ನಕಲಿ ನಂದಿನಿ ತುಪ್ಪ ತಯಾರಿಕೆ ಸಂಬಂಧ ನಾಲ್ವರು ಬಂಧನ
ಮೈಸೂರು

ನಕಲಿ ನಂದಿನಿ ತುಪ್ಪ ತಯಾರಿಕೆ ಸಂಬಂಧ ನಾಲ್ವರು ಬಂಧನ

December 29, 2021

ಮೈಸೂರು, ಡಿ.೨೮(ಎಸ್‌ಬಿಡಿ)- `ನಕಲಿ ನಂದಿನಿ ತುಪ್ಪ’ ಪ್ರಕರಣ ಸಂಬAಧ ನಾಲ್ವರು ಆರೋಪಿಗಳನ್ನು ಪೊಲೀಸರು ಮಂಗಳವಾರ ಬಂಧಿಸಿ ದ್ದಾರೆ. ಮೈಸೂರು ಹೊರವಲಯ ಹೊಸಹುಂಡಿ ಗ್ರಾಮದ ಬಳಿ ನಕಲಿ ನಂದಿನಿ ತುಪ್ಪ ತಯಾ ರಿಸಿ, ಮಾರಾಟ ಮಾಡುವ ಮೂಲಕ ಸಾರ್ವಜನಿಕರಿಗೆ ವಂಚಿಸಿರುವ ಪ್ರಕರಣ ಸಂಬAಧ ನಾಲ್ವರನ್ನು ಬಂಧಿಸಲಾಗಿದೆ. ಎಫ್‌ಐಆರ್ ನಲ್ಲಿ ನಮೂದಿಸಿದ್ದ ಇಬ್ಬರು ಆರೋಪಿಗಳನ್ನು ಬಂಧಿ ಸಿದ ನಂತರ ಇನ್ನಿಬ್ಬರನ್ನು ಬಂಧಿಸಲಾಗಿದೆ. ಎಲ್ಲಾ ಆರೋಪಿ ಗಳೂ ಹಲವು ವರ್ಷಗಳಿಂದ ಮೈಸೂರು ನಗರದಲ್ಲೇ ವಾಸವಿ ದ್ದಾರೆ ಎಂದು ತಿಳಿದುಬಂದಿದೆ. ನ್ಯಾಯಾಲಯದ ಆದೇಶ ವಿರುವ ಕಾರಣ ತನಿಖಾ ಹಂತದಲ್ಲಿ ಹೆಚ್ಚಿನ ಮಾಹಿತಿ ಬಹಿ ರಂಗಪಡಿಸಲಾಗದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಆರ್.ಚೇತನ್ ಮಂಗಳವಾರ ಸುದ್ದಿಗೋಷ್ಠಿ ಯಲ್ಲಿ ತಿಳಿಸಿದರು. ಬಂಧಿಸಿದ ಆರೋಪಿಗಳ ಹೇಳಿಕೆ ದಾಖಲಿಸಿಕೊಂಡು, ತನಿಖೆ ಮುಂದು ವರೆಸಲಾಗುತ್ತದೆ. ಇವರ ವಿರುದ್ಧ ಬೇರೆ ಪೊಲೀಸ್ ಠಾಣೆಗಳಲ್ಲಿ ಕೇಸ್ ದಾಖಲಾಗಿ ದೆಯೇ? ಅಥವಾ ಯಾವುದಾದರೂ ಪ್ರಕರಣ ದಲ್ಲಿ ಭಾಗಿಯಾಗಿದ್ದಾರೆಯೇ? ಎನ್ನುವ ಮಾಹಿತಿ ಸಂಗ್ರಹಿಸಲು ಕ್ರಮ ವಹಿಸಲಾಗಿದೆ. ನಕಲಿ ತುಪ್ಪ ತಯಾರಿಕಾ ಘಟಕ ನಡೆಸುತ್ತಿದ್ದವರು, ಸಹಕಾರ ನೀಡಿ ದ್ದವರು, ಉತ್ಪನ್ನವನ್ನು ಗ್ರಾಹಕರಿಗೆ ಸರಬರಾಜು ಮಾಡಿದವರು ಹೀಗೆ ಪ್ರಕರಣದಲ್ಲಿ ಭಾಗಿಯಾಗಿರುವಮತ್ತಷ್ಟು ಆರೋಪಿಗಳನ್ನು ಬಂಧಿಸಬೇಕಿದೆ. ನಕಲಿ ತುಪ್ಪ ತಯಾರಿಕೆಯಿಂದ ಹಿಡಿದು ಉತ್ಪನ್ನ ಗ್ರಾಹಕರಿಗೆ ತಲುಪಿಸಿರುವ ಸಂಪೂರ್ಣ ಜಾಲದ ಬಗ್ಗೆಯೂ ತನಿಖೆ ನಡೆಸಲಾಗುವುದು.

ವಿಜಯ ದಶಮಿಯಿಂದ ಆರಂಭ: ಕಳೆದ ವಿಜಯ ದಶಮಿಯಿಂದ ನಕಲಿ ತುಪ್ಪ ತಯಾರಿಕೆ ಆರಂಭಿಸಲಾಗಿದೆ ಎಂದು ತಿಳಿದುಬಂದಿದೆ. ಇದಕ್ಕೆ ಜಾಗ ಬಾಡಿಗೆ ನೀಡಿರುವ ಮಾಲೀಕನ ಪಾತ್ರ ಹಾಗೂ ನಿರ್ಲಕ್ಷö್ಯತೆ, ಆ ವ್ಯಾಪ್ತಿಯ ಬೀಟ್ ಪೊಲೀಸರು ಏಕೆ ಮಾಹಿತಿ ಸಂಗ್ರಹಿಸಲಿಲ್ಲ? ಸಮೀಪದ ಎಪಿಎಂಸಿ ಮೂಲಕವೂ ನಕಲಿ ತುಪ್ಪ ಮಾರಾಟ ನಡೆಯುತ್ತಿತ್ತಾ? ಹೀಗೆ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ ಅವರು, ಇದುವರೆಗಿನ ತನಿಖೆ ಪ್ರಕಾರ ಕೆಎಂಎಫ್‌ನ ಸಿಬ್ಬಂದಿ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ, ಹಾಗಂತ ಈಗಲೇ ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದರು.

ವಿವಿಧ ಬ್ರಾಂಡ್ ನಕಲಿ: ಪರಿಶೀಲನೆ ವೇಳೆ ವನಸ್ಪತಿ, ನಂದಿನಿ ತುಪ್ಪ, ಪಾಮಲಿನ್ ಸೇರಿದಂತೆ ಒಟ್ಟು ೧೦ ಟನ್‌ನಷ್ಟು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ನಂದಿನಿ ಅಲ್ಲದೆ ಇನ್ನೆರಡು ಬ್ರಾಂಡ್‌ನ ನಕಲಿ ವಸ್ತುಗಳನ್ನು ತಯಾರಿಸುತ್ತಿದ್ದರು. ನಕಲಿ ಉತ್ಪನ್ನಗಳನ್ನು ೨-೩ ಸ್ಥಳಗಳಿಗೆ ಪೂರೈಕೆ ಮಾಡಿದ್ದರ ಬಗ್ಗೆ ಆರೋಪಿಗಳು ಮಾಹಿತಿ ನೀಡಿದ್ದು, ನೈಜತೆ ಬಗ್ಗೆ ತನಿಖೆ ನಡೆಸಬೇಕಿದೆ. ನಕಲಿ ಉತ್ಪನ್ನಗಳ ಮೂಲಕ ಸಾರ್ವಜನಿಕರನ್ನು ವಂಚಿಸಿ, ಅವರ ಆರೋಗ್ಯದ ಮೇಲಿನ ದುಷ್ಪರಿಣಾಮಕ್ಕೆ ಕಾರಣವಾಗಬಹುದಾದ ಈ ಪ್ರಕರಣದ ತನಿಖೆಯನ್ನು ಡಿವೈಎಸ್ಪಿ ನೇತೃತ್ವದ ತಂಡ ನಡೆಸುತ್ತಿದ್ದು, ತ್ವರಿತವಾಗಿ ತನಿಖೆ ಮುಗಿಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುವುದಾಗಿ ಎಸ್ಪಿ ಚೇತನ್ ತಿಳಿಸಿದರು. ಎಎಸ್‌ಪಿ ಶಿವಕುಮಾರ್, ಡಿವೈಎಸ್ಪಿ ಸುಮಿತ್ ಹಾಗೂ ಇನ್‌ಸ್ಪೆಕ್ಟರ್ ಶಶಿಕುಮಾರ್ ಹಾಜರಿದ್ದರು.

ಹೊಸಹುಂಡಿ ಗ್ರಾಮದ ಹೊರವಲಯದಲ್ಲಿ ನಕಲಿ ನಂದಿನಿ ತುಪ್ಪ ತಯಾರಿಕಾ ಘಟಕವನ್ನು ಸ್ಥಳೀಯರ ನೆರವಿನಿಂದ ಮೈಸೂರು ಜಿಲ್ಲಾ ಹಾಲು ಒಕ್ಕೂಟ (ಮೈಮುಲ್) ಹಾಗೂ ಆಹಾರ ಸುರಕ್ಷತೆ, ಗುಣಮಟ್ಟ ಇಲಾಖೆಯ ಅಧಿಕಾರಿಗಳು ಡಿ. ೧೬ರಂದು ಪತ್ತೆ ಹಚ್ಚಿದ್ದರು. ವನಸ್ಪತಿ, ನಂದಿನಿ ತುಪ್ಪ, ಪಾಮಲಿನ್ ಸೇರಿದಂತೆ ಒಟ್ಟು ೧೦ ಟನ್‌ನಷ್ಟು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಕುರಿತು ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಇವರಲ್ಲಿಬ್ಬರು ಹಾಗೂ ಇನ್ನಿಬ್ಬರು ಹೊಸಬರು ಸೇರಿ ಸದ್ಯ ನಾಲ್ವರನ್ನು ಬಂಧಿಸಲಾಗಿದೆ.

Translate »