ಮೈಸೂರಲ್ಲಿ ಮುತಾಲಿಕ್ ನೇತೃತ್ವದಲ್ಲಿಮೊಳಗಿದ ಸುಪ್ರಭಾತ
ಮೈಸೂರು

ಮೈಸೂರಲ್ಲಿ ಮುತಾಲಿಕ್ ನೇತೃತ್ವದಲ್ಲಿಮೊಳಗಿದ ಸುಪ್ರಭಾತ

May 10, 2022

ಮೈಸೂರು, ಮೇ ೯(ಎಂಟಿವೈ)-ಮೈಸೂರಲ್ಲಿ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಸೋಮವಾರ ಮುಂಜಾನೆ ಸುಪ್ರಭಾತ ಹಾಗೂ ಓಂಕಾರ ಮೊಳಗಿ.

ಮೈಸೂರಿನ ಶಿವರಾಂಪೇಟೆಯಲ್ಲಿರುವ ಆಂಜನೇಯಸ್ವಾಮಿ ದೇವಾಲಯದಲ್ಲಿ ಮುಂಜಾನೆ ಬೆಳಗ್ಗೆ ೫ ಗಂಟೆಗೆ ಸುಪ್ರಭಾತ, ಓಂಕಾರ ಪಠಣೆ ನಡೆಯಿತು. ಮುತಾಲಿಕ್ ನೇತೃತ್ವದಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರು ಸುಮಾರು ಗಂಟೆ ಕಾಲ ಶ್ರೀರಾಮ, ಶಿವನ ಭಜನೆ ಮಾಡಿದರು. ಹನುಮಾನ್ ಚಾಲೀಸಾ ಪಠಿಸಿದರು. ಶ್ರೀರಾಮ ಸೇನೆ ಹಾಗೂ ಹಿಂದೂಪರ ಸಂಘಟನೆಗಳ ಮುಖಂಡರು, ಕಾರ್ಯ ಕರ್ತರ ಸುಪ್ರಭಾತ, ಓಂಕಾರ ಪಠಣೆ ವೇಳೆ ಶಿವರಾಮಪೇಟೆ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಸುಪ್ರಭಾತ ಮೊಳಗಿದ ಬಳಿಕ ಪತ್ರಕರ್ತರೊಂದಿಗೆ ಪ್ರಮೋದ್ ಮುತಾಲಿಕ್ ಮಾತನಾಡಿ, ಧ್ವನಿವರ್ಧಕದ ಮೂಲಕ ಆಜಾನ್ ಕೂಗುವುದಕ್ಕೆ ಪ್ರತಿಯಾಗಿ ಇಂದು ರಾಜ್ಯದಾದ್ಯಂತ ಸಾವಿರಕ್ಕೂ ಹೆಚ್ಚು ದೇವಾಲಯಗಳಲ್ಲಿ ಸುಪ್ರಭಾತ ಮೊಳಗಿಸಲು ನಿರ್ಧರಿಸ ಲಾಗಿತ್ತು. ಮೈಸೂರಲ್ಲಿ ಈ ಅಭಿಯಾನ ಆರಂಭವಾಗಿದೆ.

ಪ್ರಾರ್ಥನಾ ಮಂದಿರಗಳಲ್ಲಿ ಧ್ವನಿವರ್ಧಕ ತೆರವುಗೊಳಿಸುವುದಕ್ಕೆ ಸಂಬAಧಿಸಿದAತೆ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡುವಲ್ಲಿ ಹಿಂದೂ ಪರ ಸಂಘಟನೆಗಳು ಶೇ.೧೦೦ರಷ್ಟು ಯಶಸ್ವಿಯಾಗಿz್ದೆÃವೆ. ಇದು ತಾಲಿಬಾನ್, ಪಾಕಿಸ್ತಾನ ಅಲ್ಲ. ಮುಸ್ಲಿಂ ಸಮುದಾಯದ ಆಜಾನ್ ನಿಂದ ಹಲವರಿಗೆ ತೊಂದರೆ ಆಗಿದೆ. ಅವರು ಹಠ ಬಿಡಬೇಕು. ಸಂಘರ್ಷಕ್ಕೆ ಅವಕಾಶ ಮಾಡಿಕೊಡಬಾರದು. ಲೌಡ್‌ಸ್ಪೀಕರ್ ಬಳಸಿ, ಕಾನೂನು ಉಲ್ಲಂಘನೆ ಮಾಡುವವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುವುದಿಲ್ಲವೋ, ಎಲ್ಲಿಯವರೆಗೆ ಶಬ್ದಮಾಲಿನ್ಯ ನಿಲ್ಲಿ ಸುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಹೋರಾಟ ಹೀಗೆ ಮುಂದು ವರಿಯಲಿದೆ. ಹಿಂದೂ ಕಾರ್ಯಕರ್ತರನ್ನು ಬಂಧಿಸುತ್ತಿz್ದÁರೆ. ಧ್ವನಿವರ್ಧಕ ಅಳವಡಿಸಿರುವ ದೇವಸ್ಥಾನಗಳಿಗೆ ನೋಟಿಸ್ ನೀಡ ಲಾಗಿದೆ. ಈ ರೀತಿ ಮಾಡಿರುವ ಬಿಜೆಪಿ
ಸರ್ಕಾರಕ್ಕೆ ನಾಚಿಕೆ, ಮಾನ ಮರ್ಯಾದೆ ಇದೆಯೇ? ನಮ್ಮ ಮೇಲೇಕೆ ನಿಮ್ಮ ಆಕ್ರೋಶ. ದೇವಸ್ಥಾನಗಳಲ್ಲಿ ಭಕ್ತಿಗೀತೆ ಹಾಕುವ, ಪೂಜೆ ಮಾಡುವವರನ್ನು ಬಂಧಿಸುತ್ತೀರಾ? ಇದು ಖಂಡನೀಯ. ಬಿಜೆಪಿ ಸರ್ಕಾರಕ್ಕೆ ನಮ್ಮ ಧಿಕ್ಕಾರ. ಹಿಂದು ಸಂಸ್ಕೃತಿ, ಹಿಂದೂ ವಿಚಾರಧಾರೆಯಲ್ಲಿ ಸರ್ಕಾರ ರಚಿಸಿ ಈಗ ನಮಗೆ ನೋಟಿಸ್ ನೀಡುತ್ತೀರಾ ಎಂದರು.

ಸುಪ್ರೀAಕೋರ್ಟಿನ ಆದೇಶವಿದ್ದರೂ ಮೈಕ್ ಬಳಕೆ ವಿಚಾರವಾಗಿ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕೇವಲ ನೋಟಿಸ್ ನೀಡಿ ಕಣ್ಣೊರೆಸುವ ಕೆಲಸ ಮಾಡುತ್ತಿದೆ. ಇದು ಸರಿ ಯಲ್ಲ. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೇವಲ ನೋಟಿಸ್ ನೀಡಲಿಲ್ಲ, ಬದಲಿಗೆ ದಿಟ್ಟ ಕ್ರಮ ತೆಗೆದುಕೊಂಡರು. ಅವರು ಮಸೀದಿ, ದೇವಸ್ಥಾನ, ಚರ್ಚ್ನಲ್ಲಿದ್ದ ಮೈಕ್‌ಗಳನ್ನು ತೆರವುಗೊಳಿಸಿದರು. ಇದೇ ರೀತಿ ರಾಜ್ಯ ಸರ್ಕಾರವೂ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದರೆ, ಮುಖ್ಯಮಂತ್ರಿ, ಗೃಹಸಚಿವರ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ಆಜಾನ್‌ಗೆ ನಮ್ಮ ವಿರೋಧವಿಲ್ಲ. ಆದರೆ ಮೈಕ್‌ಗಳ ಶಬ್ಧ ಮಾಲಿನ್ಯದಿಂದ ಜನರಿಗೆ ತೊಂದರೆ ನೀಡುತ್ತಿರುವುದಕ್ಕೆ ನಮ್ಮ ವಿರೋಧ ಎಂದರು. ಈ ವೇಳೆ ಮುಖಂಡರಾದ ಮೈ.ಕಾ.ಪ್ರೇಮ್ ಕುಮಾರ್, ಸಂಜಯ್, ಜೀವನ್‌ಗೌಡ, ರವಿಕುಮಾರ್ ಉಪಸ್ಥಿತರಿದ್ದರು.

Translate »