ಬೆಳ್ಳಿಗಾಗಿ ದೋಸ್ತ್ ಹತ್ಯೆ: ಆರೋಪಿ ಸೆರೆ, ೮ ಲಕ್ಷ ಮೌಲ್ಯದ ಮಾಲು ವಶ
ಮೈಸೂರು

ಬೆಳ್ಳಿಗಾಗಿ ದೋಸ್ತ್ ಹತ್ಯೆ: ಆರೋಪಿ ಸೆರೆ, ೮ ಲಕ್ಷ ಮೌಲ್ಯದ ಮಾಲು ವಶ

May 10, 2022

ಕೊಲೆಯಾದ ಗೋವಿಂದ ಆರೋಪಿ ಅರ್ಜುನ್
ಮೈಸೂರು, ಮೇ ೯- ಬೆಳ್ಳಿ ಆಸೆಗಾಗಿ ಜೊತೆಗಾರನನ್ನೇ ಹತ್ಯೆ ಮಾಡಿದ ರಾಜಾಸ್ತಾನ ಮೂಲದ ವ್ಯಕ್ತಿ ಯನ್ನು ಲಷ್ಕರ್ ಠಾಣೆ ಪೊಲೀಸರು ಬಂಧಿಸಿ ೮ ಲಕ್ಷ ರೂ. ಮೌಲ್ಯದ ೧೨ ಕೆಜಿ ಬೆಳ್ಳಿ ವಶಪಡಿಸಿಕೊಂಡಿದ್ದಾರೆ. ರಾಜಾಸ್ತಾನ ಮೂಲದ ಅರ್ಜುನ್ ಕುಮಾರ್ ಬಂಧಿತ ನಾಗಿದ್ದು, ಈತ ತನ್ನ ಜೊತೆಗಾರ ಗೋವಿಂದ ಎಂಬಾತನನ್ನು ಏ.೨೭ರಂದು ಹತ್ಯೆ ಮಾಡಿ ರಾಜಾಸ್ತಾನಕ್ಕೆ ಪರಾರಿಯಾಗಿದ್ದ.

ವಿವರ: ಮೈಸೂರಿನ ಸುಮತಿನಾಥ ಜೈನ ಮಂದಿರಕ್ಕೆ ಸಂಬAಧಪಟ್ಟ ಬೆಳ್ಳಿ ಕೆಲಸ ಮಾಡುವ ಆರ್ಡರ್ ಪಡೆದಿದ್ದ ರಾಜಾ ಸ್ತಾನದ ಗೋವಿಂದ ಎಂಬಾತ ತನ್ನ ಸಹಾಯಕ್ಕಾಗಿ ಅರ್ಜುನ್‌ಕುಮಾರ್ ಎಂಬಾತನನ್ನು ಕರೆತಂದಿದ್ದ. ಜೈನ ಮಂದಿ ರದ ಕೆಲಸಕ್ಕಾಗಿ ಮುಖ್ಯಸ್ಥರಾದ ಬೇರುಮಲ್ ಎಂಬುವರು ಗೋವಿಂದನಿಗೆ ೧೪ ಕೆಜಿ ಬೆಳ್ಳಿ ನೀಡಿದ್ದರು.

ಹಳ್ಳದಕೇರಿ ಬಳಿಯ ಕೊಠಡಿಯೊಂದರಲ್ಲಿ ವಾಸ್ತವ್ಯ ಹೂಡಿದ್ದ ಗೋವಿಂದ ಮತ್ತು ಅರ್ಜುನ್‌ಕುಮಾರ್ ಬೆಳ್ಳಿ ಕೆಲಸದಲ್ಲಿ ನಿರತರಾಗಿದ್ದರು. ಏ.೭ರಂದು ಬೆಳಗ್ಗೆ ಕೊಠಡಿಯಲ್ಲಿ ಗೋವಿಂದ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಆತನ ತಲೆ ಮೇಲೆ ಫ್ಯಾನ್ ಕಳಚಿ ಬಿದ್ದಿರುವಂತೆ ದೃಶ್ಯ ಸೃಷ್ಟಿಸಲಾಗಿತ್ತು. ಅದೇ ವೇಳೆ ಆತನ ಜೊತೆಗಾರ ಅರ್ಜುನ್‌ಕುಮಾರ್ ನಾಪತ್ತೆಯಾಗಿದ್ದ. ಜೊತೆಗೆ ಜೈನ ಮಂದಿರದ ಕೆಲಸಕ್ಕಾಗಿ ಕೊಟ್ಟಿದ್ದ ಬೆಳ್ಳಿಯೂ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಲಷ್ಕರ್ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದರು.

ಆರೋಪಿ ಅರ್ಜುನ್‌ಕುಮಾರ್ ರಾಜಾಸ್ತಾನದ ಪೊಮಾವ್ ನಗರದಲ್ಲಿ ಇದ್ದಾನೆ ಎಂಬ ಮಾಹಿತಿ ಮೇರೆಗೆ ಅಲ್ಲಿಗೆ ತೆರಳಿದ ಲಷ್ಕರ್ ಠಾಣೆ ಪೊಲೀಸರ ತಂಡ, ಆತನನ್ನು ಬಂಧಿಸಿ ೮ ಲಕ್ಷ ರೂ. ಮೌಲ್ಯದ ೧೨ ಕೆಜಿ ಬೆಳ್ಳಿ ವಶಪಡಿಸಿಕೊಂಡಿದೆ.ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಆದೇಶದ ಮೇರೆಗೆ ಡಿಸಿಪಿ ಪ್ರದೀಪ್ ಗಂಟಿ ಮಾರ್ಗದರ್ಶನದಲ್ಲಿ ಎಸಿಪಿ ಎಂ.ಎನ್.ಶಶಿಧರ್ ಉಸ್ತುವಾರಿಯಲ್ಲಿ ಲಷ್ಕರ್ ಠಾಣೆ ಇನ್ಸ್ ಪೆಕ್ಟರ್ ಸಂತೋಷ್ ನೇತೃತ್ವದಲ್ಲಿ ಸಬ್ ಇನ್ಸ್ಪೆಕ್ಟರ್‌ಗಳಾದ ಗೌತಮ್, ಧನಲಕ್ಷಿö್ಮ, ಪ್ರೊಬೇಷನರಿ ಸಬ್‌ಇನ್ಸ್ಪೆಕ್ಟರ್ ಕೀರ್ತಿ, ಎಎಸ್‌ಐ ಸಿದ್ದರಾಜು, ಸಿಬ್ಬಂದಿಗಳಾದ ಮಲ್ಲಿಕಾರ್ಜುನ, ಲಿಂಗ ರಾಜು, ಅನಿಲ್ ಪತ್ತಾರ್, ಹೇಮಂತ್, ಮಹೇಶ್, ಸತ್ಯ, ಚಿನ್ನಪ್ಪ, ಮಂಜು, ಲೋಕೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

 

Translate »