ರಸಗೊಬ್ಬರ, ಬಿತ್ತನೆ ಬೀಜ ಅಭಾವ ಸೃಷ್ಟಿಸಿದರೆಹುಷಾರ್
ಮೈಸೂರು

ರಸಗೊಬ್ಬರ, ಬಿತ್ತನೆ ಬೀಜ ಅಭಾವ ಸೃಷ್ಟಿಸಿದರೆಹುಷಾರ್

May 10, 2022

ಕೃಷಿ ಸಚಿವ ಬಿ.ಸಿ.ಪಾಟೀಲ್ ಕಟ್ಟುನಿಟ್ಟಿನ ಎಚ್ಚರಿಕೆ
ರೈತರಿಗೆ ಯಾವ ಕೊರತೆಯೂ ಆಗದಂತೆ ಕ್ರಮ
ಸಾಕಷ್ಟು ರಸಗೊಬ್ಬರ, ಬಿತ್ತನೆ ಬೀಜ ದಾಸ್ತಾನು
ವಾರದೊಳಗೆ ಬೆಳೆ ವಿಮೆ ಪರಿಹಾರ ಇತ್ಯರ್ಥ
ಬೆಂಗಳೂರು, ಮೇ ೯ (ಕೆಎಂಶಿ)-ಕೆಲವರು ಬೇಕಂತಲೇ ಕೃತಕವಾಗಿ ರಸಗೊಬ್ಬರ, ಬಿತ್ತನೆ ಬೀಜಗಳನ್ನು ಕಾಳಸಂತೆಯಲ್ಲಿ ದಾಸ್ತಾನು ಮಾಡಿ, ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ. ಹೀಗೆ ಯಾರಾದರೂ ರಸಗೊಬ್ಬರ, ಬಿತ್ತನೆ ಬೀಜ ಅಭಾವ ಸೃಷ್ಟಿಸಿದರೆ ಅಂತಹವರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗು ವುದೆಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಎಚ್ಚರಿಸಿದ್ದಾರೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಕಾಲಕ್ಕೆ ರಸಗೊಬ್ಬರ, ಬಿತ್ತನೆಬೀಜ ಕೊರತೆಯಾಗದಂತೆ ಹಂತಹAತವಾಗಿ ನೋಡಿಕೊಳ್ಳಲಾಗುತ್ತಿದೆ. ಯಾವುದೇ ಕಾರ ಣಕ್ಕೂ ರೈತರಿಗೆ ತೊಂದರೆಯಾಗಲು ಬಿಡುವುದಿಲ್ಲ.

೨೦೨೨-೨೩ನೇ ಸಾಲಿನ ಮುಂಗಾರು ಹಂಗಾಮಿನ ರಸಗೊಬ್ಬರ ಸರಬರಾಜು ವಿವರ: ೨೦೨೨-೨೩ರ ಸಾಲಿನ ಮುಂಗಾರು ಹಂಗಾಮಿಗೆ (ಏಪ್ರಿಲ್-೨೦೨೨ರಿಂದ ಸೆಪ್ಟೆಂಬರ್ ೨೦೨೨ರವರೆಗೆ) ೨೬.೭೬ ಲಕ್ಷ ಮೆಟ್ರಿಕ್ ಟನ್ (ಯೂರಿಯಾ-೧೦.೫೦ ಲಕ್ಷ ಮೆ.ಟನ್, ಡಿ.ಎ.ಪಿ-೪.೦೦ ಲಕ್ಷ ಮೆ.ಟನ್, ಎಂಒಪಿ-೨.೦೦ ಲಕ್ಷ ಮೆ.ಟನ್ ಮತ್ತು ಕಾಂಪ್ಲೆಕ್ಸ್-೧೦.೨೬ ಲಕ್ಷ ಮೆ.ಟನ್) ಪ್ರಮಾಣದ ವಿವಿಧ ಗ್ರೇಡ್‌ಗಳ ರಸಗೊಬ್ಬರದ ಬೇಡಿಕೆಯಿದೆ.

ಏಪ್ರಿಲ್ ೨೦೨೨ರ ಮಾಹೆಯಿಂದ ಮೇ ಮಾಹೆಯವರೆಗೆ ಒಟ್ಟು ೭.೬೧ ಲಕ್ಷ ಮೆ.ಟನ್ (ಯೂರಿಯಾ-೨.೨೩ ಲಕ್ಷ ಮೆ.ಟನ್, ಡಿ.ಎ.ಪಿ- ೧.೫೬ ಲಕ್ಷ ಮೆ.ಟನ್, ಎಂಒಪಿ-೦.೬೪ ಲಕ್ಷ ಮೆ.ಟನ್ ಮತ್ತು ಕಾಂಪ್ಲೆಕ್ಸ್- ೩.೧೮ ಲಕ್ಷ ಮೆ.ಟನ್) ಬೇಡಿಕೆ ಇದೆ. ದಿನಾಂಕ ೦೧.೦೪.೨೦೨೨ರಂತೆ ಆರಂಭಿಕ ಶಿಲು ಒಟ್ಟು ೫.೯೪ ಲಕ್ಷ ಮೆ.ಟನ್ (ಯೂರಿಯಾ-೩,೧೨ ಲಕ್ಷ ಮೆ.ಟನ್, ಡಿ.ಎ.ಪಿ-೦.೫೮ ಲಕ್ಷ ಮೆ.ಟನ್, ಎಂಒಪಿ-೦.೧೯ ಲಕ್ಷ ಮೆ.ಟನ್ ಮತ್ತು ಕಾಂಪ್ಲೆಕ್ಸ್-೨.೦೫ ಲಕ್ಷ ಮೆ.ಟನ್) ಇರುತ್ತದೆ. ೯.೦೫.೨೦೨೨ರ ಅಂತ್ಯಕ್ಕೆ ೩.೯೧ ಮೆ.ಟನ್ (ಯೂರಿಯಾ -೧.೭೪ ಲಕ್ಷ ಮೆ.ಟನ್, ಡಿ.ಎ.ಪಿ-೦.೮೮ ಲಕ್ಷ ಮೆ.ಟನ್ ಎಂಒಪಿ-೦.೧೦ ಲಕ್ಷ ಮೆ.ಟನ್ ಮತ್ತು ಕಾಂಪ್ಲೆಕ್ಸ್-೧.೧೯ ಮ.ಟನ್) ಪಮಾಣದ ರಸಗೊಬ್ಬರ ಸರಬರಾಜಾಗಿರುತ್ತದೆ. ಒಟ್ಟು ೯.೮೫ ಲಕ್ಷ ಮೆ.ಟನ್ ದಾಸ್ತಾನಿನಲ್ಲಿ ೨.೭೦ ಲಕ್ಷ ಮೆ.ಟನ್ ಲಕ್ಷ ಮೆ.ಟನ್ ಪುಮಾಣದ ರಸಗೊಬ್ಬರವು ಮಾರಾಟವಾಗಿರುತ್ತದೆ. ಪ್ರಸ್ತುತ ಒಟ್ಟು ೭.೧೫ ಲಕ್ಷ ಮೆ.ಟನ್ (ಯೂರಿಯಾ-೩.೪೫ ಲಕ್ಷ ಮೆ.ಟನ್, ಡಿ.ಎ.ಪಿ-೧.೦೨ ಲಕ್ಷ ಮೆ.ಟನ್, ಎಂಒಪಿ-೦.೨೦ ಲಕ್ಷ ಮ.ಟನ್ ಮತ್ತು ಕಾಂಪ್ಲೆಕ್ಸ್-೨.೪೮ ಲಕ್ಷ ಮೆ.ಟನ್) ಪುಮಾಣದ ರಸಗೊಬ್ಬರವು ಖಾಸಗಿ ಮಾರಾಟಗಾರರು ಮತ್ತು ಸಹಕಾರ ಸಂಘಗಳಲ್ಲಿ (ಒಟ್ಟು ೦.೮೩ ಲಕ್ಷ ಮೆ.ಟನ್ ದಾಸ್ತಾನು ಒಳಗೊಂಡಿದೆ) ದಾಸ್ತಾನಿದ್ದು, ರಸಗೊಬ್ಬರದ ಯಾವುದೇ ಕೊರತೆ ಇರುವುದಿಲ್ಲ. ಬಿತ್ತನೆ ಪೂರ್ವ-೨೦೨೨ರ ಮುಂಗಾರು ಹಂಗಾಮಿನಲ್ಲಿ ರಾಜ್ಯ ಸರ್ಕಾರದ ಬೀಜಗಳ ಪೂರೈಕೆ ಮತ್ತು ಇತರೆ ಹೂಡುವಳಿ ಯೋಜನೆಯಡಿ ೮೨೬೭ ಲಕ್ಷ ಹೆಕ್ಟೇರು ಪ್ರದೇಶದಲ್ಲಿ ಕೈಗೊಳ್ಳುವ ಗುರಿ ಇದ್ದು ಇದುವರೆವಿಗೆ ೧.೩೦ ಲಕ್ಷ ಹೆಕ್ಟೇರು ಪ್ರದೇಶದಲ್ಲಿ ಮುಂಗಾರು ಬಿತ್ತನೆ ಕೈಗೊಳ್ಳ ಲಾಗಿರುತ್ತದೆ. ೫.೩೮ ಲಕ್ಷ ಕ್ವಿಂ. ಬಿತ್ತನೆ ಬೀಜಗಳ ಬೇಡಿಕೆಗೆ, ೮.೬೫ ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜಗಳು ಲಭ್ಯವಿದ್ದು, ರಾಜ್ಯಾದ್ಯಂತ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳ ಮೂಲಕ ೦೯.೦೫.೨೦೨೨ರವರೆಗೆ ರೈತ ಸಂಪರ್ಕ ಕೇಂದ್ರಗಳಲ್ಲಿ ೩೫೦೫.೮ ಕ್ವಿಂಟಾಲ್‌ಗಳಷ್ಟು ಬಿತ್ತನೆ ಬೀಜಗಳನ್ನು ವಿತರಣೆ ಮಾಡಲಾಗಿದ್ದು, ೨೧೮೫.೮ ಕ್ವಿಂಟಾಲ್ ಗಳಷ್ಟು ದಾಸ್ತಾನು ಇರುತ್ತದೆ. ವಿತರಣೆ ಕಾರ್ಯ ಪ್ರಗತಿಯಲ್ಲಿದೆ. ಯಾವುದೇ ಬಿತ್ತನೆ ಬೀಜದ ಕೊರತೆಯಿರು ವುದಿಲ್ಲ. ೨೦೨೧-೨೨ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ೧೨.೬೭ ಲಕ್ಷ ರೈತರು ಬೆಳೆವಿಮೆ ಗಾಗಿ ನೋಂದಣ ಮಾಡಿಕೊಂಡಿದ್ದು, ಇದರ ಪೈಕಿ ಈಗಾಗಲೇ ರಾಜ್ಯದ ವಿವಿಧೆಡೆ ಬಿತ್ತನೆ ವಿಫಲಗೊಂಡಲ್ಲಿ ಮಧ್ಯಂತರ ಬೆಳೆವಿಮಾ ನಷ್ಟ ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪಗಳು ಹಾಗೂ ಕೊಲ್ಲೋತ್ತರ ನಷ್ಟ ಅಡಿಯಲ್ಲಿ ಒಟ್ಟು ೨.೧೦ ಲಕ್ಷ ರೈತರಿಗೆ ರೂ. ೧೩೫,೭೨ ಕೋಟಿ ಬೆಳೆವಿಮೆ ಪರಿಹಾರ ಮೊತ್ತ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ. ಉಳಿದ ರೈತರ ಬೆಳೆ ವಿಮೆಯನ್ನು ಈಗಾಗಲೇ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಿಂದ ಬೆಳೆ ಇಳುವರಿ ಮಾಹಿತಿ ಬಂದಿದ್ದು, ಬೆಳೆ ಸಮೀಕ್ಷೆ ವಿವರವನ್ನು ತಾಳೆ ಮಾಡಲಾಗಿದ್ದು, ಇನ್ನು ವಾರದೊಳಗೆ ಬೆಳೆ ವಿಮೆ ಪರಿಹಾರ ಮೊತ್ತವನ್ನು ಇತ್ಯರ್ಥಪಡಿಸಲಾಗುವುದು ಎಂದರು.

ರಾಜ್ಯ ಸರ್ಕಾರದ ರಿಯಾಯಿತಿ ಯೋಜನೆಯಡಿ ಭತ್ತ, ರಾಗಿ, ಜೋಳ, ಮೆಕ್ಕೆಜೋಳ, ಉದ್ದು, ಹೆಸರು, ಕಡಲೆ, ಅಲಸಂದೆ, ನೆಲಗಡಲೆ, ಸೋಯಾವರೆ, ಸೂರ್ಯಕಾಂತಿ, ಗೋಧಿ, ಕುಸುಬೆ ಮತ್ತು ನವಣೆ ಬಿತ್ತನೆ ಬೀಜಗಳನ್ನು ರಾಜ್ಯದ ಎಲ್ಲಾ ವರ್ಗದ ರೈತರಿಗೆ (ಸಾಮಾನ್ಯ ರೈತರಿಗೆ ಶೇ.೫೦ರವರೆಗೆ ಹಾಗೂ ಪರಿಶಿಷ್ಟ ವರ್ಗ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ.೭೫ರವರೆಗೆ) ಒಟ್ಟಾರೆ ಗರಿಷ್ಟ ೨.೦೦ ಹೆಕ್ಟೇರ್ ಅಥವಾ ಅವರ ವಾಸ್ತವಿಕ ಹಿಡುವಳಿ ಯಾವು ದಿದೆಯೋ ಆ ವಿಸ್ತೀರ್ಣದ ಮಿತಿಯೊಳಗೆ ರೈತರಿಗೆ ಸಕಾಲದಲ್ಲಿ ಹೋಬಳಿ ಮಟ್ಟ ದಲ್ಲಿಯೇ ಉತ್ತಮ ಬಿತ್ತನೆ ಬೀಜಗಳು ಲಭ್ಯ ವಾಗುವಂತೆ ಆಯಾ ಹೋಬಳಿ ರೈತ ಸಂಪರ್ಕ ಕೇಂದ್ರಗಳು ಗುರುತಿಸಿದ ಹೆಚ್ಚುವರಿ ಮಾರಾಟ ಕೇಂದ್ರಗಳು ಹಾಗೂ ಗ್ರಾಮ ಮಟ್ಟದಲ್ಲಿಯೇ ಲಭ್ಯವಾಗುವಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದೆ. -ಬಿ.ಸಿ.ಪಾಟೀಲ್, ಕೃಷಿ ಸಚಿವ

Translate »