ಜಿಲ್ಲಾ ಪೊಲೀಸ್ ಕ್ರೀಡಾಕೂಟಕ್ಕೆ ಡಿಸಿ ಚಾಲನೆ
ಮೈಸೂರು

ಜಿಲ್ಲಾ ಪೊಲೀಸ್ ಕ್ರೀಡಾಕೂಟಕ್ಕೆ ಡಿಸಿ ಚಾಲನೆ

December 29, 2021

ಮೈಸೂರು, ಡಿ. ೨೮(ಆರ್‌ಕೆ)- ಮೂರು ದಿನಗಳ ಕಾಲ ನಡೆಯಲಿರುವ ಮೈಸೂರು ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಮಂಗಳವಾರ ಚಾಲನೆ ನೀಡಿದರು.

ಮೈಸೂರಿನ ಜ್ಯೋತಿನಗರದ ಡಿಎಆರ್ ಕವಾಯತು ಮೈದಾನದಲ್ಲಿ ಏರ್ಪಡಿಸಿರುವ ಕ್ರೀಡಾಕೂಟವನ್ನು ಪಾರಿ ವಾಳ ಮತ್ತು ಬಲೂನುಗಳನ್ನು ಹಾರಿ ಬಿಡುವ ಮೂಲಕ ಜಿಲ್ಲಾಧಿಕಾರಿಗಳು ಉದ್ಘಾಟಿಸಿದರು. ನಂತರ ಕ್ರೀಡಾಪಟು ಗಳನ್ನುದ್ದೇಶಿಸಿ ಮಾತನಾಡಿದ ಅವರು, ಕೋವಿಡ್-೧೯ ಪರಿಸ್ಥಿತಿ ನಡುವೆಯೂ ಪೊಲೀಸ್ ಕರ್ತವ್ಯ ನಿರ್ವಹಿಸುತ್ತಿ ರುವ ಸಿಬ್ಬಂದಿ, ಅಧಿಕಾರಿಗಳಿಗೆ ಒತ್ತಡ ಸಹಜವಾಗಿ ಹೆಚ್ಚಾ ಗಿರುತ್ತದೆ. ಅದಕ್ಕಾಗಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಅತೀ ಮುಖ್ಯ ಎಂದರು. ಮನಸ್ಸನ್ನು ಶಾಂತಿಯುತ ಹಾಗೂ ಸದೃಢವಾಗಿರಿಸಿಕೊಂಡು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ವೇಳೆ ಕನಿಷ್ಠ ಅರ್ಧ ಗಂಟೆಯಾದರೂ ವಾಕಿಂಗ್ ಮಾಡುವುದು ಅತೀ ಅವಶ್ಯವಾಗಿದ್ದು, ಪೊಲೀಸ್ ಸಿಬ್ಬಂದಿ ನಿತ್ಯ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ ಎಂದು ಜಿಲ್ಲಾಧಿಕಾರಿಗಳು ಇದೇ ಸಂದರ್ಭ ನುಡಿದರು.
ಆರ್‌ಪಿಐ ಪ್ರದೀಪ್‌ಕುಮಾರ ನೇತೃತ್ವದಲ್ಲಿ ಡಿಎಆರ್ ಮೈಸೂರು ಗ್ರಾಮಾಂತರ, ನಂಜನಗೂಡು, ಹುಣಸೂರು, ಉಪವಿಭಾಗ, ಜಿಲ್ಲಾ ವಿಶೇಷ ಘಟಕ ಹಾಗೂ ಮಹಿಳಾ ಪೊಲೀಸ್ ತಂಡಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿವೆ. ಮೊದಲ ದಿನವಾದ ಇಂದು ಪುರುಷರಿಗೆ ೮೦೦ ಮೀ. ಓಟ, ಅಧಿಕಾರಿಗಳಿಗೆ ೨೦೦ ಮೀ. ಹಾಗೂ ೧೦೦ ಮೀ. ಓಟ, ಶಾಟ್ ಪುಟ್, ಜಾವೆಲಿನ್ ಥ್ರೋ, ವೇಗ ನಡಿಗೆ, ಉದ್ದ ಜಿಗಿತ, ಎತ್ತರ ಜಿಗಿತ, ಕಬಡ್ಡಿ, ವಾಲಿಬಾಲ್, ಡಿಸ್ಕಸ್ ಥ್ರೋ ಕ್ರೀಡೆ ಗಳು ನಡೆದವು. ನಾಳೆ (ಡಿ.೨೯) ರಿವಾಲ್ವರ್ ಶೂಟಿಂಗ್, ಬ್ಯಾಡ್ಮಿಂಟನ್, ಟೆನ್ನಿಸ್ ಬಾಲ್ ಕ್ರಿಕೆಟ್, ಟಗ್‌ಆಫ್ ವಾರ್, ಮತ್ತು ಡಿ.೩೦ರಂದು ೪x೧೦೦ ಮೀ. ರಿಲೇ ಫೈನಲ್, ೧೦೦ ಮೀ. ಅಂತಿಮ ಓಟ, ಜಿಮ್ಕಾನಾ, ಮ್ಯೂಸಿಕ್ ಚೇರ್ ನಂತಹ ಸ್ಪರ್ಧೆಗಳ ಮೂಲಕ ಅಂದು ಸಂಜೆ ೩ ದಿನಗಳ ಜಿಲ್ಲಾ ಪೊಲೀಸ್ ಕ್ರೀಡಾಕೂಟ ಮುಕ್ತಾಯಗೊಳ್ಳಲಿದೆ.

Translate »