತೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಿದ್ದಾರೆ. ರಂಗಾಯಣಕ್ಕೆ ಹೊಸ ಆಯಾಮ ನೀಡಿ ದ್ದಾರೆ. ಅವರ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ಹಿಂದೆ ಹಲವಾರು ಪಟ್ಟಭದ್ರ ಹಿತಾಸಕ್ತಿಗಳ ಕೈವಾಡವಿದೆ ಎಂದು ಹೇಳಿದರು.

ಕೊಡವರಿಗೆ ರಾಷ್ಟç ಮೊದಲು, ಅವರ ಮೊದಲ ಸಲ್ಯುಟ್ ಸೈನಿಕರಿಗೆ. ಅಂತಹ ಸಂಸ್ಕೃತಿಯಿAದ ಬಂದವರು ಕಾರ್ಯಪ್ಪ. ಈ ಹಿಂದೆ ಯಾವ ನಿರ್ದೇಶಕರೂ ಮಾಡದ ಕಾರ್ಯವನ್ನು ರಂಗಾಯಣದಲ್ಲಿ ಮಾಡು ತ್ತಿದ್ದಾರೆ. ಅವರ ಪ್ರಯತ್ನದಿಂದ ಇಂದು ರಂಗಾಯಣ ಆವರಣ ಹಸಿರಿನಿಂದ ಕಂಗೊ ಳಿಸುವಂತಾಗಿದೆ. ಕಾರ್ಯಪ್ಪ ಅವರನ್ನು ವಜಾಗೊಳಿಸಲು ಯತ್ನಿಸುತ್ತಿರುವವರು ಮಾಡುತ್ತಿರುವ ಆರೋಪಗಳನ್ನು ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಕೆ: ನಂತರ ಕೊಡವ ಸಮಾಜದ ವತಿಯಿಂದ ಜಿಲ್ಲಾಧಿ ಕಾರಿ ಕಚೇರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಮೈಸೂರು ರಂಗಾಯಣಕ್ಕೆ ಎರಡು ವರ್ಷದ ಹಿಂದೆ ನಿರ್ದೇಶಕರಾಗಿ ಬಂದ ಕೊಡಗು ಜಿಲ್ಲೆಯ ರಂಗಭೂಮಿ ಕಲಾವಿದ ಅಡ್ಡಂಡ ಸಿ.ಕಾರ್ಯಪ್ಪ ಉತ್ತಮ ಕೆಲಸ ಮಾಡು ತ್ತಿದ್ದಾರೆ. ರಂಗಾಯಣದ ಘನತೆಯನ್ನು ಹೆಚ್ಚಿಸಿದ್ದಾರೆ. ಇದು ಕೊಡವರು ಹೆಮ್ಮೆ ಪಡ ಬೇಕಾದ ವಿಚಾರ. ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕಾರ್ಯಪ್ಪ ಅವರಿಗೆ ಕಿರುಕುಳ ನೀಡುತ್ತಾ, ಪ್ರತಿಭಟನೆ ಹೆಸರಿನಲ್ಲಿ ತೊಂದರೆ ಕೊಡುತ್ತಿದ್ದಾರೆ. ಈ ಬಗ್ಗೆ ಇತ್ತೀಚೆಗೆ ಕೇಕಡ ಬೆಳ್ಳಿಯಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಮೈಸೂರು ಕೊಡವ ಸಮಾಜದ ಸಭೆ ಯಲ್ಲಿ ಸರ್ವಾನುಮತದಿಂದ ಖಂಡಿಸಿದೆ.
ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅವರಿಗೆ ಕಿರುಕುಳ ನೀಡುವುದು, ಸಿದ್ಧಾಂತದ ಹೆಸರಿನಲ್ಲಿ ಅಪ ಪ್ರಚಾರ ಮಾಡುವುದು, ರಂಗಾಯಣದ ಕೆಲಸಗಳಿಗೆ ತೊಂದರೆ ಕೊಡುವುದನ್ನು ಗಮನಿಸಿದ್ದೇವೆ. ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ ಗಲಭೆ ಎಬ್ಬಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಂಸದ ಪ್ರತಾಪ್‌ಸಿಂಹ, ಶಾಸಕರಾದ ಎಲ್. ನಾಗೇಂದ್ರ ಈ ಬಗ್ಗೆ ಧ್ವನಿ ಎತ್ತಬೇಕೆಂದು ಕೊಡವ ಸಮಾಜದ ಮುಖಂಡರು ಆಗ್ರಹಿಸಿದ್ದಾರೆ.

ಕಾರ್ಯಪ್ಪ ನಿರ್ವಹಿಸುತ್ತಿರುವ ರಂಗಾ ಯಣದ ಚಟುವಟಿಕೆಗಳಿಗೆ ಯಾವುದೇ ತೊಂದರೆಯಾಗದAತೆ ಸರ್ಕಾರ ಎಚ್ಚರ ವಹಿಸಬೇಕು. ಇದೇ ರೀತಿ ತೊಂದರೆ ಕೊಡು ವುದನ್ನು ಮುಂದುವರಿಸಿದರೆ ಅಂಥವರ ವಿರುದ್ಧ ಸಮಾಜದ ಸದಸ್ಯರು ಉಗ್ರ ಪ್ರತಿ ಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಮನವಿ ಪತ್ರದಲ್ಲಿ ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಮೈಸೂರು ಕನ್ನಡ ವೇದಿಕೆ ಕಾರ್ಯದರ್ಶಿ ರಾಕೇಶ್ ಭಟ್, ಮೈಸೂರು ಕೊಡವ ಸಮಾಜದ ಅಧ್ಯಕ್ಷ ಕೇಕಡ ಬೆಳ್ಳಿಯಪ್ಪ, ಕಾರ್ಯದರ್ಶಿ ಮಲ ಚೀರ ಪೊನ್ನಪ್ಪ, ಖಜಾಂಚಿ ಮುಕ್ಕಾಟಿರ ಜೀವನ್, ಕಲ್ಚರಲ್ ಅಂಡ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಕೆ.ಡಿ.ಮುತ್ತಪ್ಪ, ಮಾಜಿ ಅಧ್ಯಕ್ಷ ಎಂಪಿ.ನಾಣಯ್ಯ, ಮಹಿಳಾ ಘಟಕದ ಅಧ್ಯಕ್ಷೆ ಲವ್ಲಿ ಅಪ್ಪಯ್ಯ, ಕೊಡವ ಸಹಕಾರ ಸಂಘದ ಅಧ್ಯಕ್ಷೆ ನಂಜಮ್ಮ, ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಸುಬೇ ದಾರ್ ಉತ್ತಪ್ಪ, ಮೈಸೂರು ಸಶಸ್ತç ಮಾಜಿ ಸೈನಿಕರ ಸಂಘದ ಅಧ್ಯಕ್ಷ ಪಿ.ಕೆ.ಬಿದ್ದಪ್ಪ, ಬಿಜೆಪಿ ನಗರ ವಕ್ತಾರ ಎಂ.ವಿ.ಮೋಹನ್, ನಗರಪಾಲಿಕೆ ಸದಸ್ಯರಾದ ಎಂ.ಯು. ಸುಬ್ಬಯ್ಯ, ಶಿವಕುಮಾರ್, ಮುಖಂಡ ರಾದ ಸಂಜಯ್, ಪ್ರಮೋದ್‌ಗೌಡ, ನವೀನ್‌ಕುಮಾರ್ ಕೊಪ್ಪಲು, ಮಹೇಶ್ ಕುದೇರು, ಎಸ್.ಜಯಸಿಂಹ, ಶ್ರೀನಿವಾಸ ಪ್ರಸಾದ್, ವಿಕ್ರಂ ಅಯ್ಯಂಗಾರ್, ಮೈಸೂರು ಹೋಟೆಲ್ ಮಾಲೀಕರ ಸಂಘದ ಮಾಧವ ರಾವ್, ಹೇಮಂತ್‌ಕುಮಾರ್, ಕೆ.ಭಾಸ್ಕರ ಶೆಟ್ಟಿ ಇನ್ನಿತರರು ಉಪಸ್ಥಿತರಿದ್ದರು.

Translate »