ಮೈಸೂರು ಮೃಗಾಲಯದಲ್ಲಿ ಮೂರು ಹುಲಿ ಮರಿ ಜನನ
ಮೈಸೂರು

ಮೈಸೂರು ಮೃಗಾಲಯದಲ್ಲಿ ಮೂರು ಹುಲಿ ಮರಿ ಜನನ

May 10, 2022

ಮೈಸೂರು, ಮೇ ೯(ಎಂಟಿವೈ)- ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಸಂಭ್ರಮ ಮನೆ ಮಾಡಿದೆ. ೯ ವರ್ಷಗಳ ಬಳಿಕ ಮೃಗಾಲಯದಲ್ಲಿ ಬಿಳಿ ಹುಲಿಯೊಂದು ಮೂರು ಮರಿಗಳಿಗೆ ಜನ್ಮ ನೀಡಿದ್ದು, ತಾಯಿ ಹಾಗೂ ಮರಿಗಳು ಆರೋಗ್ಯದಿಂದ ಕೂಡಿರುವುದಾಗಿ ಮೃಗಾಲಯದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಮೈಸೂರು ಮೃಗಾಲಯದ ೮ ವರ್ಷದ ಹೆಣ್ಣು ಹುಲಿ ತಾರಾ ಹಾಗೂ ೪ ವರ್ಷದ ಗಂಡು ಹುಲಿ ರಾಕಿ ಜೋಡಿಗೆ ಮೂರು ಮರಿ ಜನಿಸಿವೆ. ತುಂಬು ಗರ್ಭಿಣ ಯಾಗಿದ್ದ ತಾರಾ ಏ.೨೬ರಂದು ಮೂರು ಮರಿಗಳಿಗೆ ಮೃಗಾಲಯದ ಹುಲಿ ಬೋನಿನಲ್ಲಿ ಜನ್ಮ ನೀಡಿ, ಆರೈಕೆ ಮಾಡುತ್ತಿದೆ. ಗರ್ಭಿಣ ಯಾಗಿದ್ದ ಹುಲಿಯ ಚಲನವಲನ ಹಾಗೂ ಆರೋಗ್ಯದ ಸ್ಥಿತಿಗತಿ ಬಗ್ಗೆ ತಿಳಿಯುವುದಕ್ಕಾಗಿ ಬೋನ್‌ನಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ಏ.೨೬ರಂದು ಮೂರು ಮರಿಗಳಿಗೆ ಜನ್ಮ ನೀಡಿರುವ ತಾರಾ, ಮರಿಗಳಿಗೆ ಸಹಜವಾಗಿ ಹಾಲುಣ ಸುವ ಮೂಲಕ ಆರೈಕೆ ಮಾಡುತ್ತಿದೆ. ಕಳೆದ ಎರಡು ವಾರಗಳಿಂದ ತಾಯಿ ಮತ್ತು ಮರಿಗಳ ಆರೋಗ್ಯವನ್ನು ಸೂಕ್ಷö್ಮವಾಗಿ ಗಮನಿಸಲಾಗುತ್ತಿತ್ತು. ಆರೈಕೆಯಲ್ಲಿ ತಾಯಿ ಹುಲಿಯಿಂದ ಸಹಜ ವರ್ತನೆ ದೃಢಪಟ್ಟ ಹಿನ್ನೆಲೆಯಲ್ಲಿ ಹುಲಿ ಮರಿಗಳ ಜನನವನ್ನು ಮೃಗಾಲಯವು ಬಹಿರಂಗ ಪಡಿಸಿದೆ.

ಈ ಕುರಿತು ಮೈಸೂರು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕಣ ð `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಮೈಸೂರು ಮೃಗಾಲಯದಲ್ಲಿ ೯ ವರ್ಷದ ನಂತರ ಹುಲಿ ಮರಿಗಳ ಜನನವಾಗಿದೆ. ಹುಲಿ ಮರಿಗಳ ಜನನ ಹಾಗೂ ಹುಲಿಗಳ ಸಂರಕ್ಷಣೆಯಲ್ಲಿ ಮೈಸೂರು ಮೃಗಾಲಯ ಮುಂಚೂಣ ಯಲ್ಲಿದೆ. ಆದರೆ, ಕಳೆದ ಕೆಲವು ವರ್ಷಗಳಿಂದ ಹುಲಿಗಳ ಕೂಡುವಿಕೆಗೆ ಅವಕಾಶ ನೀಡಿರಲಿಲ್ಲ. ಇದರಿಂದ ಜನನ ಪ್ರಕ್ರಿಯೆ ನಡೆದಿರಲಿಲ್ಲ. ಆದರೆ ಇದೀಗ ಬೇರೆ ಬೇರೆ ಮೃಗಾಲಯ ಗಳಿಂದ ಹುಲಿಗಳ ಬೇಡಿಕೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ತಾರಾ ಹಾಗೂ ರಾಕಿ ಹುಲಿಗೆ ಜೋಡಿ ಕಟ್ಟಲಾಗಿತ್ತು. ಕೆಲ ವರ್ಷಗಳ ನಂತರ ಈ ಜೋಡಿ ಪರಸ್ಪರ ಒಂದುಗೂಡಿದ್ದವು. ಇದೀಗ ಮೂರು ಮರಿಗಳು ಜನಿಸಿವೆ. ಪಾಲಕರು ಹಾಗೂ ವೈದ್ಯರು ತಾಯಿ ಹುಲಿ ಹಾಗೂ ಮರಿಗಳ ಆರೋಗ್ಯ ನೋಡಿಕೊಳ್ಳುತ್ತಿದ್ದಾರೆ. ಈ ಮರಿಗಳ ಜನನದಿಂದಾಗಿ ಮೈಸೂರು ಮೃಗಾಲಯ ೯ ಗಂಡು ಹುಲಿ, ೭ ಹೆಣ್ಣು ಹುಲಿ ಹಾಗೂ ೩ ಹುಲಿ ಮರಿಗಳನ್ನು ಹೊಂದಿದAತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

Translate »