ರಾತ್ರಿ ೧೦ ಗಂಟೆ ನಂತರ ವಾಣ ಜ್ಯ ವಹಿವಾಟು, ಹೋಟೆಲ್, ಬಾರ್, ರೆಸ್ಟೋರೆಂಟ್, ಸಿನಿಮಾ ಪ್ರದರ್ಶನ, ಮಾಲ್, ಕ್ಲಬ್, ಪಬ್‌ಗಳು ಬಂದ್
ಪ್ರಮುಖ ಸರ್ಕಲ್, ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಕೆ, ಅನಗತ್ಯವಾಗಿ ಓಡಾಡುವವರ ವಿರುದ್ಧ ಪೊಲೀಸರ ಕ್ರಮ
ಆಂಬುಲೆನ್ಸ್, ಹಾಲಿನ ವಾಹನ, ಮನೆ ಮನೆಗೆ ಆಹಾರ ಪೂರೈಸುವವರಿಗಿಲ್ಲ ನಿರ್ಬಂಧ ಮೆಡಿಕಲ್ ಸ್ಟೋರ್, ಆಸ್ಪತ್ರೆ, ವೈದ್ಯಕೀಯ ಹಾಗೂ ತುರ್ತು ಸೇವೆಗಳಿಗೆ ಅವಕಾಶ
ಮೈಸೂರು, ಡಿ. ೨೮(ಆರ್‌ಕೆ)- ಕೊರೊನಾ ೩ನೇ ಅಲೆಗೆ ಕಾರಣವಾಗಬಹುದೆಂದು ಹೇಳ ಲಾಗುತ್ತಿರುವ ರೂಪಾಂತರಿ ಒಮಿಕ್ರಾನ್ ಸೋಂಕಿ ನಿಂದ ಜನರ ಪಾರು ಮಾಡಲೆಂದು `ರಾತ್ರಿ ಕರ್ಫ್ಯೂ’ ನಿರ್ಬಂಧ ವಿಧಿಸಿದ್ದು, ಈ ಸರ್ಕಾರಿ ಆದೇಶವನ್ನು ಮೈಸೂರು ನಗರ ಸೇರಿದಂತೆ ಜಿಲ್ಲೆ ಯಾದ್ಯಂತ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ.
ರಾತ್ರಿ ೧೦ರಿಂದ ಮುಂಜಾನೆ ೫ ಗಂಟೆವರೆಗೆ ಕರ್ಫ್ಯೂ ಜಾರಿಯಲ್ಲಿರುವುದರಿಂದ ಮೊದಲ ದಿನ ವಾದ ಇಂದು ಮೈಸೂರು ನಗರದಲ್ಲಿ ಸ್ಥಳೀಯ ಪೊಲೀಸರು ರಾತ್ರಿ ೯.೩೦ ಗಂಟೆಯಿAದಲೇ ಪಿಸಿಆರ್, ಗರುಡ ವಾಹನಗಳಲ್ಲಿ ಪಬ್ಲಿಕ್ ಅಡ್ರೆಸಿಂಗ್ ಸಿಸ್ಟಂ ಮೂಲಕ ಮೈಕ್‌ನಲ್ಲಿ ಅನೌನ್ಸ್ ಮಾಡಿ ಅಂಗಡಿ-ಮುAಗಟ್ಟುಗಳನ್ನು ಬಂದ್ ಮಾಡುವಂತೆ ಸೂಚಿಸಿದರು.
ಕಾರ್ಯಾಚರಣೆ ಮುಂದುವರಿಸಿದ ಪೊಲೀಸ್ ಸಿಬ್ಬಂದಿ, ರಾತ್ರಿ ೧೦ ಗಂಟೆಯೊಳಗೆ ಅಂಗಡಿ-ಮುAಗಟ್ಟು, ಹೋಟೆಲ್, ಕ್ಲಬ್, ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳು, ಹಣ್ಣು-ತರಕಾರಿ ಅಂಗಡಿ ಸೇರಿದಂತೆ ಎಲ್ಲಾ ಬಗೆಯ ವಾಣ ಜ್ಯ ಮಳಿಗೆಗಳ ಬಾಗಿಲು ಮುಚ್ಚಿಸಿದರು. ಮಾಲ್, ಸಿನಿಮಾ ಮಂದಿರ, ಸೂಪರ್ ಮಾರ್ಕೆಟ್‌ಗಳು, ದೇವರಾಜ, ಮಂಡಿ, ಕೆಆರ್, ಎಪಿಎಂಸಿ ಮಾರು ಕಟ್ಟೆ, ಆರ್‌ಎಂಸಿ, ಹೂ, ತರಕಾರಿ ಮಾರುಕಟ್ಟೆ ಗಳಿಗೂ ತೆರಳಿ ಕರ್ಫ್ಯೂ ಆದೇಶ ಪಾಲಿಸಲು ರಾತ್ರಿ ೧೦ ಗಂಟೆಗೆ ವ್ಯಾಪಾರ ಬಂದ್ ಮಾಡು ವಂತೆ ತಿಳಿ ಹೇಳಿ ಅಂಗಡಿಗಳ ಬಾಗಿಲು ಬಂದ್ ಮಾಡಿಸಿದ ಪೊಲೀಸರು, ನಿಯಮ ಉಲ್ಲಂಘಿಸಿ ದರೆ ವಿಪತ್ತು ನಿರ್ವಹಣಾ ಕಾಯ್ದೆಯನ್ವಯ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ದರು. ದೇವರಾಜ ಅರಸು ರಸ್ತೆ, ಸಯ್ಯಾಜಿರಾವ್ ರಸ್ತೆ, ಅಶೋಕ ರಸ್ತೆ ಸೇರಿದಂತೆಪ್ರಮುಖ ವಾಣ ಜ್ಯ ಕೇಂದ್ರಗಳ ಎಲ್ಲಾ ಅಂಗಡಿಗಳು ಬಂದ್ ಆಗಿದ್ದವು. ೧೦ ಗಂಟೆ ನಂತರವೂ ಸಂಚರಿಸಿದ ಕೆಲ ವಾಹನಗಳನ್ನು ಪೊಲೀಸರು ತಡೆದು ನಿಲ್ಲಿಸಿ, ಯಾವ ಸ್ಥಳದಿಂದ ಎಲ್ಲಿಗೆ ಹೋಗುತ್ತಿದ್ದಾರೆ ಎನ್ನುವುದನ್ನು ವಿಚಾರಿಸಿ, ಕಳುಹಿಸಿದರು. ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅಶ್ವಾರೋಹಿ ಸಿಬ್ಬಂದಿಯೊAದಿಗೆ ಕುದುರೆ ಸವಾರಿ ಮೂಲಕ ಪರಿಸ್ಥಿತಿ ಅವಲೋಕಿಸಿದರು.
ಚೆಕ್‌ಪೋಸ್ಟ್ ಸ್ಥಾಪನೆ: ಮೈಸೂರಿಗೆ ಸಂಪರ್ಕ ಕಲ್ಪಿಸುವ ಮೈಸೂರು-ಬೆಂಗಳೂರು ಹೆದ್ದಾರಿ, ಮಹದೇವಪುರ ರಸ್ತೆ, ಬನ್ನೂರು ರಸ್ತೆ, ತಿ.ನರಸೀಪುರ ರಸ್ತೆ, ನಂಜನಗೂಡು ರಸ್ತೆ, ಹೆಚ್.ಡಿ.ಕೋಟೆ ರಸ್ತೆ, ಬೋಗಾದಿ ರಸ್ತೆ, ಹುಣಸೂರು ರಸ್ತೆ ಹಾಗೂ ಕೆಆರ್‌ಎಸ್ ರಸ್ತೆಗಳೂ ಸೇರಿದಂತೆ ಮೈಸೂರಿನ ವಿವಿಧ ಸರ್ಕಲ್‌ಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ.
ಚೆಕ್‌ಪೋಸ್ಟ್ಗಳಲ್ಲಿ ಎಎಸ್‌ಐ ನೇತೃತ್ವದ ಸಿಬ್ಬಂದಿಗಳು ರಾತ್ರಿ ೧೦ ಗಂಟೆ ನಂತರ ಸಂಚರಿಸುವ ವಾಹನಗಳನ್ನು ಪೊಲೀಸರು ತಪಾಸಣೆ ಮಾಡಿ ಸಕಾರಣವಿಲ್ಲದೆ ಅನಗತ್ಯವಾಗಿ ಓಡಾಡುವವರನ್ನು ತಿಳಿಹೇಳಿ ವಾಪಸ್ ಕಳುಹಿಸುತ್ತಿದ್ದಾರೆ. ಕಚೇರಿ, ಕೈಗಾರಿಕೆಗಳ ಸಿಬ್ಬಂದಿಗಳು ಅಧಿಕೃತ ಗುರುತಿನ ಚೀಟಿ ತೋರಿಸಿ ಹೋಗುತ್ತಿದ್ದುದು ಕಂಡುಬAದಿತು.
ನಿರ್ಬAಧವಿಲ್ಲ: ಹಾಲಿನ ವಾಹನ, ಆಂಬುಲನ್ಸ್, ವೈದ್ಯರು, ಆಸ್ಪತ್ರೆ ಸಿಬ್ಬಂದಿ, ಆನ್‌ಲೈನ್ ಮೂಲಕ ಬುಕ್ ಮಾಡಿದ ಗ್ರಾಹಕರಿಗೆ ಮನೆ ಮನೆಗೆ ಆಹಾರ ಪೂರೈಸುವ ಸಂಸ್ಥೆಗಳ ವಾಹನಗಳ ಸಂಚಾರಕ್ಕೆ ನಿರ್ಬಂಧವಿಲ್ಲ. ಆದರೆ, ಸಂಬAಧಪಟ್ಟ ಗುರುತಿನ ಚೀಟಿ ಹಾಗೂ ದಾಖಲೆಗಳನ್ನು ಪರಿಶೀಲಿಸಿ ಸಂಚಾರಕ್ಕೆ ಪೊಲೀಸರು ಅವಕಾಶ ನೀಡುತ್ತಿದ್ದಾರೆ.
ರಾತ್ರಿ ತಡವಾಗಿ ರೈಲು, ಬಸ್ಸಿನಲ್ಲಿ ಬಂದು ಮನೆಗೆ ಹಿಂದಿರುಗುವವರು ತಾವು ಪ್ರಯಾಣದ ಟಿಕೆಟ್ ತೋರಿಸಬೇಕು, ನ್ಯೂಸ್ ಪೇಪರ್ ಕೊಂಡೊಯ್ಯುವ ವಾಹನಗಳಿಗೂ ಸಹ ಸಂಬAಧಿಸಿದ ಸಂಸ್ಥೆಗಳಿAದ ನೀಡಿರುವ ದಾಖಲೆ ಪರಿಶೀಲಿಸಿ ಪೊಲೀಸರು ಸಂಚಾರಕ್ಕೆ ಅವಕಾಶ ನೀಡುತ್ತಿದ್ದಾರೆ.
ಮದ್ಯ ಖರೀದಿ ಜೋರು: ರಾತ್ರಿ ೧೦ ಗಂಟೆ ನಂತರ ಬಂದ್ ಆಗುವುದರಿಂದ ಇಂದು ಸಂಜೆಯಿAದಲೇ ಮೈಸೂರು ನಗರದಾದ್ಯಂತ ಎಲ್ಲಾ ವೈನ್‌ಸ್ಟೋರ್, ಟ್ರೂ ಸ್ಪಿರಿಟ್ ಮಳಿಗೆಗಳು, ಎಂಎಸ್‌ಐಎಲ್ ಮಳಿಗೆಗಳಲ್ಲಿ ಮದ್ಯ ಖರೀದಿಗೆ ಜನರು ಮುಗಿಬೀಳುತ್ತಿದ್ದರು. ಬಾಗಿಲು ಮುಚ್ಚುವ ಸಮಯದಲ್ಲಂತೂ ಮದ್ಯಪ್ರಿಯರು ಆತುರಾತುರವಾಗಿ ಮುಗಿಬಿದ್ದು ಮದ್ಯ ಖರೀದಿಸುತ್ತಿದ್ದುದು ಕಂಡುಬAತು.
ಸಿನೆಮಾ ಮಂದಿರಗಳಲ್ಲಿ ಬೆಳಗ್ಗೆಯಿಂದಲೇ ಎಲ್ಲಾ ಚಿತ್ರಪ್ರದರ್ಶನಗಳನ್ನು ಅರ್ಧ ಗಂಟೆ ಮುಂಚಿತವಾಗಿ ಆರಂಭಿಸಿ ರಾತ್ರಿ ೯.೩೦ ಗಂಟೆಯೊಳಗೆ ಮುಕ್ತಾಯಗೊಳಿಸಿದರಾದರೂ, ಕಡೇ ಪ್ರದರ್ಶನಕ್ಕೆ ಕಡಿಮೆ ಪ್ರೇಕ್ಷಕರು ಬಂದಿದ್ದರು.
ಇಡೀ ರಾತ್ರಿ ಪರಿಶೀಲನೆ: ನಗರದಾದ್ಯಂತ ಭಾರೀ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್, ಕ್ಲಬ್‌ಗಳಲ್ಲಿ ಪೊಲೀಸರು ರಾತ್ರಿಯಿಡೀ ಪರಿಶೀಲನೆ ಮುಂದುವರೆಸುತ್ತಿದ್ದರು. ಕರ್ಫ್ಯೂ ಆದೇಶವನ್ನು ಪರಿಣಾಮಕಾರಿಯಾಗಿ ಜಾರಿ ಮಾಡಲು ರಾತ್ರಿ ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಎಸಿಪಿ ಹಂತದ ಪೊಲೀಸ್ ಅಧಿಕಾರಿಗಳು ತಮ್ಮ ಉಪವಿಭಾಗದ ವ್ಯಾಪ್ತಿಯಲ್ಲಿ ಸಂಚರಿಸಿ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
ರಾಜ್ಯಾದ್ಯಂತ ನೈಟ್ ಕರ್ಫ್ಯೂ ಶುರು
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಹಾಗೂ ಒಮಿಕ್ರಾನ್ ತಡೆಗಟ್ಟುವ ನಿಟ್ಟಿನಲ್ಲಿ ಇಂದಿನಿAದ ಬೆಂಗಳೂರು ಸೇರಿ ದಂತೆ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿ ಗೊಳಿಸಲಾಗಿದೆ. ಬೆಂಗಳೂರು ಸೇರಿದಂತೆ ಬಹುತೇಕ ಕಡೆ ಪೊಲೀಸ್ ಕಾರ್ಯಾಚರ ಣೆಗೆ ಇಳಿದಿದ್ದು, ನಿಯಮಗಳನ್ನು ಜಾರಿ ಮಾಡಲು ಶ್ರಮಿಸುತ್ತಿದ್ದಾರೆ. ಇನ್ನು ನೈಟ್ ಕರ್ಫ್ಯೂ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಕಬ್ಬನ್ ಪಾರ್ಕ್ ಪೊಲೀಸರು ರಾತ್ರಿ ೧೦ ಗಂಟೆ ನಂತರ ಚರ್ಚ್ ಸ್ಟಿçÃಟ್ ರಸ್ತೆಯಲ್ಲಿ ಹೋಟೆಲ್ ಪಬ್‌ಗಳನ್ನು ಮುಚ್ಚಿಸುತ್ತಿರುವ ದೃಶ್ಯ ಕಂಡುಬAತು.
ಎಚ್ಚರ ತಪ್ಪಿದರೆ ಪ್ರಕರಣ ದಾಖಲು: ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾ ಚರಣೆಗೆ ನಿರ್ಬಂಧ ಹೇರಲಾಗಿದ್ದು, ಇದೇ ೨೮ರಿಂದ ೨೦೨೨ರ ಜನವರಿ ೭ರವರೆಗೆ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ನಿಷೇಧಾಜ್ಞೆ ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ ಎಂದು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಎಚ್ಚರಿಸಿದ್ದಾರೆ. `ಸರ್ಕಾರದ ಆದೇಶದಂತೆಯೇ ಪ್ರತಿದಿನ ರಾತ್ರಿ ೧೦ ರಿಂದ ಬೆಳಗ್ಗೆ ೫ ಗಂಟೆವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಆಸ್ಪತ್ರೆ ಸೇರಿದಂತೆ ಇತರೆ ತುರ್ತು ಕಾರ್ಯಗಳಿಗಾಗಿ ಮನೆಯಿಂದ ಹೊರ ಬರುವವರು ಗಸ್ತಿನಲ್ಲಿರುವ ಪೊಲೀಸರಿಗೆ ಸೂಕ್ತ ದಾಖಲೆಗಳನ್ನು ಒದಗಿಸಬೇಕು. ಕಚೇರಿ ಕೆಲಸ ಮುಗಿಸಿಕೊಂಡು ಮನೆಗೆ ಮರಳುವವರೂ ಗುರುತಿನ ಚೀಟಿ ಹೊಂದಿರಬೇಕು. ಬಸ್, ರೈಲು ಹಾಗೂ ವಿಮಾನಗಳಮೂಲಕ ನಗರದಿಂದ ಬೇರೆ ಊರುಗಳಿಗೆ ಹೋಗುವವರು ಕೂಡ ಅಗತ್ಯ ದಾಖಲೆಗಳನ್ನು ಒದಗಿಸಬೇಕು. ಸೂಕ್ತ ದಾಖಲೆಗಳನ್ನು ನೀಡದಿದ್ದರೆ ಸೆಕ್ಷನ್ ೧೮೮ರ ಅಡಿಯಲ್ಲಿ ಪ್ರಕರಣ ದಾಖಲಿಸುವುದು ಅನಿವಾರ್ಯ’ ಎಂದು ಸೋಮವಾರ ಇಲ್ಲಿ ಹೇಳಿದ್ದಾರೆ.
`ಪಬ್, ಹೋಟೆಲ್ ಹಾಗೂ ಬಾರ್ ಅಂಡ್ ರೆಸ್ಟೋರೆಂಟ್‌ಗಳಲ್ಲಿ ಒಟ್ಟು ಆಸನ ಸಾಮರ್ಥ್ಯದ ಶೇ ೫೦ರಷ್ಟು ಮಂದಿಗೆ ಅವಕಾಶವಿದೆ. ಅಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ. ನಿಯಮ ಉಲ್ಲಂಘಿಸುವ ಪಬ್, ರೆಸ್ಟೋರೆಂಟ್ ಹಾಗೂ ಹೋಟೆಲ್‌ಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ’ ಎಂದಿದ್ದಾರೆ.
`ಎA.ಜಿ.ರಸ್ತೆ, ಕೋರಮಂಗಲ, ಇಂದಿರಾನಗರದಲ್ಲಿ ಹೊಸವರ್ಷ ಸಂಭ್ರಮಾಚರಣೆಗೆ ಅವಕಾಶ ಇರುವುದಿಲ್ಲ. ಈ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳನ್ನೂ ಬಂದ್ ಮಾಡಲಾಗುತ್ತದೆ. ಜೊತೆಗೆ ಎಲ್ಲೆಡೆಯೂ ಈಗಾಗಲೇ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗುತ್ತದೆ. ಈ ರಸ್ತೆಗಳಲ್ಲಿ ಸಂಚರಿಸುವವರನ್ನೆಲ್ಲಾ ಪೊಲೀಸರು ತಪಾಸಣೆ ನಡೆಸಲಿದ್ದಾರೆ’ ಎಂದು ಹೇಳಿದ್ದಾರೆ.