ಸಾಹಿತ್ಯದ ಮೂಲಕ ಅನ್ಯಾಯಗಳ ವಿರುದ್ಧ ದನಿ ಎತ್ತಿದ ಕುವೆಂಪು
ಮೈಸೂರು

ಸಾಹಿತ್ಯದ ಮೂಲಕ ಅನ್ಯಾಯಗಳ ವಿರುದ್ಧ ದನಿ ಎತ್ತಿದ ಕುವೆಂಪು

December 30, 2021

ಮೈಸೂರು, ಡಿ.29(ಆರ್‍ಕೆಬಿ)- ಅನ್ಯಾಯಗಳನ್ನು ಕಣ್ಣಾರೆ ಕಂಡು ಅದಕ್ಕೆ ಧ್ವನಿಯಾಗಿ ಸಾಹಿತ್ಯ ರಚಿ ಸುವ ಮೂಲಕ ಸಮಾಜ ಕಟ್ಟುವ ಕೆಲಸ ಮಾಡಿದ ವರು ಕುವೆಂಪು ಎಂದು ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ತಿಳಿಸಿದರು.

ರಾಷ್ಟ್ರಕವಿ ಕುವೆಂಪು ಜನ್ಮದಿನದ ಅಂಗವಾಗಿ ಬುಧವಾರ ಮೈಸೂರು ವಿವಿ ನೌಕರರ ವೇದಿಕೆ ಬುಧವಾರ ಮೈಸೂರು ವಿವಿ ಸಂಜೆ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾ ಡಿದರು. ಕುವೆಂಪು ಅವರಿಂದ ಸಾಹಿತ್ಯ ಉಳಿದು, ಬೆಳೆಯುತ್ತಾ ಬಂದಿದೆ. ಅವರ ಪ್ರಸಿದ್ಧಿಗೆ ವೈಚಾರಿಕ ಹಾಗೂ ಸೈದ್ಧಾಂತಿಕ ಸಾಹಿತ್ಯ ಕಾರಣ ಎಂದರು.

ಕುವೆಂಪು ಅವರ ಸಾಹಿತ್ಯದ ಬಗ್ಗೆ ಸರಿಯಾದ ವಿಮರ್ಶೆಯಾಗಿಲ್ಲ ಎಂಬ ಕೊರಗು ಅವರ ಪುತ್ರರೂ ಆದ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರನ್ನು ಕಾಡುತ್ತಿತ್ತು. ಆದ್ದರಿಂದ ಮೈಸೂರು ವಿವಿಯು ಕುವೆಂಪು ಅವರ ಸಾಹಿತ್ಯ ಕುರಿತು ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ನಡೆಸುವ ಮೂಲಕ ಜನರಿಗೆ ತಿಳಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ಕುವೆಂಪು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಮೈವಿವಿ ಕುಲಸಚಿವ ಪೆÇ್ರ.ಆರ್.ಶಿವಪ್ಪ ಮಾತನಾಡಿ, ಕುವೆಂಪು ಕನ್ನಡದ ಶ್ರೇಷ್ಠ ಸಾಹಿತಿ. ಅವರ ಕಾನೂರು ಸುಬ್ಬಮ್ಮ ಹೆಗ್ಗಡತಿ ಮತ್ತು ಮಲೆಗಳಲ್ಲಿ ಮದುಮಗಳು ಕಾದಂಬರಿಗಳು ಬಹು ದೊಡ್ಡ ಕೊಡುಗೆ. ನುಡಿದಂತೆ ನಡೆಯುತ್ತಿದ್ದ ಕುವೆಂಪು ಅವರನ್ನು ನೋಡುವುದೇ ಒಂದು ರೀತಿಯ ಆನಂದವನ್ನುಂಟು ಮಾಡುತ್ತಿತ್ತು. ಆ ರೀತಿಯ ವ್ಯಕ್ತಿತ್ವ ಅವರದ್ದಾಗಿತ್ತು ಎಂದರು. ಕಾಂಗ್ರೆಸ್ ಮುಖಂಡ ಕೆ.ಹರೀಶ್‍ಗೌಡ ಮಾತನಾಡಿ, ಕುವೆಂಪು ಅವರ ‘ಓ ನನ್ನ ಚೇತನ… ಆಗು ನೀ ಅನಿಕೇತನ…’ ವಿಶ್ವಮಾನವ ಸಂದೇಶವನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳ ಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮೈಸೂರು ವಿವಿ ಪರೀಕ್ಷಾ ವಿಭಾಗದ ಸಹಾಯಕ ಕುಲಸಚಿವ ಪಿ.ಡಿ.ಮಾದೇ ಗೌಡ, ಆಡಳಿತ ವಿಭಾಗದ ಅಧೀಕ್ಷಕ ರೂಪೇಶ್, ಶ್ರೀಹರ್ಷ, ಮಹಾರಾಜ ಕಾಲೇಜು ಅಧೀಕ್ಷಕ ಮೆರವಣ್ಣ, ತೋಟಗಾರಿಕೆ ಉಪ ಅಧೀಕ್ಷಕ ಚೆಲು ವೇಶ್, ಪಿಂಚಣಿ ವಿಭಾಗದ ಅಧೀಕ್ಷಕ ಸುರೇಶ್, ಸ್ನಾತಕ ಗ್ರಂಥಾಲಯದ ಪ್ರಸಾದ್, ಕÀುಲಪತಿಗಳ ಆಪ್ತ ಸಹಾಯಕÀ ಮೋಹನ್‍ದಾಸ್, ಕೃಷ್ಣ, ಪರೀಕ್ಷಾಂಗ ಕುಲಸಚಿವರ ಆಪ್ತ ಸಹಾಯಕ ಪ್ರಭಾಕರ್, ಮೈಸೂರು ಜಿಲ್ಲಾ ಪ.ಜಾತಿ ಮತ್ತು ವರ್ಗದ ನೌಕರರ ಸಂಘದ ಅಧ್ಯಕ್ಷರಾಗಿ ನೇಮಕ ವಾಗಿರುವ ಡಾ.ಸಿದ್ದರಾಜು ಅವರನ್ನು ಸನ್ಮಾನಿಸ ಲಾಯಿತು. ಸಂಜೆ ಕಾಲೇಜು ಪ್ರಾಂಶುಪಾಲ ಡಾ.ಎಚ್.ಸಿ.ದೇವೇರಾಜೇಗೌಡ ಅಧ್ಯಕ್ಷತೆ ವಹಿಸಿ ದ್ದರು. ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ವೇದಿಕೆಯ ಅಧ್ಯಕ್ಷ ಆರ್.ವಾಸುದೇವ, ಉಪನ್ಯಾಸಕಿ ಬಿ.ಎಸ್. ದಿನಮಣಿ,. ಪ್ರಾಧ್ಯಾಪಕ ವಿ.ಆರ್.ರಮೇಶ್ ಬಾಬು, ವೇದಿಕೆಯ ಪದಾಧಿಕಾರಿಗಳಾದ ಭಾಸ್ಕರ್, ಯೋಗೇಶ್, ಭರತ್‍ರಾಜ್, ಸತ್ಯಮೂರ್ತಿ, ವಿವೇಕ್, ಶಿವಕುಮಾರ್, ಗಣೇಶ್ ಇನ್ನಿತರರು ಉಪಸ್ಥಿತರಿದ್ದರು.

Translate »