ಹವಾಮಾನ ವೈಪರೀತ್ಯ; ಮೈಸೂರಲ್ಲಿ ಲ್ಯಾಂಡ್ ಆಗದ ಗೋವಾ ವಿಮಾನ
ಮೈಸೂರು

ಹವಾಮಾನ ವೈಪರೀತ್ಯ; ಮೈಸೂರಲ್ಲಿ ಲ್ಯಾಂಡ್ ಆಗದ ಗೋವಾ ವಿಮಾನ

May 10, 2022

ಬೆಂಗಳೂರಲ್ಲಿ ಸುರಕ್ಷಿತ ಲ್ಯಾಂಡಿAಗ್

ಗೋವಾಗೆ ಹೊರಟಿದ್ದ ಪ್ರಯಾಣ ಕರು ಕಾದು ಕಾದು ಕಂಗಾಲು

ಮೈಸೂರು,ಮೇ ೯(ಪಿಎಂ)-ಹವಾಮಾನ ವೈಪರೀತ್ಯದ ಕಾರಣ ಹೈದರಾಬಾದ್‌ನಿಂದ ಬಂದ ಅಲಯನ್ಸ್ ಏರ್ ವಿಮಾನ, ಮೈಸೂರಲ್ಲಿ ಲ್ಯಾಂಡಿAಗ್ ಆಗದೇ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟಿçÃಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತ ಲ್ಯಾಂಡಿAಗ್ ಆದ ಘಟನೆ ಭಾನುವಾರ ನಡೆದಿದೆ.

ಹವಾಮಾನ ಪೂರಕವಾಗಿಲ್ಲದ ಹಿನ್ನೆಲೆಯಲ್ಲಿ ಹೈದರಾಬಾದ್‌ನಿಂದ ಟೆಕ್‌ಆಫ್ ಆಗುವುದೇ ತಡ ವಾಗಿತ್ತು. ಹಾಗಾಗಿ ಮೈಸೂರಿಗೆ ಆಗಮಿಸುವುದೂ ವಿಳಂಬವಾಯಿತು. ಕೊನೆಗೆ ಇಲ್ಲಿಯೂ ಲ್ಯಾಂಡಿAಗ್ ಮಾಡುವುದು ಸುರಕ್ಷಿತವಲ್ಲ ಎಂದು ನಿರ್ಧರಿಸಿ, ಬೆಂಗ ಳೂರಿಗೆ ಪ್ರಯಾಣ ಬೆಳೆಸಬೇಕಾಯಿತು. ಇದರ ಹೊರತಾಗಿ ಬೇರೇನೂ ಸಮಸ್ಯೆ ಇಲ್ಲ ಎಂದು ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣದ ಮೂಲಗಳು ಹೇಳುತ್ತಿದ್ದರೆ, ಪ್ರಯಾಣ ಕರು ಮಾತ್ರ, ವಿಮಾನ ಬಂದಿರುವುದು ಗೊತ್ತಿಲ್ಲ, ಸುತ್ತು ಹಾಕಿರುವುದು ಗೊತ್ತಿಲ್ಲ.

ವಿನಾಕಾರಣ ನಮ್ಮನ್ನು ನಿಲ್ದಾಣದಲ್ಲಿ ಕಾಯಿಸಲಾಯಿತು. ನಿಲ್ದಾಣದ ಅಧಿಕಾರಿಗಳು ನಮಗೆ ಸರಿಯಾದ ಮಾಹಿತಿಯನ್ನೇ ನೀಡಲಿಲ್ಲ. ವಿಮಾನ ರದ್ದಾಗಿದೆ ಎಂದು ಹೇಳಿ ಕೊನೆ ಘಳಿಗೆಯಲ್ಲಿ ನಿಲ್ದಾಣದಿಂದ ಹೊರಹೋಗಿ ಎಂದು ಏರುಧನಿಯಲ್ಲಿ ಅಬ್ಬರಿಸಿದರು ಎಂದು ದೂರಿದ್ದಾರೆ. ಅದೇನೇ ಇದ್ದರೂ ಈ ವಿಮಾನದಲ್ಲಿ ಗೋವಾಗೆ ಪ್ರಯಣ ಬೆಳೆಸಲು ಬಯಸಿದ್ದ ೪೧ ಪ್ರಯಾಣ ಕರು ಕಾದು ಕಾದು ಬಸವಳಿದು, ಕೊನೆಗೆ ಬಂದ ದಾರಿಗೆ ಸುಂಕವಿಲ್ಲ ಎಂಬAತೆ ಮನೆಗೆ ಮರಳಬೇಕಾಯಿತು.

ಹೈದರಾಬಾದ್‌ನಿಂದ ಅಲಯನ್ಸ್ ಏರ್ ವಿಮಾನ (ಎಐ ೯೮೮೧) ಮೈಸೂರಿಗೆ ನಿಗದಿತ ಸಮಯ ಮಧ್ಯಾಹ್ನ ೩.೨೫ಕ್ಕೆ ಬರಲೇ ಇಲ್ಲ. ಆದರೆ, ರಾತ್ರಿ ವೇಳೆಗೆ ಮೈಸೂರಿಗೆ ಆಗಮಿಸಿದೆ. ಹವಾಮಾನ ವೈಪರಿತ್ಯದ ಹಿನ್ನೆಲೆಯಲ್ಲಿಯೇ ಲ್ಯಾಂಡಿAಗ್ ಮಾಡಲು ಸಾಧ್ಯವಾಗದೇ ಸುರಕ್ಷತಾ ದೃಷ್ಟಿಯಿಂದ ಬೆಂಗಳೂರಿಗೆ ತೆರಳಿತು ಎಂಬುದು ಮೈಸೂರು ವಿಮಾನ ನಿಲ್ದಾಣದ ಅಧಿಕಾರಿಗಳಿಂದ ಬಂದ ಮಾಹಿತಿ.

`ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಡಾ.ಮಂಜುನಾಥ್, ಅಲಯನ್ಸ್ ಏರ್ ವಿಮಾನ ಹವಾಮಾನ ವೈಪರಿತ್ಯದಿಂದ ಮೈಸೂರಿನ ನಿಲ್ದಾಣದಲ್ಲಿ ಲ್ಯಾಂಡಿAಗ್ ಆಗದೇ ದಿಕ್ಕು ಬದಲಿಸಬೇಕಾ ಯಿತು. ಮೈಸೂರಿಗೆ ಬಂದ ವಿಮಾನವು ಲ್ಯಾಂಡಿAಗ್ ಆಗಲು ಮೂರರಿಂದ ನಾಲ್ಕು ಸುತ್ತು ಹಾಕಿದೆ. ಆದರೂ ಬಾರೀ ಒತ್ತಡದ ಅಡ್ಡ ಗಾಳಿಯ ಪರಿಣಾಮ ಸಾಧ್ಯವಾಗದೇ ಲ್ಯಾಂಡಿAಗ್ ಮಾಡುವುದು ಸುರಕ್ಷಿತವಲ್ಲ ಎಂದು ನಿರ್ಧರಿಸಿ, ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದತ್ತ ಪ್ರಯಾಣ ಬೆಳೆಸಿತು ಎಂದರು. ಅಲ್ಲಿ ಸುರಕ್ಷಿತ ಲ್ಯಾಂಡಿAಗ್ ಆಗಿ ಮತ್ತೆ ಅಲ್ಲಿಂದ ಹಿಂತಿರುಗಲೂ ಹವಾಮಾನ ಪೂರಕವಾಗಿ ಇರಲಿಲ್ಲ. ಹವಾಮಾನ ಪರಿಸ್ಥಿತಿಯಿಂದ ಈ ಸಮಸ್ಯೆ ಆಗಿದೆಯೇ ಹೊರತು ಬೇರೇನೂ ಇಲ್ಲ. ವ್ಯತಿರಿಕ್ತ ಹವಾಮಾನ ದಿಂದಾಗಿಯೇ ಹೈದರಾಬಾದ್‌ನಿಂದ ಟೆಕ್‌ಆಫ್ ಆಗುವುದೂ ತಡವಾಗಿದೆ. ಇದರಿಂದ ಮೈಸೂರಿಗೆ ಬರುವುದೂ ವಿಳಂಬವಾಯಿತು. ರಾತ್ರಿ ವೇಳೆಗೆ ಮೈಸೂರಿನಲ್ಲಿ ಇಳಿಸಲು ಪ್ರಯತ್ನಿಸಿ ಸಾಧ್ಯವಾಗದೇ ಬೆಂಗಳೂರು ನಿಲ್ದಾಣವು ಸಮೀಪವಿದ್ದ ಕಾರಣ ಅಲ್ಲಿ ಹೋಗಿ ಲ್ಯಾಂಡ್ ಮಾಡಲಾಗಿದೆ ಎಂದರು. ಪ್ರಯಾಣ ಕರಿಗೆ ಅನಾನುಕೂಲ ಉಂಟಾಯಿತು ಎಂಬುದಕ್ಕಿAತಲೂ ಅವರ ಸುರಕ್ಷತೆ ಮುಖ್ಯ. ಈ ಕಾರಣಕ್ಕೆ ಮೈಸೂರಿನಲ್ಲಿ ಲ್ಯಾಂಡಿAಗ್ ಮಾಡಲಿಲ್ಲ. ಒಂದು ವೇಳೆ ಇಳಿಸಿದ್ದರೆ, ವಿಮಾನವು ರನ್‌ವೇಯಿಂದ ಹೊರ ಹೋಗುವ ಅಪಾಯವಿತ್ತು. ಹಾಗಾಗಿ ಸೂಕ್ತ ನಿರ್ಧಾರವನ್ನೇ ತೆಗೆದುಕೊಳ್ಳಲಾಗಿದೆ. ಹೈದರಾಬಾದ್ ನಿಂದ ಮೈಸೂರಿಗೆ ಬಂದಿಳಿಯಬೇಕಿದ್ದ ೪೫ ಪ್ರಯಾಣ ಕರು ಬೆಂಗಳೂರಿನಿAದ ರಸ್ತೆ ಮೂಲಕ ಮೈಸೂರಿಗೆ ಮರಳಿದ್ದಾರೆ. ಇಂತಹ ಘಟನೆಗಳು ಸರ್ವೇ ಸಾಮಾನ್ಯ ಎಂದರು.
ಮತ್ತೊAದೆಡೆ ಕೆಲ ಪ್ರಯಾಣ ಕರು ಮಂಡಕಳ್ಳಿ ವಿಮಾನ ನಿಲ್ದಾಣ ಸಿಬ್ಬಂದಿ ವಿರುದ್ಧ ಕಿಡಿಕಾರಿದ್ದಾರೆ. ರಾತ್ರಿ ೧೧.೩೦ರ ವೇಳೆಗೆ ವಿಮಾನ ರದ್ದಾಗಿದೆ ಎಂದು ನಿಲ್ದಾಣದ ಸಿಬ್ಬಂದಿ ಹೇಳಿ, ಪೊಲೀಸರ ಮೂಲಕ ನಿಲ್ದಾಣದಿಂದ ನಮ್ಮನ್ನು ಹೊರ ಹಾಕಲು ಯತ್ನಿಸಿದರು ಎಂದು ದೂರಿದ್ದಾರೆ. ಪ್ರತಿಕೂಲ ಹವಾಮಾನವಿದ್ದರೆ, ವಿಮಾನ ನಿಲ್ದಾಣದ ಸಿಬ್ಬಂದಿ ನಮ್ಮನ್ನು ತಡರಾತ್ರಿವರೆಗೂ ಕಾಯಿಸುವ ಬದಲು ನಿಖರ ಮಾಹಿತಿ ನೀಡಬಹುದಿತ್ತು. ಸರಿರಾತ್ರಿವರೆಗೆ ಕಾಯಿಸುವ ಅಗತ್ಯವೇನಿತ್ತು? ಎಂದು ಕಿಡಿಕಾರಿದ್ದಾರೆ. `ತಡವಾಗುವ ಬಗ್ಗೆ ಮಾಹಿತಿ ನೀಡಿ, ಸಂಜೆ ೭.೩೦ಕ್ಕೆ ಬರಲು ಹೇಳಿದ್ದರು. ಆದರೂ ನಾವೇ ಇನ್ನೂ ತಡವಾಗಲಿದೆಯೇ ಎಂದು ಕೇಳಿದಾಗ, ಯಾವುದೇ ಕಾರಣಕ್ಕೂ ಅದಕ್ಕಿಂತ ವಿಳಂಬ ಆಗುವುದಿಲ್ಲ ಎಂದರು. ಅದರಂತೆ ನಿಲ್ದಾಣಕ್ಕೆ ಬಂದು ಮರ‍್ನಾಲ್ಕು ಗಂಟೆಗಳು ಕಾದರೂ ವಿಮಾನ ಬರಲಿಲ್ಲ. ಇಲ್ಲಿನ ಸಿಬ್ಬಂದಿ ಸರಿಯಾದ ಮಾಹಿತಿ ನೀಡಲಿಲ್ಲ. ಕೊನೆಗೆ ತಡರಾತ್ರಿಗೆ ವಿಮಾನ ರದ್ದಾಗಿದೆ ಎಂದು ನಿಲ್ದಾಣದಿಂದ ಹೊರ ಹೋಗಲು ತಿಳಿಸಿದರು’ ಎಂದು ಪ್ರಯಾಣ ಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.

 

Translate »