ಬೆಂಗಳೂರು: ಜಿಕೆವಿಕೆಯಲ್ಲಿ ಕೃಷಿ ಇಲಾಖೆ ಆಯೋಜಿಸಿದ್ದ ಸಮಾರಂಭದಲ್ಲಿ ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ-ಕೃಷಿ ಸಂಜೀವಿನಿಯ ೧೦೦ ವಾಹನಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಕೃಷಿ ಸಚಿವ ಬಿ.ಸಿ.ಪಾಟೀಲ್, ತೋಟಗಾರಿಕೆ ಸಚಿವ ಮುನಿರತ್ನ ಮತ್ತಿತರರು ಉಪಸ್ಥಿತರಿದ್ದರು. ಯಡಿಯೂರಪ್ಪ ಸಿಎಂ ಆಗಿದ್ದಾಗ ಪ್ರಾಯೋಗಿಕವಾಗಿ ೪೦ ಕೃಷಿ ಸಂಜೀವಿನಿ ವಾಹನ ಗಳಿಗೆ ಚಾಲನೆ ನೀಡಲಾಗಿತ್ತು. ಇದೀಗ ರೈತರಿಗೆ ಮತ್ತಷ್ಟು ಸಹಕಾರಿಯಾಗಲು ಎಲ್ಲಾ ಜಿಲ್ಲಾ ಮತ್ತು ತಾಲೂಕು ರೈತ ಸಂಪರ್ಕ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು ೧೦೦ ವಾಹನಗಳನ್ನು ಸಿಎಂ ಲೋಕಾರ್ಪಣೆ ಮಾಡಿದರು. ರೈತರು ಕೃಷಿ ಸಂಜೀವಿನಿ ಸಹಾಯವಾಣ ಸಂಖ್ಯೆ ೧೫೫೩೧೩ ಕರೆ ಮಾಡಿದರೆ, ನೇರವಾಗಿ ರೈತರ ಜಮೀನಿಗೆ ಬಂದು ಪರೀಕ್ಷೆ ಮಾಡುತ್ತದೆ. ಜಮೀನಲ್ಲಿ ಉತ್ಪಾದನೆ ಮತ್ತು ಉತ್ಪಾದಕತೆ ಸವೆತ, ಅತಿಯಾದ ಬೆಳೆ ಬೆಳವಣ ಗೆ, ಕೀಟ, ರೋಗದಂತಹ ನೈಸರ್ಗಿಕ ವಿಪತ್ತುಗಳಿಗೆ ಪರಿಹಾರ ಒದಗಿಸುತ್ತದೆ.
