ಮೈಸೂರಲ್ಲಿ ಮತ್ತೊಂದು ಒಮಿಕ್ರಾನ್ ಪ್ರಕರಣ ಪತ್ತೆ
News, ಮೈಸೂರು

ಮೈಸೂರಲ್ಲಿ ಮತ್ತೊಂದು ಒಮಿಕ್ರಾನ್ ಪ್ರಕರಣ ಪತ್ತೆ

December 29, 2021

ತಾಂಜೇನಿಯಾದಿAದ ಬಂದಿರುವ ಮೈಸೂರು ವಿವಿ ವಿದ್ಯಾರ್ಥಿನಿಗೆ ಸೋಂಕು
ಮೈಸೂರು, ಡಿ.೨೮(ಆರ್‌ಕೆ)-ಮೈಸೂರಲ್ಲಿ ಮತ್ತೊಂದು ಒಮಿಕ್ರಾನ್ ಸೋಂಕಿನ ಪ್ರಕರಣ ಇಂದು ಪತ್ತೆಯಾಗಿದೆ. ತಾಂಜೇನಿಯಾ ರಾಷ್ಟçದಿಂದ ಶಿಕ್ಷಣಕ್ಕಾಗಿ ಬಂದಿರುವ ೨೯ ವರ್ಷ ವಯಸ್ಸಿನ ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ನಿಗೆ ಒಮಿಕ್ರಾನ್ ಸೋಂಕು ತಗುಲಿರುವುದು ಲ್ಯಾಬೊರೇಟರಿ ವರದಿಯಿಂದ ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯಾಧಿ ಕಾರಿ ಡಾ. ಕೆ.ಹೆಚ್.ಪ್ರಸಾದ್ ತಿಳಿಸಿದ್ದಾರೆ.

ಡಿಸೆಂಬರ್ ೨೦ರಂದು ತಾಂಜೇನಿಯಾದಿAದ ಹೈದರಾ ಬಾದ್‌ಗೆ ಬಂದಿದ್ದ ವಿದ್ಯಾರ್ಥಿನಿಗೆ ಅಲ್ಲಿನ ವಿಮಾನ ನಿಲ್ದಾಣ ದಲ್ಲಿ ಸ್ಲಾö್ಯಬ್ ತೆಗೆದು ಆರ್‌ಟಿ-ಪಿಸಿಆರ್ ಟೆಸ್ಟ್ಗೆ ಕಳುಹಿಸಲಾ ಗಿತ್ತು. ಕಳೆದ ರಾತ್ರಿ ಲ್ಯಾಬ್‌ನಿಂದ ವರದಿ ಬಂದಿದ್ದು, ಅದರಲ್ಲಿ ಒಮಿಕ್ರಾನ್ ಸೋಂಕಿನ ಪಾಸಿಟಿವ್ ಬಂದಿರುವುದು ಖಾತರಿ ಯಾಗಿದೆ ಎಂದ ಅವರು, ಹೈದರಾಬಾದ್‌ನಿಂದ ವಿಮಾನದಲ್ಲಿ ಮೈಸೂರಿಗೆ ಬಂದಿದ್ದಾಗಿ ಆಕೆ ಹೇಳಿದ್ದಾರೆ ಎಂದರು. ವಿಷಯ ತಿಳಿಯುತ್ತಿದ್ದಂತೆಯೇ ಸೋಂಕಿತ ವಿದ್ಯಾರ್ಥಿನಿಯನ್ನು ಮಾನಸ ಗಂಗೋತ್ರಿಯ ಮಹಿಳಾ ಹಾಸ್ಟೆಲ್‌ನಿಂದ ಬೇರ್ಪಡಿಸಿ ಮೈಸೂ ರಿನ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಆಕೆಯ ಆರೋಗ್ಯದ ಮೇಲೆ ತೀವ್ರ ನಿಗಾ ವಹಿಸಿ ಸೋಂಕು ಇತರರಿಗೆ ಹರಡದಂತೆ ಎಚ್ಚರ ವಹಿಸಲಾ ಗಿದೆ ಎಂದು ಅವರು ತಿಳಿಸಿದರು. ಆಕೆ ವಾಸ್ತವ್ಯ ಹೂಡಿದ್ದ ಹಾಸ್ಟೆಲ್‌ನ ಇತರ ವಿದ್ಯಾರ್ಥಿನಿಯರಿಗೂ
ಆರ್‌ಟಿ-ಪಿಸಿಆರ್ ಟೆಸ್ಟ್ ಮಾಡಿಸಲಾಗುತ್ತಿದೆ. ಆದರೆ ಈವರೆಗೆ ಹಾಸ್ಟೆಲ್ ನಿವಾಸಿಗಳ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸ ಕಂಡುಬAದಿಲ್ಲವಾದರೂ, ತೀವ್ರ ಕಟ್ಟೆಚ್ಚರ ವಹಿಸಿರು ವುದಾಗಿಯೂ ಅವರು ತಿಳಿಸಿದ್ದಾರೆ. ಇದರಿಂದ ಮೈಸೂರಿನಲ್ಲಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ೨ಕ್ಕೇರಿದಂತಾಗಿದ್ದು, ಡಿ.೧೯ರಂದು ಸ್ವಿಡ್ಜರ್‌ಲ್ಯಾಂಡ್‌ನಿAದ ಪೋಷಕರೊಂದಿಗೆ ಬಂದಿದ್ದ ೯ ವರ್ಷದ ಬಾಲಕಿಗೆ ಒಮಿಕ್ರಾನ್ ಸೋಂಕು ತಗುಲಿರುವುದು ದೃಢಪಟ್ಟಿತ್ತು.

ರೋಗ ಲಕ್ಷಣಗಳೇನೂ ಇರದ ಕಾರಣ, ಬಾಲಕಿಯನ್ನು ಪ್ರತ್ಯೇಕವಾಗಿರಿಸಲಾಗಿದ್ದು, ಈವರೆಗೆ ಆರೋಗ್ಯದಲ್ಲಿ ವ್ಯತ್ಯಾಸವಾಗಿಲ್ಲ ಎಂದು ಡಾ. ಪ್ರಸಾದ್ ಅವರು ತಿಳಿಸಿದ್ದಾರೆ.
ಒಮಿಕ್ರಾನ್ ಹಾಟ್‌ಸ್ಪಾಟ್!: ತಾಂಜೇನಿಯಾದಿAದ ಬಂದಿರುವ ವಿದ್ಯಾರ್ಥಿನಿಗೆ ಒಮಿಕ್ರಾನ್ ತಗುಲಿರುವುದು, ಮಾನಸ ಗಂಗೋತ್ರಿಯ ಮಹಿಳಾ ವಿದ್ಯಾರ್ಥಿ ನಿಲಯವು ಒಮಿಕ್ರಾನ್ ಹಾಟ್‌ಸ್ಪಾಟ್ ಆಗುವ ಆತಂಕ ಎದುರಾಗಿದೆ. ಹಾಸ್ಟೆಲ್‌ನಲ್ಲಿ ನೂರಾರು ವಿದ್ಯಾರ್ಥಿನಿಯರು ವಾಸ್ತವ್ಯ ಹೂಡಿದ್ದು, ಅಲ್ಲಿಯೇ ತಾಂಜೇನಿಯಾ ವಿದ್ಯಾರ್ಥಿನಿಯೂ ಉಳಿದುಕೊಂಡಿದ್ದರಿAದ ಒಮಿಕ್ರಾನ್ ಸೋಂಕು ಹರಡಿರುವ ಸಾಧ್ಯತೆ ಹೆಚ್ಚಾಗಿರುವುದ ರಿಂದ ಅಲ್ಲಿ ಆತಂಕ ಎದುರಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣ ಸಿದ್ದು, ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮ ವಹಿಸುತ್ತಿದ್ದರೆ, ಮೈಸೂರು ವಿಶ್ವವಿದ್ಯಾನಿಲಯದ ಅಧಿಕಾರಿಗಳು ವಿದ್ಯಾರ್ಥಿನಿಯರಿಗೆ ಧೈರ್ಯ ಹೇಳಿ ವಿಶ್ವಾಸ ಮೂಡಿಸಲೆತ್ನಿಸುತ್ತಿದ್ದಾರೆ.

Translate »