ಅಧಿಕಾರ ಹಿಡಿಯಲು ಆಪರೇಷನ್ ಕಮಲ ಅನಿವಾರ್ಯ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಘಂಟಾಘೋಷ
ಮೈಸೂರು

ಅಧಿಕಾರ ಹಿಡಿಯಲು ಆಪರೇಷನ್ ಕಮಲ ಅನಿವಾರ್ಯ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಘಂಟಾಘೋಷ

May 9, 2022

ಬೆAಗಳೂರು,ಮೇ ೮-ರಾಜಕೀಯ ಪಕ್ಷ ಅಧಿಕಾರ ಹಿಡಿಯ ಬೇಕಾದರೆ `ಆಪರೇಷನ್ ಕಮಲ’ ಅನಿವಾರ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಸಮರ್ಥಿಸಿಕೊಂಡರು.

ಬಿಜೆಪಿ ಕಚೇರಿಯಲ್ಲಿ ಭಾನುವಾರ ಯುವ ಮೋರ್ಚಾ ಕಾರ್ಯ ಕಾರಿಣ ಸಭೆ ಉದ್ಘಾಟಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಮನ ಭಾರತ ಆಗಲು ಪ್ರತಿ ವ್ಯಕ್ತಿ ರಾಮ ಆಗಬೇಕು. ವ್ಯಕ್ತಿ ನಿರ್ಮಾಣದಿಂದ ರಾಷ್ಟç ನಿರ್ಮಾ ಣದ ಕಾರ್ಯ ಆಗಬೇಕು ಎಂದರು.

ಹಿAದೆ ಆಪರೇಷನ್ ಕಮಲ ಮಾಡಿ ದಾಗ ಬೇರೆ ಪಕ್ಷಗಳಿಂದ ನಿಮ್ಮ ಪಕ್ಷಕ್ಕೆ ಕರೆದುಕೊಂಡು ಬರುವುದೇ ನಿಮ್ಮ ಕೆಲಸನಾ? ಎಂದು ಹಲವರು ಕೇಳಿ ದ್ದಾರೆ. ಆದರೆ ಒಂದು ರಾಜಕೀಯ ಪಕ್ಷ ಅಧಿಕಾರ ಹಿಡಿ ಯಲು ಆಪರೇಷನ್ ಕಮಲ ಅನಿವಾರ್ಯವಾಗಿದೆ. ಅಧಿಕಾರ ಕ್ಕಾಗಿ ಆಪರೇಷನ್ ಕಮಲ ಮಾಡಿರಬಹುದು. ಆದರೆ ನಮ್ಮ ಪಕ್ಷದಲ್ಲಿ ಪಕ್ಷಕ್ಕಾಗಿ ದುಡಿದವರು, ಸಾಮಾನ್ಯ ಕಾರ್ಯಕರ್ತ ನನ್ನು ಶಾಸಕರನ್ನಾಗಿ ಮಾಡುತ್ತೇವೆ. ನಮ್ಮದು ಅಧಿಕಾರಕ್ಕಾಗಿ ಆದರ್ಶ ಅಲ್ಲ. ಕಾಂಗ್ರೆಸ್‌ನಲ್ಲಿ ಈಗಲೂ ಇಂದಿರಾಗಾAಧಿ, ಸೋನಿಯಾಗಾಂಧಿ, ರಾಹುಲ್‌ಗಾಂಧಿಗೆ ಜೈ ಅಂತಾರೆ. ನಾವು ಭಾರತಮಾತೆಗೆ ಜೈಕಾರ ಹಾಕುತ್ತೇವೆ ಎಂದು ಹೇಳಿದರು.

ಸಾಮಾಜಿಕ ಬದ್ಧತೆಯಿದೆ: ಚಹಾ ಮಾರುವ ಹುಡುಗ ಪ್ರಧಾನಿ ಆಗಬಲ್ಲ ಎಂದು ತೋರಿಸಿದ ಪಕ್ಷ ಬಿಜೆಪಿ. ಮತಗಟ್ಟೆ ಅಧ್ಯಕ್ಷರಾಗಿದ್ದ ಅಮಿತ್ ಶಾ ಅವರು ಇವತ್ತು ಕೇಂದ್ರದ ಗೃಹ ಸಚಿವ. ಹಳ್ಳಿಯಿಂದ ಬಂದ ವನೊಬ್ಬ ಸಾಮಾನ್ಯ ಬಿಜೆಪಿಯ ರಾಜ್ಯಾಧ್ಯಕ್ಷ ಆಗು ತ್ತಾನೆ. ಮೂರು ಸಲ ಎಂಪಿ ಆಗುತ್ತಾನೆ. ಇದು ಬಿಜೆಪಿ ಯಲ್ಲಿ ಮಾತ್ರ ಸಾಧ್ಯ. ನಾವು ಪರಿವಾರವಾರದಿಂದ ಬಂದವರಲ್ಲ. ಹಣಬಲದಿಂದ ಬಂದವರಲ್ಲ. ರಾಷ್ಟçಭಕ್ತಿ, ಸಾಮಾಜಿಕ ಬದ್ಧತೆಯಿಂದ ನಾವು ರಾಜಕೀಯಕ್ಕೆ ಬಂದವರು ಎಂದು ನಳೀನ್‌ಕುಮಾರ್ ಕಟೀಲ್ ಕಾಂಗ್ರೆಸ್‌ಗೆ ತಿರುಗೇಟು ಕೊಟ್ಟರು.

ಭ್ರಷ್ಟಾಚಾರ, ಭಯೋತ್ಪಾದನೆ ಕಾಂಗ್ರೆಸ್ ಕೊಡುಗೆ: ಕಾಂಗ್ರೆಸ್‌ನಲ್ಲಿ ಪದಾಧಿಕಾರಿಗಳ ಟೀಂ ಸಾಂವಿಧಾನಿಕವಾಗಿಲ್ಲ. ಕಾಂಗ್ರೆಸ್‌ನಲ್ಲಿ ಅವ್ಯವಸ್ಥೆ ತುಂಬಿದೆ. ಅವರಿಗೆ ಪಕ್ಷ ಕಟ್ಟಲು ಗೊತ್ತಿಲ್ಲ. ಇನ್ನು ನಾಡನ್ನು ಏನು ಕಟ್ತಾರೆ? ಕಾಂಗ್ರೆಸ್‌ನಲ್ಲಿ ೧೫೦ ಪ್ರಧಾನ ಕಾರ್ಯ ದರ್ಶಿ ಇದ್ದಾರೆ. ಅದು ಮುಂದೆ ೨೫೦ ದಾಟುತ್ತೆ. ಪಂಚರಾಜ್ಯಗಳ ಫಲಿತಾಂಶ ಬಳಿಕ ಕಾಂಗ್ರೆಸ್‌ಗೆ ಭಯ ಶುರುವಾಗಿದೆ. ಕಾಂಗ್ರೆಸ್ ದೇಶದಲ್ಲಿ ತಿರಸ್ಕರಿಸಲ್ಪಡುತ್ತಿದೆ. ಅಧಿಕಾರ ದಲ್ಲಿ ಇದ್ದಾಗ ಅವರ ನಡವಳಿಕೆಗಳೇ ಇದಕ್ಕೆ ಕಾರಣ. ಭ್ರಷ್ಟಾಚಾರ, ಭಯೋತ್ಪಾದನೆಗಳೇ ಕಾಂಗ್ರೆಸ್ ಪರಿ ವಾರದ ಕೊಡುಗೆ ಎಂದು ಆರೋಪಿಸಿದರು.

ಕಾಂಗ್ರೆಸ್‌ನಲ್ಲಿ ಲಾಲ್ ಬಹದ್ದೂರ್ ಶಾಸ್ತಿçಗಳನ್ನು ಬಿಟ್ಟರೆ ಉಳಿದ ಎಲ್ಲಾ ಪ್ರಧಾನಿಗಳೂ ಕಳಂಕಿತರು. ವಾಜಪೇಯಿ, ಮೋದಿ ಕಳಂಕರಹಿತ, ಭ್ರಷ್ಟಾಚಾರ ರಹಿತ ಸರ್ಕಾರ ಕೊಟ್ಟವರು. ರಾಜ್ಯದಲ್ಲೂ ಎಲ್ಲಾ ಕಾಂಗ್ರೆಸ್ ಸಿಎಂ ಗಳು ಭ್ರಷ್ಟಾಚಾರಿಗಳು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹ್ಯೂಬ್ಲೋಟ್ ವಾಚ್ ಯಾರು ಕೊಟ್ಟರು? ಅರ್ಕಾವತಿ ರೀಡೂ ಪ್ರಕರಣದ ತನಿಖೆ ಆದರೆ ಸಿದ್ದರಾಮಯ್ಯ ಅವರು ಜೀವನ ಪರ್ಯಂತ ಜೈಲಿನಲ್ಲಿರುತ್ತಾರೆ. ಸಿದ್ದರಾಮಯ್ಯ ಅವರಷ್ಟು ಭ್ರಷ್ಟಾಚಾರಿ ಬೇರ್ಯಾರೂ ಇಲ್ಲ ಎಂದು ಕಟೀಲ್ ಹೇಳಿದರು.

Translate »