೧೫ ದಿನದ ಬಳಿಕ ಅಕ್ರಮ ಧ್ವನಿವರ್ಧಕಗಳ ತೆರವು: ಸಿಎಂ
ಮೈಸೂರು

೧೫ ದಿನದ ಬಳಿಕ ಅಕ್ರಮ ಧ್ವನಿವರ್ಧಕಗಳ ತೆರವು: ಸಿಎಂ

May 10, 2022

ಬೆAಗಳೂರು: ಅಕ್ರಮವಾಗಿ ಅಳವಡಿಸಿರುವ ಧ್ವನಿವರ್ಧಕಗಳನ್ನು ಯಾವ ಸಮಯದಲ್ಲಿ ಬಳಸಬೇಕು ಎಂಬುವುದನ್ನು ಅರ್ಜಿ ಹಾಕಿ ಹೈಕೋರ್ಟ್, ಸುಪ್ರೀಂಕೋರ್ಟ್ನಿAದ ಅನುಮತಿ ಪಡೆಯಬೇಕು ಇಲ್ಲದಿದ್ದರೆ, ೧೫ ದಿನಗಳ ಬಳಿಕ ಅನಧಿಕೃತ ಮೈಕ್‌ಗಳನ್ನು ತೆರವುಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದ ಅವರು, ಅಕ್ರಮವಾಗಿ ಧ್ವನಿವರ್ಧಕಗಳನ್ನು ಹಾಕಿರುವವರು ಅರ್ಜಿ ಸಲ್ಲಿಸಿ ಯಾವ, ಯಾವ ಡೆಸಿಬಲ್ ಯಾವ ಟೈಮ್‌ನಲ್ಲಿ ಬಳಸಬೇಕು ಎನ್ನುವುದನ್ನು ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು. ಬೆಳಗ್ಗೆ ೬ರಿಂದ ೧೦ರವರೆಗೆ ೧ ಡೆಸಿಬಲ್, ರಾತ್ರಿ ೧೦ ಗಂಟೆಯಿAದ ೬ ಗಂಟೆವರೆಗೆ ಒಂದು ಪ್ರಮಾಣದಂತೆ ಅನುಸರಿಸಬೇಕು. ಇದು ಕೇವಲ ಹಿಂದೂ ಧಾರ್ಮಿಕ ಅಥವಾ ಮುಸ್ಲಿಂ ಧಾರ್ಮಿಕ ಧ್ವನಿವರ್ಧಕಗಳಿಗೆ ಮಾತ್ರ ಅನ್ವಯವಾಗುವುದಿಲ್ಲ. ಬದಲಾಗಿ ಸಾರ್ವಜನಿಕ ಕಾರ್ಯಕ್ರಮಗಳಿಗೂ ಈ ನಿಯಮ ಅನ್ವಯವಾಗುತ್ತದೆ. ಧ್ವನಿವರ್ಧಕ ಮಿತಿ ಪ್ರಮಾಣದಲ್ಲಿ ಬಳಸಬೇಕು ಎಂದಿದ್ದಾರೆ. ಈ ಕುರಿತು ಕಾನೂನು ತಜ್ಞರ ತಂಡದೊAದಿಗೆ ಚರ್ಚೆ ನಡೆಸಿರುವ ಬೊಮ್ಮಾಯಿ ಅವರು, ಇಂದು ಸಂಜೆ ಅಥವಾ ನಾಳೆಯೊಳಗೆ ಸುತ್ತೋಲೆ ಹೊರಡಿಸುವ ಸಾಧ್ಯತೆಯಿದ್ದು, ಕೋರ್ಟ್ ನೀಡುವ ಆದೇಶವನ್ನು ಪಾಲಿಸಬೇಕು. ಇಲ್ಲದಿದ್ದರೆ ೧೫ ದಿನದ ಬಳಿಕ ಅಕ್ರಮ ಮೈಕ್‌ಗಳ ವಿರುದ್ಧ ಕಾರ್ಯಾಚರಣೆ ನಡೆಸಿ ಅನಧಿಕೃತ ಮೈಕ್‌ಗಳ ತೆರವುಗೊಳಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶಿಸಿದ್ದಾರೆ.

Translate »