ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ, ಬೊಮ್ಮಾಯಿ-ಯಡಿಯೂರಪ್ಪ ಸಾರಥ್ಯದಲ್ಲೇ ಚುನಾವಣೆ
News

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ, ಬೊಮ್ಮಾಯಿ-ಯಡಿಯೂರಪ್ಪ ಸಾರಥ್ಯದಲ್ಲೇ ಚುನಾವಣೆ

December 29, 2021

ಬೆಂಗಳೂರು, ಡಿ. ೨೮ (ಕೆಎಂಶಿ)- ರಾಜ್ಯದಲ್ಲಿ ನಾಯಕತ್ವದ ಬದ ಲಾವಣೆ ಪ್ರಶ್ನೆಯೇ ಇಲ್ಲ. ಮುಂಬರುವ ವಿಧಾನಸಭಾ ಚುನಾ ವಣೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಾರಥ್ಯದಲ್ಲೇ ನಡೆಸಲಾಗುವುದು ಎಂದು ರಾಜ್ಯ ಉಸ್ತುವಾರಿ ಹೊಣೆ ಹೊತ್ತ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ಅರುಣ್‌ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಬಿಜೆಪಿ ರಾಜ್ಯ ಘಟಕದ ಕಾರ್ಯಕಾರಿಣ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನಾಯಕತ್ವ ಬದಲಾವಣೆಯ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಬೇಡಿ. ಬೊಮ್ಮಾಯಿ ಅವರೇ ಪೂರ್ಣ ಅವಧಿ ಮುಖ್ಯಮಂತ್ರಿ.

ಪ್ರತಿ ಪಕ್ಷಗಳು ಮತ್ತು ವಿರೋಧಿಗಳ ಮಾತಿಗೆ ಯಾರೂ ಕಿವಿಗೊಡಬೇಡಿ. ಸರ್ಕಾರ ಮತ್ತು ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲು ಮತ್ತು ಮುಜುಗರ ಉಂಟು ಮಾಡಲು ಇಂತಹ ಕುತಂತ್ರಗಳು ನಡೆ ಯುತ್ತಿವೆ. ವಿರೋಧಿಗಳನ್ನು ರಾಜಕೀಯವಾಗಿ ಮಣ ಸಿ, ಅದು ಬಿಟ್ಟು ಅವರ ಮಾತಿಗೆ ಕಿವಿಗೊಡ ಬೇಡಿ. ವಿಧಾನಸಭಾ ಚುನಾವಣೆ ಸಮೀಪದಲ್ಲಿದೆ. ನಾವು ಅತ್ತ ಕಡೆ ಗಮನಹರಿಸಿ, ಪಕ್ಷವನ್ನು ಸಂಘಟಿಸಬೇಕು. ಕರ್ನಾಟಕದ ಆಡಳಿತ ಮತ್ತು ಪಕ್ಷ ಸಂಘಟನೆಗೆ ಎಲ್ಲ ಮಾಹಿತಿ ಲಭ್ಯವಿದೆ. ಸ್ಥಳೀಯ ಸಂಸ್ಥೆಗಳಿAದ ವಿಧಾನಪರಿಷತ್ತಿನ ೨೫ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳಿಗೆ ನಮ್ಮವರೇಮುಳುವಾಗಿರುವುದು ನನ್ನ ಗಮನಕ್ಕೆ ಬಂದಿದೆ. ಪಕ್ಷ ವಿರೋಧಿ ಚಟುವಟಿಕೆ ಮಾಡಿ ದವರಿಗೆ ನಮ್ಮಲ್ಲಿ ತಕ್ಕ ಸಾಕ್ಷಿಯಾಗುತ್ತದೆ. ಯಾವುದೇ ಒಬ್ಬ ವ್ಯಕ್ತಿಯಿಂದ ಪಕ್ಷವಿಲ್ಲ. ಕಾರ್ಯಕರ್ತರ ಸಂಘಟನೆಯಿAದ ಪಕ್ಷ ದೊಡ್ಡ ಹೆಮ್ಮರವಾಗಿ ಬೆಳೆದಿದೆ.

ಒಳಗೇ ಇದ್ದುಕೊಂಡು ಪಕ್ಷದ ಬೆನ್ನಿಗೆ ಇರಿಯುವವರಿಗೆ ಮುಂದೆ ದೊಡ್ಡ ಶಿಕ್ಷೆ ಕಾದಿದೆ ಎಂದು ಎಚ್ಚರಿಕೆ ನೀಡಿದರು. ಯಡಿಯೂರಪ್ಪ ಮತ್ತು ಬೊಮ್ಮಾಯಿ ನಾಯಕತ್ವಕ್ಕೆ ನೀವು ಬೆಂಬಲ ನೀಡಿ, ಸರ್ಕಾರದ ವಿರುದ್ಧ ಆರೋಪ ಮತ್ತು ಅಪಪ್ರಚಾರ ನಡೆಸುತ್ತಿರುವ ಕಾಂಗ್ರೆಸ್ ನಾಯಕರಿಗೆ ಒಗ್ಗಟ್ಟಾಗಿ ಉತ್ತರ ನೀಡಲು ಗಮನಹರಿಸಿ.

ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನಪರ ಯೋಜನೆಗಳನ್ನು ಕಾರ್ಯಕ್ರಮಗಳ ಮೂಲಕ ಜನರಿಗೆ ತಲುಪಿಸುವ ಕೆಲಸ ಮಾಡಿ. ಅಧಿಕಾರ ತಾನಾಗಿಯೇ ಬರುತ್ತದೆ. ಜನರಿಗೆ ನಮ್ಮ ಪಕ್ಷ ಮತ್ತು ಆಡಳಿತದ ಬಗ್ಗೆ ವಿಶ್ವಾಸವಿದೆ. ಆ ವಿಶ್ವಾಸಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳಿ ಎಂದು ಎಚ್ಚರಿಸಿದರು. ವಿಧಾನಸಭಾ ಚುನಾವಣೆ ಇನ್ನೊಂದು ವರ್ಷ ಮಾತ್ರ ಬಾಕಿ ಇದೆ. ಇಂತಹ ಸಂದರ್ಭದಲ್ಲಿ ನಾಯಕತ್ವ ಬದಲಾವಣೆಯಾಗುತ್ತದೆ ಎಂಬ ಊಹಾಪೋಹಗಳು ಎದ್ದಿವೆ. ಇದರಿಂದ ಯಾರೇ ಸಮರ್ಥ ನಾಯಕರಾದರೂ, ಅವರ ಮಾನಸಿಕ ಸ್ಥಿತಿ ಹದಗೆಡುತ್ತದೆ. ಹಾಗಾಗಿ ಇಂತಹ ಊಹಾಪೋಹಗಳಿಗೆ ತಲೆಕೆಡಿಸಿಕೊಳ್ಳಬೇಡಿ. ಎಲ್ಲರೂ ಬೊಮ್ಮಾಯಿ ಅವರ ಬೆನ್ನಿಗೆ ನಿಂತು ಕೆಲಸ ಮಾಡಿ ಎಂದು ಸಿಂಗ್ ತಾಕೀತು ಮಾಡಿದರು.
ಸಂಪುಟ ಪುನರಾರಚನೆ ಇಲ್ಲವೇ ಪಕ್ಷದಲ್ಲಿ ಬದಲಾವಣೆಗೆ ಸಂಬAಧಿಸಿದAತೆ ಎಲ್ಲವನ್ನೂ ವರಿಷ್ಠರು ನೋಡಿಕೊಳ್ಳುತ್ತಾರೆ. ನೀವೇ ಕುಳಿತು ಮಾತನಾಡಿ, ಇಲ್ಲಸಲ್ಲದ್ದನ್ನು ಚರ್ಚೆಗೆ ಗ್ರಾಸ ಮಾಡಿಕೊಡಬೇಡಿ. ಪಕ್ಷಕ್ಕೆ ದುಡಿದವರಿಗೆ ಅಧಿಕಾರ ದೊರೆತೇ ದೊರೆಯುತ್ತದೆ. ಆದರೆ ಸಮಯ ಬರಬೇಕು. ಇದಕ್ಕಾಗಿ ಶಾಂತಚಿತ್ತದಿAದ ಇರುವುದು ಒಳ್ಳೆಯದು. ಕೆಲವು ಸಂದರ್ಭದಲ್ಲಿ ಏರುಪೇರು ಆಗುವುದು ಸಹಜ. ಆ ಬಗ್ಗೆ ಶಾಸರ‍್ಯಾರೂ ಬೇಸರಪಡುವ ಅಗತ್ಯವಿಲ್ಲ ಎಂದರು. ಪಕ್ಷದ ಎಲ್ಲ ಶಾಸಕರ ಕ್ಷೇತ್ರಗಳಿಗೂ ಸಮನಾಗಿ ಅನುದಾನ ದೊರೆಯಲಿದೆ. ಈ ಬಗ್ಗೆ ನಾನು ಮುಖ್ಯಮಂತ್ರಿಯವರ ಬಳಿಯೂ ಚರ್ಚೆ ಮಾಡುತ್ತೇನೆ ಎಂದು ಸದಸ್ಯರಿಗೆ ಭರವಸೆ ನೀಡಿದರು.

ಒಟ್ಟಾರೆ ಸಭೆಯಲ್ಲಿ ಅಭಿವೃದ್ಧಿ ಮತ್ತು ಅಧಿಕಾರ ವಿಷಯವಾಗಿ ಪ್ರಮುಖವಾಗಿ ಚರ್ಚೆಯಾಗಬೇಕು. ಸರ್ವರಿಗೂ ಸಮಪಾಲು, ಸಮಬಾಳು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡಬೇಕೆಂದು ಕಿವಿಮಾತು ಹೇಳಿದರು.

 

ಅವಿಶ್ರಾಂತವಾಗಿ ಕೆಲಸ ಮಾಡಲು ನಾನು ಸಮರ್ಥನಿದ್ದೇನೆ
ಬೆಂಗಳೂರು, ಡಿ. ೨೮ (ಕೆಎಂಶಿ)- ಅವಿಶ್ರಾಂತವಾಗಿ ಕೆಲಸ ಮಾಡುವ ಶಕ್ತಿ ನನಗಿರುವಾಗ ನಾಯಕತ್ವ ಬದಲಾವಣೆ ಪ್ರಶ್ನೆ ಎಲ್ಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಪ್ರಶ್ನಿಸಿದ್ದಾರೆ.

ಮನುಷ್ಯನಿಗೆ ಸಹಜವಾದ ರೋಗ ಲಕ್ಷಣಗಳಿರುತ್ತವೆ. ಅದನ್ನೇ ದೊಡ್ಡದಾಗಿ ಬಿಂಬಿಸಿ, ನಾಯಕತ್ವ ಬದಲಾವಣೆ ಎಂಬ ಅಪಪ್ರಚಾರ ಮಾಡಿ, ಸರ್ಕಾರ ಮತ್ತು ಪಕ್ಷವನ್ನು ಕುಗ್ಗಿಸುವ ಪ್ರಯತ್ನ ನಡೆದಿದೆ.ಪೂರ್ಣ ಅವಧಿ ಆಡಳಿತ ನಡೆಸುವುದಲ್ಲದೆ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿ, ಮತ್ತೆ ಕರ್ನಾಟಕದಲ್ಲಿ ಕಮಲದ ಪತಾಕೆ ಹಾರಿಸುವುದಾಗಿ ಘೋಷಣೆ ಮಾಡಿದ್ದಾರೆ.

ರಾಜ್ಯ ಉಸ್ತುವಾರಿ ಹೊಣೆ ಹೊತ್ತ ಬಿಜೆಪಿ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ಅರುಣ್‌ಸಿಂಗ್, ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂಬ ಹೇಳಿಕೆ ನೀಡಿದ ಬೆನ್ನಲ್ಲೇ ಮುಖ್ಯಮಂತ್ರಿಯ ವರು ಘಂಟಾಘೋಷವಾಗಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ವರ್ಷದ ಮುನ್ನೂರಾ ಅರವತ್ತೆöÊದು ದಿನಗಳ ಕಾಲ ಅವಿಶ್ರಾಂತವಾಗಿ ಕೆಲಸ ಮಾಡುವ ಶಕ್ತಿಯಿದೆ ಎಂದರು. ದಿನಕ್ಕೆ ಕನಿಷ್ಠ ಹದಿನೈದು ಗಂಟೆಗಳ ಕಾಲ ಕೆಲಸ ಮಾಡಲು ನಾನು ಸಂಕಲ್ಪ ಮಾಡಿದ್ದೇನೆ.ಅಷ್ಟೇ ಅಲ್ಲ,ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿ ಮರಳಿ ಅಧಿಕಾರಕ್ಕೆ ತರುವುದೇ ನನ್ನ ಗುರಿ ಎಂದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ವಲ್ಪ ಕಾಲ ವಿಶ್ರಾಂತಿ ಪಡೆಯಲಿ.ನಂತರ ಮರಳಲಿ ಎಂದು ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿರುವ ಕುರಿತು ಪ್ರತಿಕ್ರಿಯಿಸಿದ ಅವರು,ಕುಮಾರಸ್ವಾಮಿಗೆ ನನ್ನ ಮೇಲೆ ಪ್ರೀತಿ ಜಾಸ್ತಿ.ಅದಕ್ಕಾಗಿ ಈ ಮಾತು ಹೇಳಿದ್ದಾನೆ ಎಂದು ಅಸಹನೆಯಿಂದಲೇ ತಿರುಗೇಟು ನೀಡಿದರು. ಬಸವರಾಜ ಬೊಮ್ಮಾಯಿ ಅವರನ್ನು ಬದಲಿಸುವುದಿಲ್ಲ.ಅವರೇ ಮುಂದಿನ ಚುನಾವಣೆಯವರೆಗೆ ನಾಯಕರು ಎಂಬ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದಅವರು, ಈ ಮಾತಿಗಾಗಿ ನಾನು ಅರುಣ್ ಸಿಂಗ್ ಅವರಿಗೆ ಆಭಾರಿಯಾಗಿದ್ದೇನೆ ಎಂದರು. ಮಂಗಳವಾರ ಮತ್ತು ಬುಧವಾರ ನಡೆಯಲಿರುವ ಪಕ್ಷದ ರಾಜ್ಯ ಕಾರ್ಯಕಾರಿಣ ಯಲ್ಲಿ ಹಲವು ವಿಷಯಗಳ ಕುರಿತು ಚರ್ಚೆ ನಡೆಸುತ್ತೇವೆ.ಮುಂದಿನ ದಿನಗಳಲ್ಲಿ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಲು ರೂಪಿಸಬೇಕಾದ ತಂತ್ರಗಳ ಕುರಿತು ಮಾತನಾಡುತ್ತೇವೆ. ಇದೇ ರೀತಿ ಬೆಳಗಾವಿಯ ವಿಧಾನಪರಿಷತ್ ಚುನಾವಣೆ ಯಲ್ಲಿ ಏನಾಯಿತು ಎಂಬ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು. ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,ಈ ಬಗ್ಗೆ ನಾನು ಮಾತನಾಡಲಾರೆ. ಕಾರ್ಯಕಾರಿಣ ಸಭೆಗೆ ಬಂದಿದ್ದೇನೆ.ಅದರ ಬಗ್ಗೆಯೇ ಗಮನ ಕೊಡುತ್ತೇನೆ ಎಂದರು.

ಕಾರ್ಯಕಾರಿಣ ಯಲ್ಲಿ ಹಲವು ವಿಷಯಗಳು ಚರ್ಚೆಗೆ ಬರುತ್ತವೆ.ನಿರ್ದಿಷ್ಟವಾಗಿ ಅಲ್ಲಿ ಚರ್ಚೆಗೆ ಒಂದು ಅಜೆಂಡಾ ಇರುತ್ತದೆ.ಇದನ್ನು ಹೊರತುಪಡಿಸಿ ಬೇರೆ ಯಾವ ವಿಷಯಗಳು ಚರ್ಚೆಗೆ ಬರುತ್ತವೆ ಎಂದು ನೋಡೋಣ ಎಂದೂ ಹೇಳಿದರು.

Translate »