ಪ್ರಧಾನಿ ಮೋದಿ ಭೇಟಿಗೆ ಏ.೨೯ಕ್ಕೆ ಸಿಎಂ ಬೊಮ್ಮಾಯಿ ದೆಹಲಿ ಯಾತ್ರೆ
ಮೈಸೂರು

ಪ್ರಧಾನಿ ಮೋದಿ ಭೇಟಿಗೆ ಏ.೨೯ಕ್ಕೆ ಸಿಎಂ ಬೊಮ್ಮಾಯಿ ದೆಹಲಿ ಯಾತ್ರೆ

April 27, 2022

ಏ.೩೦ಕ್ಕೆ ಪ್ರಧಾನಿಯಾಗಿ ನರೇಂದ್ರ ಮೋದಿ ೩ ವರ್ಷ ಪೂರೈಸಲಿದ್ದಾರೆ; ಈ ವೇಳೆ ಸಿಎಂಗಳೊAದಿಗೆ ಸಂವಾದ

ಬೆAಗಳೂರು, ಏ.೨೬(ಕೆಎಂಶಿ)-ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದೇ ೨೯ರಂದು ದೆಹಲಿಗೆ ತೆರಳಲಿದ್ದಾರೆ. ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡು ಏ.೩೦ಕ್ಕೆ ೩ ವರ್ಷ ತುಂಬಲಿದ್ದು, ಈ ವೇಳೆ ಮುಖ್ಯಮಂತ್ರಿಗಳ ಜತೆ ನೇರ ಸಂವಾದ ನಡೆಸಲಿದ್ದಾರೆ. ಈ ಸಂವಾದದಲ್ಲಿ ಭಾಗವಹಿಸಲೆಂದೇ ಬೊಮ್ಮಾಯಿ ಅವರು, ೨ ದಿನಗಳ ದೆಹಲಿ ಪ್ರವಾಸ ಕೈಗೊಳ್ಳುತ್ತಿದ್ದು, ಸಂವಾದ ಕಾರ್ಯಕ್ರಮ ಮುಗಿದ ಬಳಿಕ ಪ್ರಧಾನಿ ಭೇಟಿಗೆ ಸಮಯಾವಕಾಶ ಕೋರಿದ್ದಾರೆ.

ಇದುವರೆಗೂ ಮುಖಾಮುಖಿ ಭೇಟಿಗೆ ಸಮಯ ನಿಗದಿಯಾಗಿಲ್ಲ. ಅಂದು ಪ್ರಧಾನಿ ಭೇಟಿಯಾಗಬೇಕೆಂದು ರಾಜ್ಯ ಪ್ರತಿನಿಧಿಸುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಬೆನ್ನತ್ತಿದ್ದಾರೆ. ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಪಕ್ಷ ಮತ್ತು ಸರ್ಕಾರದ ವರ್ಚಸ್ಸು ವೃದ್ಧಿಸಲು ದೆಹಲಿ ನಾಯಕರು ಹಲವು ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರದಲ್ಲಿ ರುವುದು ಕರ್ನಾಟಕದಲ್ಲಿ ಮಾತ್ರ. ಯಾವುದೇ ಕಾರಣಕ್ಕೂ ಅಧಿಕಾರವನ್ನು ಕಳೆದುಕೊಳ್ಳಬಾರದೆಂದು ದೃಢ ನಿಲುವು ಹೊಂದಿರುವ ವರಿಷ್ಠರು, ಆಡಳಿತ ಮತ್ತು ಪಕ್ಷದಲ್ಲಿ ಬದಲಾವಣೆಗೂ ಮುಂದಾಗಿದ್ದಾರೆ. ಕಳೆದ ವಾರ ದೆಹಲಿಯಲ್ಲಿ ಗೃಹ ಸಚಿವ ಅಮಿತ್ ಷಾ, ಬಿಜೆಪಿ ರಾಷ್ಟಿçÃಯ ಅಧ್ಯಕ್ಷ ಜೆ.ಪಿ. ನಡ್ಡಾ, ಆರ್‌ಎಸ್‌ಎಸ್ ಮುಖಂಡರೊAದಿಗೆ ಕರ್ನಾಟಕಕ್ಕೆ ಸೀಮಿತವಾಗಿ ಚರ್ಚೆ ಮಾಡಿದ್ದಾರೆ.

ಚರ್ಚೆಯ ಸಂದರ್ಭದಲ್ಲಿ ಇಲ್ಲಿನ ಪಕ್ಷ ಮತ್ತು ಸರ್ಕಾರದ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತವಾಯಿತಲ್ಲದೆ, ಪರ್ಯಾಯ ನಾಯಕತ್ವದಲ್ಲಿ ಚುನಾವಣೆ ಎದುರಿಸುವ ತೀರ್ಮಾನಕ್ಕೆ ಬಂದಿತ್ತಾದರೂ, ಅಂಥ ತೀರ್ಮಾನವನ್ನು ಪ್ರಧಾನಿಯೇ ಕೈಗೊಳ್ಳಲಿ ಎಂದು ಚೆಂಡನ್ನು ಮೋದಿ ಅಂಗಳಕ್ಕೆ ಹಾಕಿದ್ದಾರೆ.

ಆದರೆ, ಪ್ರಧಾನಿ ಅವರು ಇದುವರೆಗೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಕರ್ನಾ ಟಕದ ಬಿಜೆಪಿಯಲ್ಲಿ ಮಾತ್ರ ಉಹಾಪೋಹಗಳು ಹರಿದಾಡುತ್ತಿವೆ. ಇದಕ್ಕೆ ಇತಿಶ್ರೀ ಹಾಡಲೆಂದೇ ಮುಖ್ಯಮಂತ್ರಿ ಅವರೇ ಸ್ವತಃ ಪ್ರಧಾನಿ ಭೇಟಿಗೆ ಆಸಕ್ತಿ ತೋರಿದ್ದಾರೆ.

ಏ.೩೦ರಂದು ಮೋದಿ ಅವರು ಸಮಯ ನೀಡಿದರೆ, ಭೇಟಿಯಾದರೆ, ರಾಜ್ಯ ರಾಜಕೀಯ ಮತ್ತು ತಮ್ಮ ೮ ತಿಂಗಳ ಆಡಳಿತಾವಧಿಯ ಅಭಿವೃದ್ಧಿ ಮತ್ತು ಪಕ್ಷದ ಜತೆಗಿರುವ ಸಂಬAಧದ ಬಗ್ಗೆ ಮನವರಿಕೆ ಮಾಡಿಕೊಟ್ಟು, ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಸಂಪುಟದಲ್ಲಿ ಕೆಲ ಬದಲಾವಣೆ ತರಲು ಅವಕಾಶ ಮಾಡಿಕೊಡುವಂತೆ ಕೋರಲಿದ್ದಾ ರೆಂದು ಅವರ ಆಪ್ತ ಮೂಲಗಳು ತಿಳಿಸಿವೆ. ಆ ನಂತರ ಪ್ರಧಾನಿ ಅವರು ಪಕ್ಷ ಮತ್ತು ಸಂಘ ತೆಗೆದುಕೊಂಡಿರುವ ತೀರ್ಮಾನಕ್ಕೆ ಸಮ್ಮತಿ ನೀಡುತ್ತಾರೋ ಅಥವಾ ಬೊಮ್ಮಾಯಿ ಅವರ ಕೋರಿಕೆಗೆ ಮನ್ನಣೆ ನೀಡುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.

ದೆಹಲಿ ಪ್ರವಾಸ ನಿಗದಿಯಾಗುತ್ತಿದ್ದಂತೆ ತಾವು ಮಾರ್ಚ್ನಲ್ಲಿ ಮಂಡಿಸಿರುವ ಮುಂಗಡ ಪತ್ರದಲ್ಲಿ ಪ್ರಕಟಿಸಿರುವ ಯೋಜನೆಗಳನ್ನು ಮೇ ೧೫ರೊಳಗೆ ಕಾರ್ಯಾದೇಶ ಹೊರಡಿಸಬೇಕೆಂದು ಸಂಬAಧಪಟ್ಟ ಇಲಾಖಾ ಮುಖ್ಯಸ್ಥರಿಗೆ ಆದೇಶ ನೀಡಿದ್ದಾರೆ. ಈ ಆದೇಶ ರಾಜಕೀಯ ವಲಯದಲ್ಲಿ ನಾನಾ ವ್ಯಾಖ್ಯಾನಗಳಿಗೆ ಎಡೆಮಾಡಿಕೊಟ್ಟಿದೆ.

Translate »