ತಂದೆ-ಮಗನ ಸುಲಿಗೆ: ಖದೀಮರ ಬಂಧನ
ಮೈಸೂರು

ತಂದೆ-ಮಗನ ಸುಲಿಗೆ: ಖದೀಮರ ಬಂಧನ

May 10, 2022

ಮೈಸೂರು, ಮೇ ೯- ಮಧ್ಯರಾತ್ರಿ ಊರಿಗೆ ತೆರಳುತ್ತಿದ್ದ ತಂದೆ-ಮಗನ ಮೇಲೆ ಹಲ್ಲೆ ನಡೆಸಿ, ಸುಲಿಗೆ ಮಾಡಲು ಯತ್ನಿಸಿದ ನಾಲ್ವರು ಸುಲಿಗೆಕೋರರನ್ನು ಲಷ್ಕರ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜೀವಿತ್ (೧೯), ಶ್ರೀನಿವಾಸ (೧೯), ಚೇತನ (೨೧), ಸಚಿತ್ (೨೨) ಬಂಧಿತ ಆರೋಪಿಗಳಾಗಿದ್ದು, ಇವರು ಹಾಸನ ಜಿಲ್ಲೆ ಶಾಂತಿಗ್ರಾಮದ ನಿವಾಸಿ ನರಸಿಂಹಯ್ಯ ಮತ್ತು ಅವರ ಮಗನ ಮೇಲೆ ಹಲ್ಲೆ ನಡೆಸಿ ಸುಲಿಗೆಗೆ ಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಶಾಂತಿಗ್ರಾಮದ ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನರಸಿಂಹಯ್ಯ ಅವರ ಸಂಬAಧಿಕರು ಮೈಸೂರಿನ ಕೆಆರ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅವರ ಆರೋಗ್ಯ ವಿಚಾರಿಸಲು ನರಸಿಂಹಯ್ಯ, ತಮ್ಮ ಮಗನೊಂದಿಗೆ ಮೈಸೂರಿಗೆ ಆಗಮಿಸಿದ್ದರು. ಮಧ್ಯರಾತ್ರಿ ಊರಿಗೆ ಹಿಂತಿರುಗಲು ಕೆಆರ್ ಆಸ್ಪತ್ರೆಯಿಂದ ಬಸ್ ನಿಲ್ದಾಣಕ್ಕೆ ಅಪ್ಪ-ಮಗ ನಡೆದುಕೊಂಡು ಹೋಗುತ್ತಿದ್ದ ವೇಳೆ ನಾಲ್ವರು ಸುಲಿಗೆ ಕೋರರು ಇವರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ. ಅದೇ ವೇಳೆಗೆ ಗಸ್ತಿನಲ್ಲಿದ್ದ ಗರುಡ ವಾಹನ ಬಂದಾಗ ಸುಲಿಗೆಕೋರರು ಪೊಲೀಸರನ್ನು ಕಂಡು ಪರಾರಿಯಾಗುತ್ತಿದ್ದಾಗ ಪೊಲೀಸರು, ಸ್ಥಳದಲ್ಲೇ ಇಬ್ಬರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಅವರು ನೀಡಿದ ಮಾಹಿತಿ ಮೇರೆಗೆ ಮತ್ತಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬAಧ ಲಷ್ಕರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತರಲ್ಲಿ ಜೀವಿತ್ ಅನುಕಂಪ ಆಧಾರದ ಸರ್ಕಾರಿ ಉದ್ಯೋಗದ ಆಕಾಂಕ್ಷಿಯಾಗಿದ್ದು, ಚೇತನ್ ಮೈಸೂರಿನ ದ್ವಿಚಕ್ರ ವಾಹನ ಶೋರೂಂವೊAದರ ನೌಕರನಾಗಿದ್ದರೆ, ಸಚಿತ್ ಬಿಎಸ್‌ಎನ್‌ಎಲ್‌ನ ಗುತ್ತಿಗೆ ನೌಕರ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Translate »