`ಖಾದಿ ಅರ್ಬನ್ ಹಾತ್’ ಯೋಜನೆ ಕೈಬಿಟ್ಟ ಸರ್ಕಾರ
ಮೈಸೂರು

`ಖಾದಿ ಅರ್ಬನ್ ಹಾತ್’ ಯೋಜನೆ ಕೈಬಿಟ್ಟ ಸರ್ಕಾರ

December 29, 2021

ಮೈಸೂರು,ಡಿ.೨೮(ಪಿಎಂ)-ಮೈಸೂರಿನ ವಿಜಯ ನಗರದ ೩ನೇ ಹಂತದಲ್ಲಿ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ವತಿ ಯಿಂದ ನಿರ್ಮಿಸಲು ಉದ್ದೇಶಿಸಿದ್ದ `ಖಾದಿ ಅರ್ಬನ್ ಹಾತ್’ ಯೋಜನೆಯನ್ನು ಸರ್ಕಾರ ಕೈಬಿಟ್ಟಿದ್ದು, ಇದೀಗ ಸದರಿ ಯೋಜನೆಯ ಅಗತ್ಯತೆಯನ್ನು ಉಲ್ಲೇಖಿಸಿ, ಸರ್ಕಾರದ ಅನುಮೋದನೆ ಪಡೆಯಲು ಮಂಡಳಿ ಮುಂದಾಗಿದೆ.

ಒಂದೇ ಸೂರಿನಡಿ ಖಾದಿ ಸೇರಿದಂತೆ ಗ್ರಾಮೀಣ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುವುದರ ಜೊತೆಗೆ ಈ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಮಂಡಳಿಯು ಈ ಯೋಜನೆ ಕೈಗೆತ್ತುಕೊಂಡಿತ್ತು. ಆದರೆ ಯಾವ ಸಕಾರಣವನ್ನೂ ನೀಡದೇ ಸರ್ಕಾರ ಸದರಿ ಯೋಜನೆಯನ್ನು ಕೈಬಿಟ್ಟಿತ್ತು. ಇದೀಗ ಮಂಡಳಿ ಈ ಯೋಜನೆಯ ಮಹತ್ವ ಉಲ್ಲೇಖಿಸಿ, ಸರ್ಕಾರಕ್ಕೆ ಮತ್ತೆ ಪ್ರಸ್ತಾವನೆ ಸಲ್ಲಿಸಿದೆ.

ವಿಜಯನಗರದ ೩ನೇ ಹಂತದ (ಬಂಟರ ಸಂಘದ ಸಮೀಪ) ಸಿಎ (ನಾಗರಿಕ ಸೌಲಭ್ಯ) ನಿವೇ ಶನದಲ್ಲಿ (ನಂ.೧೬/ಎ, ಎ-೧ ಬ್ಲಾಕ್) `ಖಾದಿ ಅರ್ಬನ್ ಹಾತ್’ ನಿರ್ಮಾಣಕ್ಕೆ ಡಿಪಿಆರ್ (ವಿಸ್ತೃತ ಯೋಜನಾ ವರದಿ) ಸಿದ್ಧಪಡಿಸಿ, ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ೩,೭೫೦ ಚದುರ ಮೀಟರ್‌ನ ಸದರಿ ನಿವೇಶನದಲ್ಲಿ ಖಾದಿ ಅರ್ಬನ್ ಹಾತ್ ನಿರ್ಮಿಸಿ ಖಾದಿ ಹಾಗೂ ಗ್ರಾಮೀಣ ಉತ್ಪನ್ನಗಳು ಸೇರಿದಂತೆ ೨೦೦ ವಿಧದ ಉತ್ಪನ್ನಗಳು ಇಲ್ಲಿ ಒಂದೇ ಸೂರಿನಡಿ ದೊರೆಯಲು ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿತ್ತು. ಖಾದಿ ಸಂಸ್ಥೆಗಳು ಹಾಗೂ ಮಂಡಳಿಯಿAದ ಸಹಾಯ ಧನ ಪಡೆದು ಗ್ರಾಮೀಣ ಪ್ರದೇಶದಲ್ಲಿ ಗುಡಿ ಕೈಗಾ ರಿಕೆ ನಡೆಸುವವರಿಗೆ ಮಾರುಕಟ್ಟೆ ಸೌಲಭ್ಯ ಕಲ್ಪಿಸು ವುದು ಖಾದಿ ಅರ್ಬನ್ ಹಾತ್ ಯೋಜನೆಯ ಮತ್ತೊಂದು ಉದ್ದೇಶವಾಗಿತ್ತು. ಜೊತೆಗೆ ಪ್ರವಾಸಿ ತಾಣದ ಸ್ಪರ್ಶ ನೀಡಲು ಮಂಡಳಿ ರೂಪುರೇಷೆ ಸಿದ್ಧಪಡಿಸಿ, ಸರ್ಕಾರದ ಅನುಮೋದನೆಯ ನಿರೀಕ್ಷೆ ಯಲ್ಲಿತ್ತು. ಆದರೆ ಸರ್ಕಾರ ಯೋಜನೆ ಕೈಬಿಟ್ಟಿರುವ ಹಿನ್ನೆಲೆಯಲ್ಲಿ ಸದ್ಯ ಮಂಡಳಿ ಮತ್ತೆ ಸರ್ಕಾರದ ಅನುಮತಿಯ ಪ್ರಯತ್ನದಲ್ಲಿ ಮುನ್ನಡೆದಿದೆ.

Translate »