೬-೧೨ ವರ್ಷದ ಮಕ್ಕಳಿಗೆ ಕೋವ್ಯಾಕ್ಸಿನ್ ೫-೧೨ ವರ್ಷದ ಮಕ್ಕಳಿಗೆ ಕಾರ್ಬೆವಾಕ್ಸ್ ಲಸಿಕೆ
ಮೈಸೂರು

೬-೧೨ ವರ್ಷದ ಮಕ್ಕಳಿಗೆ ಕೋವ್ಯಾಕ್ಸಿನ್ ೫-೧೨ ವರ್ಷದ ಮಕ್ಕಳಿಗೆ ಕಾರ್ಬೆವಾಕ್ಸ್ ಲಸಿಕೆ

April 27, 2022

ನವದೆಹಲಿ: ದೇಶದಲ್ಲಿ ಕೋವಿಡ್ ಸಾಂಕ್ರಾಮಿಕ ೪ನೇ ಅಲೆಯ ಭೀತಿ ವ್ಯಾಪಕವಾಗಿರುವಂತೆಯೇ ಇತ್ತ ೬ ರಿಂದ ೧೨ ವರ್ಷದ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಿಕೆಗೆ ಕೇಂದ್ರ ಔಷಧ ನಿಯಂತ್ರಣ ಮಂಡಳಿ (ಡಿಸಿ ಜಿಐ) ಅನುಮೋದನೆ ನೀಡಿದೆ.

ಕಳೆದ ಕೆಲವು ತಿಂಗಳಗಳಿAದಲೇ ೬ರಿಂದ ೧೨ ವರ್ಷದ ಮಕ್ಕಳಿಗೆ ತನ್ನ ಕೋವ್ಯಾಕ್ಸಿನ್ ಲಸಿಕೆ ನೀಡಿಕೆಗೆ ಅನು ಮೋದನೆ ಪಡೆಯಲು ಭಾರತ್ ಬಯೋ ಟೆಕ್ ಸಂಸ್ಥೆ ಪ್ರಯತ್ನಿಸುತ್ತಿತ್ತು. ಆದರೆ ಈ ಕುರಿತ ಸೂಕ್ತ ವರದಿ ಇಲ್ಲದೆ ತಾನು ಅನುಮೋದನೆ ನೀಡಲು ಸಾಧ್ಯವಿಲ್ಲ ಎಂದು ಹೇಳುತ್ತಿತ್ತು. ಆದರೆ ಇದೀಗ ಡಿಸಿಜಿಐ ಕೋವ್ಯಾಕ್ಸಿನ್ ಲಸಿಕೆಯನ್ನು ೬ರಿಂದ ೧೨ ವರ್ಷಗಳ ಮಕ್ಕಳಿಗೆ ನೀಡು ವುದಕ್ಕೆ ಅನುಮೋದನೆ ನೀಡಿದೆ.

ಮೊದಲ ೨ ತಿಂಗಳ ಕಾಲ ಪ್ರತಿ ೧೫ ದಿನಗಳಿಗೊಮ್ಮೆ ಸರಿಯಾದ ವಿಶ್ಲೇಷಣೆ ಯೊಂದಿಗೆ ಪ್ರತಿಕೂಲ ಘಟನೆಗಳ ದತ್ತಾಂಶ ಸೇರಿದಂತೆ ಸುರಕ್ಷತಾ ದತ್ತಾಂಶ ವನ್ನು ಸಲ್ಲಿಸಲು ಲಸಿಕೆ ತಯಾರಕರಿಗೆ ಆಅಉI ಈ ಹಿಂದೆ ನಿರ್ದೇಶನ ನೀಡಿತ್ತು. ಎರಡು ತಿಂಗಳ ನಂತರ, ಭಾರತ್ ಬಯೋಟೆಕ್ ಸಂಸ್ಥೆ
೫ ತಿಂಗಳವರೆಗೆ ಮಾಸಿಕ ದತ್ತಾಂಶ ಸಲ್ಲಿಸಿತ್ತು. ಈ ದತ್ತಾಂಶ ಪರಿಶೀಲನೆ ಬಳಿಕ ಡಿಸಿಜಿಐ ಲಸಿಕೆ ನೀಡಿಕೆಗೆ ಅನುಮೋದನೆ ನೀಡಿದೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ಇದೇ ಸಂದರ್ಭ ದಲ್ಲಿ ಡಿಸಿಜಿಐ ೫-೧೨ ವರ್ಷ ವಯಸ್ಸಿನ ಮಕ್ಕಳಿಗೆ ಕಾರ್ಬೆವಾಕ್ಸ್ಗೆ ತುರ್ತು ಬಳಕೆಯ ಅಧಿಕಾರವನ್ನು ಸಹ ನೀಡಿದ್ದು, ಇದಲ್ಲದೆ ೧೨ ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ Zಥಿಛಿov ಆ (ಜೈಡಸ್ ಕ್ಯಾಡಿಲಾ ಲಸಿಕೆ)ಗೆ ತುರ್ತು ಬಳಕೆಯ ಅಧಿಕಾರವನ್ನು ನೀಡಿದೆ.

೬-೧೨ ವರ್ಷ ವಯಸ್ಸಿನ ಮಕ್ಕಳಿಗೆ ಭಾರತ್ ಬಯೋಟೆಕ್‌ನ ಕೋವಾಕ್ಸಿನ್‌ಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ನಿರ್ಬಂಧಿತ ತುರ್ತು ಬಳಕೆಯ ಅಧಿಕಾರವನ್ನು ನೀಡಿದ್ದು, ಸುರಕ್ಷತಾ ಡೇಟಾವನ್ನು ಸಲ್ಲಿಸುವಂತೆ ಕೇಳಿದೆ. ಪ್ರತಿಕೂಲ ಪರಿಣಾಮಗಳ ದತ್ತಾಂಶವನ್ನು ಒಳಗೊಂಡAತೆ ಸುರಕ್ಷತಾ ದತ್ತಾಂಶವನ್ನು ಸಲ್ಲಿಸಲು ಭಾರತ್ ಬಯೋಟೆಕ್ ಸೂಚಿಸಿದ್ದು, ಮೊದಲ ೨ ತಿಂಗಳು ಪ್ರತಿ ೧೫ ದಿನಗಳಿಗೊಮ್ಮೆ ಮತ್ತು ನಂತರ ೫ ತಿಂಗಳವರೆಗೆ ತಿಂಗಳ ದತ್ತಾಂಶವನ್ನು ನೀಡುವಂತೆ ಹೇಳಿದೆ.

 

Translate »