ಕಾವೇರಿ, ಕಬಿನಿಗೆ ಮುಖ್ಯಮಂತ್ರಿಗಳಿಂದ ಬಾಗಿನ
ಮೈಸೂರು

ಕಾವೇರಿ, ಕಬಿನಿಗೆ ಮುಖ್ಯಮಂತ್ರಿಗಳಿಂದ ಬಾಗಿನ

November 3, 2021

ಹೆಚ್.ಡಿ.ಕೋಟೆ/ಶ್ರೀರಂಗಪಟ್ಟಣ, ನ.೨ (ಮಂಜು, ವಿನಯ್ ಕಾರೇಕುರ)- ಮೈದುಂಬಿ ಹರಿಯುತ್ತಿರುವ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಕಬಿನಿ ಮತ್ತು ಮಂಡ್ಯ ಜಿಲ್ಲೆ ಶ್ರೀರಂಗ ಪಟ್ಟಣ ತಾಲೂಕಿನ ಕೃಷ್ಣರಾಜ ಸಾಗರ ಜಲಾ ಶಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇಂದು ಬಾಗಿನ ಸಮರ್ಪಿಸಿದರು.

ಬೆಂಗಳೂರಿನಿAದ ವಿಶೇಷ ಹೆಲಿಕಾಪ್ಟರ್‌ನಲ್ಲಿ ಹೆಚ್.ಡಿ.ಕೋಟೆಗೆ ಆಗಮಿಸಿದ ಮುಖ್ಯಮಂತ್ರಿ ಗಳು, ಅಲ್ಲಿಂದ ಕಾರಿನಲ್ಲಿ ತೆರಳಿ ಕಬಿನಿ ಜಲಾ ಶಯದಲ್ಲಿ ಬಾಗಿನ ಅರ್ಪಿಸಿದರು. ನಂತರ ಅಲ್ಲಿಂದ ಮತ್ತೆ ಹೆಚ್.ಡಿ.ಕೋಟೆಗೆ ಕಾರಿನಲ್ಲಿ ಬಂದು ಹೆಲಿ ಕಾಪ್ಟರ್‌ನಲ್ಲಿ ಕೆಆರ್‌ಎಸ್ ಜಲಾಶಯಕ್ಕೆ ತೆರಳಿ, ಹೆಲಿಪ್ಯಾಡ್‌ನಿಂದ ಅಣೆಕಟ್ಟೆಗೆ ಕಾರಿನಲ್ಲಿ ತೆರಳಿ ಬಾಗಿನ ಅರ್ಪಿಸಿದರು.
ಕಬಿನಿಗೆ ಬಾಗಿನ: ಮೈದುಂಬಿರುವ ಕಬಿನಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಬಾಗಿನ ಅರ್ಪಿ ಸಿದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಶಾಸಕ ಅನಿಲ್ ಚಿಕ್ಕ ಮಾದು, ಅವರ ಪತ್ನಿ ಸೌಮ್ಯ, ಸಫಾಯಿ ಕರ್ಮ ಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ, ಶಾಸಕ ರಾದ ಎನ್.ಮಹೇಶ್, ನಿರಂಜನ್ ಕುಮಾರ್, ಹರ್ಷವರ್ಧನ್, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ
ರಘು ಕೌಟಿಲ್ಯ, ಮುಡಾ ಅಧ್ಯಕ್ಷ ರಾಜೀವ್, ಜಿಲ್ಲಾಧಿಕಾರಿ ಬಗಾದಿ ಗೌತಮ್, ಎಸ್ಪಿ ಆರ್.ಚೇತನ್, ಅಡಿಷನಲ್ ಎಸ್‌ಪಿ ಶಿವಕುಮಾರ್, ಡಿವೈಎಸ್ಪಿ ರವಿಪ್ರಸಾದ್, ಸಿಪಿಐ ಬಸವರಾಜ್, ಆನಂದ್, ಎಸ್‌ಐ ಜಯಪ್ರಕಾಶ್, ನೀರಾವರಿ ಇಲಾಖೆ ಅಧೀಕ್ಷಕ ಇಂಜಿನಿಯರ್ ಶಿವಮಾದಯ್ಯ, ಮುಖ್ಯ ಇಂಜಿನಿಯರ್ ಶಂಕರೇಗೌಡ, ಕಾರ್ಯಪಾಲಕ ಅಭಿಯಂತರ ಸುರೇಶ್ ಬಾಬು, ಸಹಾಯಕ ಕಾರ್ಯಪಾಲಕ ಅಭಿಯಂತರ ಜನಾರ್ಧನ್, ರಮೇಶ್ ಬಾಬು, ರಮೇಶ್‌ಗೌಡ, ವಿಶ್ವನಾಥ್, ಸಂಗೀತ, ಉಷಾ, ನಟಶೇಖರ್, ಗೇಜ್ ನಾಗರಾಜ್ ಅವರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ವೇಳೆ ಮಾತನಾಡಿದ ಮುಖ್ಯಮಂತ್ರಿಗಳು, ಕಬಿನಿ ಜಲಾಶಯ ಭರ್ತಿಯಾಗಿರುವುದು ಸಂತಸ ತಂದಿದೆ. ಇದರಿಂದ ಈ ಭಾಗದ ರೈತರಿಗೆ ಅನುಕೂಲವಾಗಲಿದೆ ಎಂದರು.

ನವೆAಬರ್ ತಿಂಗಳಲ್ಲಿ ಬಾಗಿನ ಅರ್ಪಿಸುವುದು ವಿಶೇಷ. ಕಳೆದ ವರ್ಷ ನಾನು ಬಿ.ಎಸ್.ಯಡಿಯೂರಪ್ಪನವರು ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಲು ಬಂದಾಗ ಅವರ ಜೊತೆ ಬಂದಿದ್ದೆ. ನಾನು ಮುಖ್ಯಮಂತ್ರಿಯಾದ ನಂತರ ಅಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದೀನಿ. ಈಗ ಕಾವೇರಿ ಜಲಾನಯನ ಪ್ರದೇಶದ ಎರಡೂ ಜಲಾಶಯ ಗಳಿಗೆ ಬಾಗಿನ ಅರ್ಪಿಸುವ ಸೌಭಾಗ್ಯ ನನಗೆ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಕಬಿನಿ ಜಲಾಶಯದ ಕೆಳಭಾಗದಲ್ಲಿ ಬೃಂದಾವನ ಗಾರ್ಡನ್ ಮಾದರಿ ಉದ್ಯಾನವನವನ್ನು ಪಿಪಿಪಿ ಮಾದರಿಯಲ್ಲಿ ನಿರ್ಮಾಣ ಮಾಡಲು ಪ್ರಸ್ತಾವನೆ ಬಂದಿದೆ. ಸರ್ಕಾರವೇ ಮಾಡಬೇಕು ಎಂಬ ವಿಚಾರವೂ ಇದೆ. ಶೀಘ್ರ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.ಕಬಿನಿ ಜಲಾಶಯದ ಪ್ರವಾಹ ವೇಳೆ ಜಲಾವೃತವಾಗುವ ಪ್ರದೇಶದ ನಿವಾಸಿಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದು. ಇದಕ್ಕೆ ಅವರ ಸಹಕಾರವೂ ಬೇಕು ಎಂದರು.

ಕೆಆರ್‌ಎಸ್‌ಗೆ ಬಾಗಿನ: ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ ಜಲಾಶಯ ತುಂಬಿದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೊದಲ ಬಾರಿಗೆ ಕಾವೇರಿ ಮಾತೆಗೆ ಬಾಗಿನ ಅರ್ಪಿಸಿದರು. ಈ ವೇಳೆ ಸ್ಥಳೀಯ ಶಾಸಕ ರವೀಂದ್ರ ಶ್ರೀಕಂಠಯ್ಯ, ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ಸಚಿವ ಮುನಿರತ್ನ, ಸಂಸದೆ ಸುಮಲತಾ ಅಂಬರೀಷ್, ಶಾಸಕರಾದ ಪುಟ್ಟರಾಜು, ಡಿ.ಸಿ ತಮ್ಮಣ್ಣ, ಸುರೇಶ್ ಗೌಡ, ಅನ್ನದಾನಿ, ಎಂ ಶ್ರೀನಿವಾಸ್, ನಾಗೇಂದ್ರ, ಶ್ರೀಕಂಠೇ ಗೌಡ ಸೇರಿದಂತೆ ಹಲವು ಜನಪ್ರತಿನಿಧಿಗಳು ಹಾಜರಿದ್ದರು. ಡಾ. ಭಾನುಪ್ರಕಾಶ್ ಶರ್ಮ ನೇತೃತ್ವದ ವೈದಿಕ ತಂಡ ಗಣಪತಿ ಪೂಜೆ, ಶುದ್ಧ ಪುಣ್ಯಾಹ, ಕಾವೇರಿ ಪೂಜೆ, ಬಾಗಿನಗಳಿಗೆ ಪೂಜೆ, ಕಾವೇರಿ ಸಹಿತ ಸಪ್ತ ನದಿಗಳಿಗೆ ವಿಶೇಷ ಪೂಜೆ ಸಲ್ಲಿಸಿದರು.

ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನವೆಂಬರ್ ತಿಂಗಳಿನಲ್ಲಿ ಅಪರೂಪವಾಗಿ ಕೃಷ್ಣರಾಜ ಸಾಗರ ತುಂಬಿದೆ. ಅಣೆಕಟ್ಟೆ ಕರ್ನಾಟಕದ ಆಸ್ತಿ ಇದನ್ನು ಸಮಗ್ರ ಕನ್ನಡಿಗರು ಉಳಿಸಿಕೋಂಡು ಹೋಗುವ ಜವಬ್ದಾರಿ ನಮ್ಮ ಅಧಿಕಾರಿಗಳು ಹಾಗೂ ರೈತರ ಮೇಲಿದೆ ಎಂದರು. ಮೊದಲ ಬಾರಿಗೆ ನಾನು ಕೆಆರ್‌ಎಸ್‌ಗೆ ಬಾಗಿನ ನೀಡಿದ್ದೇನೆ. ಇದು ನನ್ನ ಸೌಭಾಗ್ಯವಾಗಿದೆ. ಪ್ರತಿ ವರ್ಷವೂ ಇದೇ ರೀತಿ ಕಾವೇರಿ ತುಂಬಿ ಹರಿಯಲಿ. ಈ ನಾಡಿನ ರೈತರಿಗೆ ಅನುಕೂಲವಾಗಲೆಂದು ದೇವರಲ್ಲಿ ಪ್ರಾರ್ಥನೆ ಮಾಡುವುದಾಗಿ ತಿಳಿಸಿದರು.

ಕೆಆರ್‌ಎಸ್‌ಗೆ ಒಂದು ಇತಿಹಾಸ ಇದೆ, ಅವತ್ತಿನ ಮಹಾರಾಜರು ಮತ್ತು ಆಡಳಿತದ ವರು ಉತ್ತಮ ಕೆಲಸವನ್ನು ಮಾಡಿದ್ದಾರೆ, ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್.ಎಂ.ವಿಶ್ವೇಶ್ವರಯ್ಯ ಮನಸ್ಸು ಮಾಡದಿದ್ದರೆ ಮಂಡ್ಯ-ಮೈಸೂರು ಇಷ್ಟರಮಟ್ಟಿಗೆ ಇರುತ್ತಿರಲಿಲ್ಲ ಎಂದರು.

ನೀರಾವರಿ ಸಚಿವನಾಗಿದ್ದಾಗ ಗೇಟ್ ನೋಡಿದೆ, ಗೇಟ್‌ನಲ್ಲಿ ರಂಧ್ರಗಳಿದ್ದವು, ಡ್ಯಾಂಗೆ ೭೫ ವರ್ಷವಾಗಿದೆ, ಗೇಟ್ ಬದಲಾವಣೆ ಮಾಡಿಲ್ಲ, ಎರಡು ದಿನ ನನಗೆ ನಿದ್ದೆ ಬರಲಿಲ್ಲ, ಎಲ್ಲಾ ಮ್ಯಾಪ್ ತಯಾರು ಮಾಡಿ ಎಂದು ಹೇಳಿದ್ದೆ. ಡ್ಯಾಂ ಸುರಕ್ಷಿತೆಯಾಗಬೇಕಾದರೇ, ಗೇಟ್ ಸುರಕ್ಷಿತವಾಗಿರಬೇಕು ಎಂದು ಅವರು ಹೇಳಿದರು. ಮಹಾರಾಜರ ಕಾಲದಲ್ಲಿ ಕಟ್ಟಿದ ಅಣೆಕಟ್ಟೆಗಳಲ್ಲಿ, ೧೪ ಅಣೆಕಟ್ಟುಗಳು ನೆಲಸಮವಾಗಿವೆ, ೧೧ ಅಣೆಕಟ್ಟುಗಳನ್ನು ಅಧುನೀಕರಣ ಮಾಡಲಾಗಿದೆ ಎಂದರು. ಕಾವೇರಿ ಪೂಜೆ ಮಾಡುವಾಗ ಎಲ್ಲ ಶಾಸಕರು, ಮಂತ್ರಿಗಳು ಬಂದಿದ್ದಾರೆ, ತುಂಬಾ ಸಂತೋಷವಾಗಿದೆ, ಹಲವು ಯೋಜನೆಗಳನ್ನು ಪೂರ್ಣಗೊಳಿಸಲು ಹೆಚ್ಚಿನ ಪ್ರಾಮುಖ್ಯತೆ ಕೊಡುವುದಾಗಿ ಸಿಎಂ ತಿಳಿಸಿದರು. ಅಲಂಕೃತವಾದ ಮಂಟಪಗಳಿAದ ಜಲಾಶಯವನ್ನು ಶೃಂಗರಿಸಿ, ಚಂಡೆ, ಮಂಗಳವಾದ್ಯದ ಮೂಲಕ ಬಾಗಿನ ಅರ್ಪಣೆಗೆ ಮುಖ್ಯಮಂತ್ರಿಗಳನ್ನು ಶಾಸಕ ಅನಿಲ್ ಚಿಕ್ಕಮಾದು ಬರಮಾಡಿಕೊಂಡರು. ಕಬಿನಿ ಜಲಾಶಯದ ಅಣೆಕಟ್ಟು ನಿರ್ಮಾಣಕ್ಕೆಂದು ಬಂದAತಹ ಕೂಲಿಕಾರ್ಮಿಕರು ಹಲವಾರು ವರ್ಷಗಳಿಂದ ಬೀಚನಹಳ್ಳಿ ಗ್ರಾಮದಲ್ಲಿ ಸಣ್ಣಪುಟ್ಟ ಶೆಡ್ ನಿರ್ಮಾಣ ಮಾಡಿಕೊಂಡು ವಾಸಿಸುತ್ತಿದ್ದಾರೆ. ಅವರಿಗೆ ಶಾಶ್ವತ ವಸತಿ ಸೌಕರ್ಯ ಅಥವಾ ಅವರು ವಾಸಿಸುತ್ತಿರುವ ಮನೆಗಳಿಗೆ ಹಕ್ಕುಪತ್ರ ಕೊಡಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಇದೇ ವೇಳೆ ಶಾಸಕರು ಮನವಿ ಸಲ್ಲಿಸಿದರು.

Translate »